ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಾಗ ಮಹಾತ್ಮರ ಜಯಂತಿ ಆಚರಿಸಿದಕ್ಕೂ ಸಾರ್ಥಕ
ಸಿಂದಗಿ 15; ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ತಾಲೂಕಾ ಆಡಳಿತವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 134ನೇ ಜಯಂತ್ಯುತ್ಸವ ನಿಮಿತ್ಯವಾಗಿ ಧಮ್ಮ ವಿಜಯ ಬುದ್ಧವಿಹಾರ ಸಿಂದಗಿ ಉಪಾಸಕ ಉಪಾಸಕಿಯರಿಂದ ಗೌರವ ನಮನ ಸಲ್ಲಿಸಿದರು. ಭಂತೆ ಸಂಘಪಾಲ ಇವರ ಸಮ್ಮುಖದಲ್ಲಿ ಬುದ್ಧ ವಂದನೆ, ಪಂಚಶೀಲ ಹೇಳಿದರು.
ಶಾಸಕ ಅಶೋಕ ಮನಗೂಳಿ ಅವರು ಡಾ. ಅಂಬೇಡ್ಕರ ಅವರ ಪುತ್ತಳಿಗೆ ಮಾಲಾರೆ್ಣ ಸಲ್ಲಿಸಿ ಮಾತನಾಡಿ, ಜಗತ್ತಿನ ಅನೇಕ ಜನ ಸಾಯುತ್ತಾರೆ ಹುಟ್ಟುತ್ತಾರೆ ಆದರೆ ಕೆಲವರು ಸತ್ತರು ಜನರ ಮಧ್ಯದಲ್ಲಿ ಬದುಕುತ್ತಾರೆ. ಅಂತಹ ಮಹಾನ ಸಾಧಕರ ಜಯಂತಿ ಮತ್ತು ಪುಣ್ಯ ತಿಥಿಗಳನ್ನು ಆಚರಣೆ ಮಾಡಿಕೊಂಡು ಆದರ್ಶ ಪ್ರಾಯರಾಗುತ್ತಾರೆ ಅವರ ತತ್ವದಾರ್ಶಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು ಮಹಾಪುರುಷರ ಜಯಂತಿ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು, ಪಟ್ಟಣದಲ್ಲಿರುವ ಅಂಬೇಡ್ಕರ ಭವನದ ನವೀಕರಣಕ್ಕೆ ರೂ 2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೆ ಸ್ಥಾಪನೆಗೊಳ್ಳುತ್ತಿರುವ ಬುದ್ಧ ವಿಹಾರಕ್ಕೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಜಯಂತಿಯನ್ನು ಪಕ್ಷಾತೀತವಾಗಿ ಎಲ್ಲರು ಆಚರಣೆ ಮಾಡಿದ್ದು ಸ್ವಾಗತಾರ್ಹ. ಅವರ ಚಿಂತನೆಗಳು ಮುಂದಿನ ಯುವ ಪಿಳಿಗೆಗೆ ರವಾನೆ ಆಗಬೇಕಾದರೆ ಹೆಚ್ಚು ಹೆಚ್ಚು ಗ್ರಂಥಾಲಯಗಳು ತೆರೆಯುವ ಮೂಲಕ ಅವರ ತತ್ವಗಳು ಬಿತ್ತಬೇಕಾಗಿದೆ ಎಂದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಡಾ. ಅಂಬೇಡ್ಕರಜಿಯವರ 134ನೇ ಜಯಂತ್ಯೋತ್ಸವವನ್ನು 5 ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡಲು ಸಹಕರಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಅಭಿನಂದಿಸಿದರು.
ಬಿಜೆಪಿ ಮಂಡಲ ಅದ್ಯಕ್ಷ ಸಂತೋಷ ಪಾಟೀಲ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಕೃಷಿ ಅಧಿಕಾರಿ ಡಾ.ಎಚ್.ವಾಯ್.ಸಿಂಗೆಗೋಳ, ಸಿಪಿಐ ನಾನಾಗೌಡ ಪೊಲೀಸಪಾಟೀಲ, ಬಿಇಓ ಮಹಾಂತೇಶ ಯಡ್ರಾಮಿ, ಪಿ.ಎಸ್.ಆಯ್. ಆರೀಫ ಮುಶಾಪೀರ, ಹೆಸ್ಕಾಂ ಅಧಿಕಾರಿಚಂದ್ರಕಾಂತ ನಾಯಕ, ಮಹಾನಂದಾ ಬಮ್ಮಣ್ಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರ, ಮಹಿಳಾ ಅಧ್ಯಕ್ಷೆ ಜಯಶ್ರೀ ಹದನೂರ, ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಶಿಂಗೆ ಜೆಡಿಎಸ್ ಅದ್ಯಕ್ಷ ಎಂ.ಎನ್.ಪಾಟೀಲ, ಪರಸುರಾಮ ಕಾಂಬಳೆ, ತಿರುಪತಿ ಬಂಡಿವಡ್ಡರ, ರಮೇಶ ನಡುವಿನಕೇರಿ, ಸೇರಿದಂತೆ ಹಲವು ಅಧಿಕಾರಿಗಳು ಪೂಜೆ ಕಾರ್ಯಕ್ರಮದಲ್ಲಿ ಇದ್ದರು.