ಲೋಕದರ್ಶನ ವರದಿ
ಕೊಪ್ಪಳ 21: ಜಿಲ್ಲೆಯ ಯಲಬುಗರ್ಾ ತಾಲೂಕಿನ ಇಟಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಜರುಗುವ 15ನೇ ಇಟಗಿ ಉತ್ಸವದಲ್ಲಿ ಆಯೋಜಿಸಿರುವ 7ನೇ ಕವಿ ಸಮ್ಮೇಳನದ ಸವರ್ಾಧ್ಯಕ್ಷತರಾದ ಅನ್ನಪೂರ್ಣಮ್ಮ ಮನ್ನಾಪೂರ ರವರಿಗೆ ಕೊಪ್ಪಳದ ಅವರ ನಿವಾಸಕ್ಕೆ ತೆರೆಳಿ ಸನ್ಮಾನಿಸಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನವನ್ನು ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನಗೆ ನೀಡಿರುವ ಜವಾಬ್ದಾರಿಯನ್ನು ವೇದಿಕೆಯ ಪದಾಧಿಕಾರಿಗಳ ಸಹಯೋಗ ಮತ್ತು ಹಿರಿಯ ಸಾಹಿತಿ ಕವಿಗಳ ಮಾರ್ಗದರ್ಶದಲ್ಲಿ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದ, ಅವರು ಜನವರಿ 3 ರಂದು ಜರಗಲಿರುವ ಕವಿ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತಿ ಕವಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಹಾಗೂ ಕವಿ ಸಮ್ಮೇಳನ ಯಶಸ್ವಿಗೊಳಿಸಲು ಸವರ್ಾಧಕ್ಷ್ಷೆ ಅನ್ನಪೂರ್ಣಮ್ಮ ಮನ್ನಾಪೂರ ವಿನಂತಿಸಿದರು.
ಅಧಿಕೃತ ಆಹ್ವಾನ ನೀಡುವ ಸಮಾರಂಭದ ಅಧ್ಯಕ್ಷತೆಯನ್ನು ನಾಗರಕರ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕ್ರಮ ಸಂಘಟಕ ಮಹೇಶ ಬಾಬು ಸುವರ್ೆ ವಹಿಸಿದ್ದರು. ಹಿರಿಯ ಸಾಹಿತಿ ಡಾ. ಮಾಹಾಂತೇಶ್ ಮಲ್ಲನಗೌಡ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಉತ್ಸವ ಮತ್ತು ಕವಿ ಸಮ್ಮೇಳನ ಕುರಿತು ಮಾತನಾಡಿದರು. ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷ ಜಿ.ಎಸ್.ಗೋನಾಳರವರು ಆರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಬಿ.ಜಿ.ದಿವಟರ್, ಶಾರದ ದಿವಟರ್, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ಗವಿಸಿದ್ದಪ್ಪ ಕಾಟ್ರಳ್ಳಿ, ಸಿದ್ದಲಿಂಗಪ್ಪ ಹಡಪದ ಭಾನಾಪೂರ, ಹನುಮಂತಪ್ಪ ಹಡಪದ ದದೇಗಲ್, ಸುರೇಶ್ ಹಡಪದ ಕೊಪ್ಪಳ ವೇದಿಕೆಯ ಪ್ರಮುಖ ಪದಾಧಿಕಾರಿ ಉಮೇಶ್ ಪೂಜಾರ, ರವಿ ನಾಯಕ, ವೈ.ಬಿ.ಜೂಡಿ ಹಾಗೂ ರತ್ನಾ ಜಿ. ಗೋನಾಳ ಸೇರಿದಂತೆ ಮನ್ನಾಪೂರ ಕುಟುಂಬದ ಸದಸ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.