ಪಾಕಿಸ್ತಾನದಲ್ಲಿನ ವ್ಯವಹಾರಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದು ಅಸ್ಪಷ್ಟ: ಮೋದಿ


ನವದೆಹಲಿ, ಏ 5 ಪಾಕಿಸ್ತಾನದಲ್ಲಿ ನಿಜವಾಗಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಭಾರತ-ಪಾಕಿಸ್ತಾನದ ಉತ್ತಮ ಬಾಂಧವ್ಯಕ್ಕೆ ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್  ಹಾಗೂ ಮಾಜಿ ಪ್ರಧಾನಿ ನವಾಜ್ ಶರೀಫ್ ಇಬ್ಬರಲ್ಲಿ ಯಾರು ಸರಿ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪಾಕಿಸ್ತಾನದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದನ್ನು ನಿರ್ಧರಿಸಲು ಅಲ್ಲಿನ ನಾಗರಿಕರಿಗೆ ಬಿಡಿ. ನಮ್ಮ ದೇಶದ ಹಿತ ಕಾಯುವುದು ನನ್ನ ಜವಾಬ್ದಾರಿ. ಪಾಕಿಸ್ತಾನದ ವ್ಯವಹಾರಗಳನ್ನು ನಡೆಸುವುದು ನನ್ನ ಜವಾಬ್ದಾರಿ ಅಲ್ಲ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.  

ಹಾಲಿ ಪ್ರಧಾನಿ ಇಮ್ರಾನ್ ಖಾನ್, ಮಾಜಿ ಪ್ರಧಾನಿ ನವಾಜ್ ಶರೀಫ್ ಗಿಂತ ಚಾಲಾಕಿಯಾಗಿದ್ದಾರೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಅವರು (ಇಮ್ರಾನ್ ಖಾನ್) ಏನು ಮಾಡುತ್ತಾರೆ ಅಥವಾ ಇಲ್ಲ ಎಂಬುದನ್ನು ನಿರ್ಧರಿಸಲು ಪಾಕಿಸ್ತಾನದ ಜನರಿಗೆ ಬಿಡಿ ಎಂದರು. ನಾನು ಅನೇಕ ಜಾಗತಿಕ ನಾಯಕರೊಂದಿಗೆ ಮಾತನಾಡಿದ್ದೇನೆ. ಅವರು ಏನು ಹೇಳಿದ್ದಾರೋ ನಾನು ಕೂಡ ಅದನ್ನೇ ಭಾವಿಸಿದ್ದೇನೆ. ಪಾಕಿಸ್ತಾನದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದು ಅರ್ಥ ಮಾಡಿಕೊಳ್ಳುವುದು ಇಡೀ ವಿಶ್ವಕ್ಕೆ ಕಠಿಣವಾಗಿದೆ. ಪಾಕಿಸ್ತಾನದ ವ್ಯವಹಾರಗಳನ್ನು ಸಕರ್ಾರ ನಿರ್ವಹಿಸುತ್ತಿದೆಯೋ ಅಥವಾ ಸೇನೆ ಅಥವಾ ಐಎಸ್ಐ ನಡೆಸುತ್ತಿದೆಯೋ ಅಥವಾ ಪಾಕಿಸ್ತಾನದಿಂದ ಪಲಾಯನಗೊಂಡು ಪಶ್ಚಿಮ ದೇಶಗಳಲ್ಲಿ ಆಶ್ರಯ ಪಡೆದಿರುವ ಕೆಲ ನಾಯಕರು ನಿಯಂತ್ರಿಸುತ್ತಿದ್ದಾರೆಯೋ ಎಂಬುದು ಸ್ಪಷ್ಟವಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು. ಭಾರತದೊಂದಿಗಿನ ಸಂಬಂಧಗಳನ್ನು ಬಲಪಡಿಸಲು ಪಾಕಿಸ್ತಾನ ಏನು ಮಾಡಬೇಕು ಎಂಬ ಪ್ರಶ್ನೆಗೆ " ಇದು ತುಂಬ ಸರಳ ಹಾಗೂ ಸುಲಭವಾಗಿದೆ. ಭಯೋತ್ಪಾದನೆಯನ್ನು ರಫ್ತು ಮಾಡುವುದು ಪಾಕಿಸ್ತಾನ ಮೊದಲು ನಿಲ್ಲಿಸಬೇಕು" ಎಂದು ಮೋದಿ ಹೇಳಿದರು. ಭಾರತ ಹಾಗೂ ಚೀನಾ ನಡುವಿನ ಸಂಬಂಧಗಳ ಕುರಿತು ಮಾತನಾಡಿದ ಮೋದಿ, ಉಭಯ ದೇಶಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಭಿನ್ನಾಭಿಪ್ರಾಯಗಳನ್ನು ವಿವಾದವನ್ನಾಗಿ ಸೃಷ್ಟಿಸದಿರಲು ನಾವು ನಿರ್ಧರಿಸಿದ್ದೇವೆ ಎಂದರು. ಪ್ರತಿಪಕ್ಷಗಳು ಪಾಕಿಸ್ತಾನದ ಮೇಲೆ ವಾಯುಸೇನೆ ನಡೆಸಿದ ದಾಳಿಯ ಸಾಕ್ಷ್ಯ ಕೇಳುತ್ತಿರುವುದಕ್ಕೆ "ಪಾಕಿಸ್ತಾನವೇ ಇದಕ್ಕೆ ದೊಡ್ಡ ಸಾಕ್ಷಿಯಾಗಿದೆ. ನಾವು ಏನೂ ಹೇಳಿಲ್ಲ. ನಾವು ನಮ್ಮ ಕೆಲಸ ಮಾಡಿ ಶಾಂತವಾಗಿದ್ದೇವೆ. ಆದರೆ, ಪಾಕಿಸ್ತಾನವೇ ಮೊದಲು ನಾವು ದಾಳಿ ಮಾಡಿರುವುದಾಗಿ ಹೇಳಿದೆ" ಎಂದು ಮೋದಿ ಉತ್ತರಿಸಿದರು. 

"ಎಷ್ಟು ಜನ ಭಯೋತ್ಪಾದಕರು ಸತ್ತಿದ್ದಾರೆ ಅಥವಾ ಇಲ್ಲ ಎಂಬುದನ್ನು ಚಚರ್ಿಸುತ್ತಿರುವ ಜನರಿಗೆ ಮುಂದುವರಿಯಲು ಬಿಡಿ. ನಾವೇನು ಅಲ್ಲಿನ ನಾಗರಿಕರ ಮೇಲೆ ಹಲ್ಲೆ ನಡೆಸಿದ್ದೇವೆಯೇ ?. ಒಂದು ವೇಳೆ ಹೀಗಾಗಿದ್ದರೆ ಪಾಕಿಸ್ತಾನ ಕಿರುಚಾಡಿ ಭಾರತಕ್ಕೆ ಅಪಮಾನ ಮಾಡಲು ಪ್ರಯತ್ನಿಸುತ್ತಿತ್ತು." ಎಂದರು. 

ಆದರೆ, ಇದು ನಮ್ಮ ರಣತಂತ್ರವಾಗಿದೆ ಹೊರತು ನಾಗರಿಕರಿಗೆ ಹಾನಿ ಮಾಡುವುದಲ್ಲ. ವಾಯು ಸೇನೆ ತಮ್ಮ ಕೆಲಸ ಮಾಡಿದೆ. ಆದರೆ, ನಮ್ಮ ದೇಶದಲ್ಲಿನ ಕೆಲವರು ಪಾಕಿಸ್ತಾನವನ್ನು ಸಂತುಷ್ಟಪಡಿಸುವ ಮಾತುಗಳನ್ನು ಏಕೆ ಆಡುತ್ತಿದ್ದಾರೆ. ಇದು ತುಂಬ ಕಳವಳಕಾರಿ ಸಂಗತಿ ಎಂದು ಮೋದಿ ಹೇಳಿದರು. ರಾಹುಲ್ ಗಾಂಧಿಯವರು ಎರಡು ಕ್ಷೇತ್ರಗಳಿಂದ ಸ್ಪಧರ್ಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋದಿ, "ಅದು ಅವರ ಪಕ್ಷದ ನಿಧರ್ಾರ. ಆದರೆ, ಅಮೇಥಿಯಲ್ಲಿ ಸ್ಪರ್ಧಿಸುತ್ತಿದ್ದರು . ವಯನಾಡ್ ದಿಂದ ಕಣಕ್ಕಿಳಿದಿರುವ ರೀತಿ ಬಹಳ ಮುಖ್ಯವಾಗಿದೆ. ಇದರ ಬಗ್ಗೆ ನಾವು ಚಚರ್ೆ ನಡೆಸಿಲ್ಲ. ಆದರೆ, ಮಾಧ್ಯಮಗಳಲ್ಲಿ ಚಚರ್ೆ ಆರಂಭವಾಗಿದೆ. ಈ ಬಾರಿ ಅಮೇಥಿಯಲ್ಲಿ ರಾಹುಲ್ ಗೆಲ್ಲುವುದು ತುಂಬ ಕಠಿಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ಹಾಗಾಗಿ ಅವರು ವಯನಾಡ್ ಗೆ ಹೋಗಿದ್ದಾರೆ ಎಂದರು.