ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಲು ಮುಂದಾದರೇ ಖಂಡಿಸಲೇಬೇಕು



ಲೋಕದರ್ಶನ ವರದಿ

ಗದಗ 31:ಸಂವಿಧಾನವು ವ್ಯಕ್ತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದೆ.ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಲು  ಮುಂದಾದರೇ ಖಂಡಿಸಲೆಬೇಕು ಎಂದು ಡಾ.ಜಿ.ಬಿ.ಪಾಟೀಲ ಹೇಳಿದರು.

ಗದಗ-ಬೆಟಗೇರಿ ನಗರದ ನರಸಾಪೂರದ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಮ್ಮಿಕೊಂಡಿದ್ದ ಕೆ.ಬಿ.ತಳಗೇರಿಯವರ ಸಾಹಿತ್ಯ-ಬದುಕು ಸಾಧಕರ ಜೊತೆಗೆ ಸಂವಾದ ಮತ್ತು ಜಿಲ್ಲಾ ಕವಿಗೋಷ್ಠಿಯ ಉದ್ವಾಟನೆ ನೇರವೇರಿಸಿ ಅವರು ಮಾತನಾಡಿದರು.

ಕೊಪ್ಪಳದ ಕವಿ ಸಿರಾಜ್ ಬಿಸರಳ್ಳಿ ಅವರು ನಿನ್ನ ದಾಖಲೆ ಕೊಡು ಕವನವನ್ನು ಓದಿದ ಕಾರಣಕ್ಕೆ ಪ್ರಕರಣವನ್ನು ದಾಖಲಿಸಿರುವದು ವ್ಯಕ್ತಿಯ ಅಭಿಪ್ರಾಯಗಳು ದಮನ ರೀತಿಯಲ್ಲಿ ಸರಿಯಾಗಿಲ್ಲ. ಕುವೆಂಪು ಸರಕಾರದ ವಿರುದ್ದವೇ ಬರೆದಿದ್ದರೂ, ಆಗಿನ ಅಧಿಕಾರದಲ್ಲಿದ್ದವರು ಸಹಿಸಿಕೊಂಡು ಸುಮ್ಮನಿದ್ದರು. ಕವಿಗಳಿಗೆ ದೊಡ್ಡ ಗೌರವ ನೀಡಿರುವದು  ನಮ್ಮ ನಾಡಿನ ಹೆಮ್ಮೆಯ ವಿಷಯವಾಗಿದೆ.ಪ್ರಾಚೀನ ಕಾಲದಿಂದಲೂ ಅಧಿಕಾರದ ವಿರುದ್ದ ಕಾವ್ಯವು ಬಂದಿದೆ. ಇಂತಹ ನಾಡಿನಲ್ಲಿ ಕವಿಯ ಮೇಲಿನ ಪ್ರಕರಣವು ಸರಿಯಲ್ಲ ಎಂದು ಡಾ.ಜಿ.ಬಿ.ಪಾಟೀಲ ಅಭಿಪ್ರಾಯಪಟ್ಟರು.

ಕೆ.ಬಿ.ತಳಗೇರಿ ಮಾತನಾಡಿ ನಿಕೃಷ್ಠವಾದ ಬದುಕಿನಿಂದ ಉನ್ನತವಾದ ಜೀವನದಲ್ಲಿ ಪಾದಾರ್ಪಣೆ ಮಾಡಿದ್ದೇನೆ. ಅಲಂಕರಿಸಿದ ಸ್ಥಾನಕ್ಕೆ ನ್ಯಾಯ ಒದಗಿಸಲು ಕೆಲಸವನ್ನು ಮಾಡಬೇಕು. ನಿರಂತರ ಓದು, ಪ್ರಾಮಾಣಿಕತೆಗಳು ವ್ಯಕ್ತಿಯು ಉನ್ನತ ಸ್ಥಾನಕ್ಕೆ ಏರಲು ಸಹಾಯಕವಾಗಿವೆ.ಬಡತನವು ಶಾಪವಲ್ಲ,ಬಡತನದಿಂದ ಕಷ್ಠಕರ ಜೀವನ ನಡೆಸಿ ಮೇಲೇರಿ ಸಿರಿವಂತರಾಗುವದು ತಪ್ಪಲ್ಲ.ವಿದ್ಯಾಥರ್ಿಗಳ ಜೊತೆಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮುಂದಾಗಬೇಕು.ಪ್ರತಿಭಾವಂತಿಕೆಯ ಕೊಲೆಯು ಯಾವದೇ ಕಾಲಕ್ಕೆ ಸಲ್ಲದು.ಚಿಕ್ಕವನು ಆಗಿದ್ದಾಗ ತಾಯಿಯನ್ನು ಕಳೆದುಕೊಂಡೆ, ತಂದೆ ಮಾಡಿದ ಸಾಲವನ್ನು ತೀರಿಸಲು ಉನ್ನತ ಶಿಕ್ಷಣ ಪಡೆಯುವದು ಸಾಧ್ಯವಾಗಲಿಲ್ಲ.ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿದೆ ಎಂದರು.

ಡಾ.ಆರ್.ಕೆ.ಕಲ್ಲನಗೌಡರ ಕೆ.ಬಿ.ತಳಗೇರಿಯವರ ಬದುಕು-ಬರಹದ ಕುರಿತು ಮಾತನಾಡಿ ಬದುಕು ಸಮಾಜಕ್ಕಾಗಿ ಸಮಪರ್ಿಸಿಕೆಂಡಾಗ ಗೌರವವು ಸಿಗುತ್ತದೆ. ವಿದ್ಯಾಥರ್ಿಗಳಲ್ಲಿ ಸಾದಿಸುವ ಛಲವು ಈ ಹೊತ್ತಿಗೆ ಕಡಿಮೆಯಾಗುತ್ತಿರುವದು ಖೇದಕರವಾಗಿದೆ. ವ್ಯಕ್ತಿಗಳು ನಿರಂತರವಾಗಿ ಕ್ರೀಯಾಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾ ಹೋದರೇ ನಿಜವಾದ ವೃತ್ತಿ ಜೀವನನದಲ್ಲಿ ಸಾಧನೆ ಮಾಡಬಹುದು.ಮೋಹನ ತರಂಗಿಣಿ, ರಾಮಧ್ಯಾನ ಚರಿತೆಯ ಮೇಲೆ ಮಾಡಿರುವ ಸಾಹಿತ್ಯಕ ಕೆಲಸವು ಅಧ್ಭುತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಬಡಿಗೇರ ಮಾತನಾಡಿ ಕಾವ್ಯಕ್ಕೆ ಮಾತೃಹೃದಯವಿದ್ದಾಗ ಜನಮನವನ್ನು ತಲುಪಲು ಸಾದ್ಯವಾಗುತ್ತದೆ. ಕವಿತೆಯಲ್ಲಿ ಕವಿ ಇರಬೇಕು,ಕವಿಯಲ್ಲಿ ಕವಿತೆ ಇದ್ದಾಗಲೇ ಕಾವ್ಯವು ಸೃಷ್ಠಿಯಾಗುತ್ತದೆ. ಕುವೆಂಪು ರಾಜರ ಮನೆಗೆ ಪಾಠ ಮಾಡಲು ಹೋಗದೇ ಧಿಕ್ಕರಿಸಿದರು. ಪ್ರಶಸ್ತಿಗೆ ಕೈಚಾಚದೇ ಕಾವ್ಯವನ್ನು ಬರೆದಾಗ ನಿಜವಾದ ಕಾವ್ಯವು ಹುಟ್ಟುತ್ತದೆ ಎಂದರು.

ಆಶಯ ನುಡಿಗಳು ಆಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಮಾತನಾಡಿ ಗದಗ ಜಿಲ್ಲೆಯು ಕನರ್ಾಟಕ ಉದಯವಾಗಲಿ ಹೋರಾಟದ ಕಣವಾಗಿತ್ತು. ಕುಮಾರವ್ಯಾಸ, ನಯಸೇನ, ಅಂದಾನಪ್ಪ ದೊಡ್ಡಮೇಟಿ, ಸಹಕಾರಿ ಸಿದ್ದನಗೌಡ ಪಾಟೀಲರನ್ನು ನೀಡಿದೆ ಎಂದರು.

ಅಂದಾನೆಪ್ಪ ವಿಭೂತಿ, ಡಾ.ಎಸ್.ಎಫ್.ಸಿದ್ನೇಕೊಪ್ಪ ಮಾತನಾಡಿದರು. ಕವಿಗೋಷ್ಠಿಯಲ್ಲಿ ಪಿ.ಬಿ.ಕರಾಟೆ, ಮಲ್ಲೇಶ ಡಿ.ಎಚ್. ಶಿಲ್ಪಾ ಮ್ಯಾಗೇರಿ, ಶ್ವೇತಾ ಕೊಟಗಿ,  ವಸಂತ ಮಲ್ಲಾಪೂರ,  ಲಾಡ್ಮಾ ನದಾಫ್, ಎಸ್.ಜಿ.ಮಣ್ಣುರುಮಠ, ನಾಗರಾಜ ಹಣಗಿ,  ಮಹೇಶ ಪಾಟೀಲ, ಹು.ಬಾ.ವಡ್ಡಟ್ಟಿ, ಅನುಸೂಯಾ ಮಿಟ್ಟಿ, ವಿಜಯಲಕ್ಷ್ಮೀ ಅಕ್ಕಿ,  ಕಾಶೀನಾಥ ಬಿಳಿಮಗ್ಗದ,  ಸಂಗೀತಾ ಹಡಪದ ಕವನ ವಾಚಿಸಿದರು. ಲಾಡ್ಮಾ ನದಾಫ್ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿದರ್ೇಶಕ ವೀರಯ್ಯಸ್ವಾಮಿ ಬಿ.ಸ್ವಾಗತಿಸಿದರು.