ಲೋಕದರ್ಶನ ವರದಿ
ಹಾವೇರಿ31: ಭೂಮಿಯಲ್ಲಿ ಬಿತ್ತಿದ ಬೀಜ ಹಲವು ಅಡೆತಡೆಗಳನ್ನು ದಾಟಿ ಮೇಲಕ್ಕೆ ಬಂದು ಬೆಳೆಯಾಗುವಂತೆ, ವ್ಯಕ್ತಿ ಸಮಾಜಮುಖಿ ಕೆಲಸಗಳನ್ನು ಮಾಡುವಾಗ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಉನ್ನತ ಸ್ಥಾನಕ್ಕೆ ಬಂದಾಗ ಅದು ನಿಜವಾದ ಸಾಧನೆಯಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠ ದಾಸೋಹ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ನೂತನ ಶಾಸಕರಾದ ನೆಹರೂ ಓಲೇಕಾರ ಹಾಗೂ ವಿರುಪಾಕ್ಷಪ್ಪ ಬಳ್ಳಾರಿ ಮತ್ತು ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ವಾಯ್.ಬಿ ಆಲದಕಟ್ಟಿ ಅವರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಜನಪರ ಮತ್ತು ಜನಮುಖಿ ಕಾರ್ಯಗಳನ್ನು ಮಾಡಿದಾಗ ಜನರ ಮನಸ್ಸಿಗೆ ಹತ್ತಿರವಾಗುತ್ತಾರೆ. ಸಕರ್ಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲಪುವಂತೆ ಮಾಡುವದು ನಿಜವಾದ ಜನಪ್ರತಿನಿಧಿಯ ಕಾರ್ಯವಾಗಿದ್ದು, ಬಡ ದೀನ ದಲಿತರ ಸೇವೆಯೇ ಜನಾರ್ಧನನ ಸೇವೆ ಎಂದು ಹೇಳಿದರು.
ಸಮಾಜದಲ್ಲಿ ಶಿಕ್ಷಕರಿಗೆ ಉನ್ನತವಾದ ಸ್ಥಾನವಿದ್ದು ನಿಸ್ಪೃಹವಾದ ಸೇವೆ ಮಾಡುವದರ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲಬೇಕು. ವಿದ್ಯಾಥರ್ಿಗಳು ಸಮಾಜದ ಆಸ್ತಿಯಾದರೆ ಅದರ ಎಲ್ಲ ಶ್ರೇಯಸ್ಸು ಕಲಿಸಿದ ಶಿಕ್ಷಕನಿಗೆ ಸಲ್ಲುತ್ತದೆ. ಅದು ನಿಜವಾದ ಸಾರ್ಥಕ ಸೇವೆ ಎಂದು ಹೇಳಿದರು.
ಜಿಲ್ಲಾ ಕಸಾಪದಿಂದ ಅಭಿನಂದನೆ ಸ್ವೀಕರಿಸಿದ ಹಾವೇರಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದು ಜನರ ಋಣ ತೀರಿಸುವದು ನನ್ನ ಕರ್ತವ್ಯವಾಗಿದ್ದು, ಹಾವೇರಿ ನಗರ ಮತ್ತು ತಾಲೂಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ನಿರಂತರ 24*7 ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆ ನನ್ನ ಮೊದಲ ಆದ್ಯತೆಯಾಗಿದ್ದು ಶೀಘ್ರದಲ್ಲಿ ಹೆಗ್ಗೇರಿ ಕೆರೆ ನೀರು ತುಂಬಿಸಲಾಗುವದು. ಜಿಲ್ಲಾ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ಜಾಗ ಮತ್ತು ಕಟ್ಟಡಕ್ಕೆ ಅನುದಾನವನ್ನು ನೀಡಲಾಗುವದು ಎಂದು ಹೇಳಿದರು.
ಇನ್ನೋರ್ವ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ದೇವಿಹೊಸೂರಿನ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಮೇಲ್ದಜರ್ೆಗೆ ಏರಿಸಲು ಪ್ರಯತ್ನಿಸಲಾಗುವದು. ದೇವಗಿರಿಯ ಇಂಜನೀರಿಂಗ್ ಕಾಲೇಜಿಗೆ ಮೂಲಭೂತ ಸೌಕರ್ಯ ನೀಡಲು ಸಕರ್ಾರದ ಗಮನ ಸೆಳೆಯಲಾಗುವದು ಎಂದು ಹೇಳಿದರು. ಬಜೆಟ್ ನಲ್ಲಿ ನಮಗೆ ಅನ್ಯಾಯವಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚು ಅನುದಾನ ನೀಡುವ ವಿಶ್ವಾಸ ಇದೆ ಎಂದು ಹೇಳಿದರು.
ಪ್ರಾಚಾರ್ಯರಾಗಿ ವಯೋನಿವೃತ್ತಿ ಹೊಂದಿದ ವಾಯ್.ಬಿ ಆಲದಕಟ್ಟಿ ಮಾತನಾಡಿ, ವೃತ್ತಿ ಸೇರಿದಾಗ ನಿವೃತ್ತಿ ಕಡ್ಡಾಯವಾಗಿದ್ದು, ಸೇವಾ ಸಮಯದಲ್ಲಿ ವಿದ್ಯಾಥರ್ಿಗಳಿಗೆ ನಿಸ್ವಾರ್ಥದಿಂದ ಬೋಧನೆ ಮಾಡಿದ್ದು, ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡುತ್ತಿರುವದು ಜೀವನದಲ್ಲಿ ಸಾರ್ಥಕ ಭಾವ ಉಂಟಾಗುತ್ತದೆ ಎಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಸಿ.ಎಸ್ ಮರಳಿಹಳ್ಳಿ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಇವುಗಳ ಮದ್ಯೆ ಜೀವನ ಅಮೂಲ್ಯ. ವ್ಯಕ್ತಿಯ ನಿಜವಾದ ಗುಣ ಅರಿವಾಗುವದು ಆತನಿಗೆ ಅಧಿಕಾರ ನೀಡಿದಾಗ ಮಾತ್ರ. ಅಧಿಕಾರವನ್ನು ಜನರ ಕಲ್ಯಾಣಕ್ಕೆ ಉಪಯೋಗಿಸಿದಾಗ ಆತ ಜನನಾಯಕನಾಗುತ್ತಾನೆ.
ಶಿಕ್ಷಕ ತನ್ನ ಸೇವೆಯಲ್ಲಿ ಹೇಗೆ ಬೋಧನೆ ಮಾಡಿದ ಎಂದು ತಿಳಿಯಬೇಕಾದರೆ ಆತನ ನಿವೃತ್ತಿ ದಿನ ಗೊತ್ತಾಗುತ್ತದೆ. ಶಿಷ್ಯ ಬಳಗ ಆತ್ಮೀಯವಾಗಿ ಬೀಳ್ಕೊಟ್ಟರೆ ಆತನ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಶಾಸಕರಾದ ನೆಹರೂ ಓಲೆಕಾರ ಮತ್ತು ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ನಿವೃತ್ತ ಪ್ರಾಚಾರ್ಯ ವಾಯ್.ಬಿ ಆಲದಕಟ್ಟಿ ಅವರನ್ನು ಜಿಲ್ಲಾ ಕಸಾಪದಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪದ ಅಧ್ಯಕ್ಷ ಲಿಂಗಯ್ಯ ಹಿರೇಮಠ ವಹಿಸಿದ್ದರು.
ಸಮಾರಂಭದಲ್ಲಿ ಶಿವಲಿಂಗೇಶ್ವರ ವಿದ್ಯಾಪೀಠ ಚೇರಮನ್ನ ಎಸ್.ಎಸ್ ಮುಷ್ಠಿ, ಸಾಹಿತಿ ಕೋರಗಲ್ಲ ವಿರುಪಾಕ್ಷಪ್ಪ, ಕದಳಿ ವೇದಿಕೆ ಅಧ್ಯಕ್ಷೆ ದಾಕ್ಷಾಯಣಿ ಗಾಣಗೇರ, ಅಕ್ಕನ ಬಳಗದ ಲಲಿತಕ್ಕ ಹೊರಡಿ, ಸಿ.ಜಿ ತೋಟಣ್ಣನವರ, ಎಸ್.ಎನ್ ದೊಡ್ಡಗೌಡರ, ಬಿ.ಪಿ ಶಿಡೇನೂರ, ಪೃಥ್ವಿರಾಜ ಬೆಟಗೇರಿ, ಬಿ.ಎಂ ಮಠ, ನಾರಾಯಣ ಸಾ ಬಾಂಡಗೆ, ಅಜ್ಜನಗೌಡರ ಗೌಟಪ್ಪನವರ, ಸುರೇಶ ಕಲ್ಮನಿ, ಎಫ್.ಬಿ ಮರಡೂರ, ಜಿ.ಎನ್ ಹೂಗಾರ, ರೇಣುಕಾ ಗುಡಿಮನಿ, ವಿ.ಪಿ ದಾಮಣ್ಣನವರ, ಶಂಕರ ಸುತಾರ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಅಕ್ಕಮ್ಮಾ ಮುದ್ದಿ ಸ್ವಾಗತಿಸಿದರು. ತಾಲೂಕಾ ಕಸಾಪ ಕಾರ್ಯದಶರ್ಿ ಎಸ್.ಸಿ ಮರಳಿಹಳ್ಳಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ದೇಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಎಸ್.ಎಂ ಬಡಿಗೇರ ವಂದಿಸಿದರು.