ಬೇಂದ್ರೆ ಬದುಕೆಂದರೆ ಅದು ಬೆಂಕಿಯಲ್ಲಿ ಅರಳಿದ ಹೂವು: ಸಂತೋಷ ಕುಲಕಣರ್ಿ

ಲೋಕದರ್ಶನ ವರದಿ

ವಿಜಯಪುರ 31:ಕನ್ನಡ ಸಾರಸ್ವತ ಲೋಕದ ಧೃವತಾರೆಯಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಕವಿ ಎಂದರೆ ಅದು ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು. ಬೇಂದ್ರೆಯವರ ಬದುಕು ಮತ್ತು ಬರಹಗಳನ್ನು ಭಿನ್ನವಾಗಿ ನೋಡುವುದೇ ಬೇಕಾಗಿಲ್ಲ. ಕಾರಣ ಬದುಕೇ ಬರಹದಲ್ಲಿ ಮೂಡಿ ಬಂದಿದ್ದು ಬದುಕಿನಲ್ಲಿನ ತವಕ ತಲ್ಲಣಗಳನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅಥರ್ೈಸಿ ಅವುಗಳಿಗೆ ಜನಪದದ ಸ್ಪರ್ಶ ನೀಡಿ ನಮಗೆಲ್ಲ ಉಣಬಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಂಬಿಕಾತನಯದತ್ತರ ಬದುಕು ಎಂದರೆ ಅದು ಬೆಂಕಿಯಲ್ಲಿ ಅರಳಿದ ಹೂವಿನಂತೆ; ಬೇಂದ್ರೆಯವರ ಮಾತಿನಲ್ಲೇ ಹೇಳುವುದಾದರೇ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯ. ಹೇಗೆ ಕೆಸರಿನಲ್ಲಿ ಮಾತ್ರ ಕಮಲ ಅರುಳುತ್ತದೆಯೋ ಹಾಗೆ ಕಷ್ಟದಲ್ಲಿ ಬೇಂದ್ರೆಯಂತ ಪ್ರತಿಭೆ ಅರಳುತ್ತದೆ ಎಂದು ಪಿ.ಡಿ.ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ಕುಲಕಣರ್ಿ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವರಕವಿ ದ.ರಾ.ಬೇಂದ್ರೆಯವರ 123ನೇ ಜನ್ಮದಿನವನ್ನುದ್ದೇಶಿಸಿ ಮಾತನಾಡಿದ ಅವರು; ಬೇಂದ್ರೆಯವರ ಸಾಹಿತ್ಯ ಸಾಮಾನ್ಯನಿಗೆ ಸವಾಲಾಗಿ ಪರಿಣಮಿಸುತ್ತವೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶಬ್ದಗಾರುಡಿಗನೆಂದೆ ಪ್ರಸಿದ್ಧರಾಗಿದ್ದ ದ.ರಾ.ಬೇಂದ್ರೆಯವರ ಪ್ರತಿ ಬರವಣಿಗೆಯೂ ಕೂಡ ವಿಶಿಷ್ಟತೆಯಿಂದ ಕೂಡಿರುತ್ತದೆ. ಪ್ರತಿವಾಖ್ಯದಲ್ಲಿಯೂ ಒಂದು ಹೊಸ ಪ್ರಯೋಗ ಕಾಣುತ್ತದೆ ಮಾತ್ರವಲ್ಲ ಪ್ರತಿಯೊಂದು ಸಾಲು ಸಹ ಅರ್ಥಪೂರ್ಣವಾಗಿರುತ್ತದೆ. ಇಂಥ ವಿಭಿನ್ನ ಹಾಗೂ ವಿಸ್ಮಯ ಮೂಡಿಸುವ ಸಾಹಿತ್ಯವು ಸಾಮಾನ್ಯ ಓದುಗನನ್ನು ಚಿಂತೆಗೆ ಈಡು ಮಾಡಿದರೆ ಓದಿ ಅಥರ್ೈಸಿಕೊಂಡ ಮೇಲೆ ಚಿಂತೆನೆ ದೂಡುತ್ತದೆ. ಓದು ಮುಗಿಯುವದರೊಳಗೆ ಮನಸ್ಸು ಹೊಸತನಕ್ಕೆ ತೆರೆದುಕೊಳ್ಳುತ್ತದೆ ಎಂದು ಹೇಳಿದರು.

ಬೇಂದ್ರೆಯವರ ಬರವಣಿಗೆಯ ಮೋಡಿಗೆ ಒಳಗಾಗಿಯೇ ಅವರ ಅನುಯಾಯಿಗಳಾದವರೂ ಸಹ ಮುಂದೆ ಸಾಹಿತ್ಯ ಲೋಕದ ಶ್ರೇಷ್ಠ ಬರಹಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ ನಿಮರ್ಾಣವಾಗಿದ್ದಾರೆ. ಕಾರಣ ಅವರ ಬರವಣಿಗೆಯಲ್ಲಿ ಅನುಭವ, ಅನುಭಾವ, ಆಧ್ಯಾತ್ಮ ಹಾಗೂ ಧಾಮರ್ಿಕತೆಯನ್ನು ಮೀರಿದ ಒಂದು ಅನನ್ಯ ಭಾವವಿರುತ್ತದೆ. ವಿಭಿನ್ನವಾದ ದೃಷ್ಠಿಕೋನವು ಅವರ ಪ್ರತಿ ಕವಿತೆಯಲ್ಲಿಯೂ ಗೋಚರವಾಗುತ್ತದೆ ಇದರಿಂದಾಗಿಯೇ ಅವರ ನಾಕುತಂತಿ ಕೃತಿ ಜ್ಞಾನಪೀಠ ಪ್ರಶಸ್ತಿ ಪಡೆಯಲು ಕಾರಣವಾಯಿತು. ಆದ್ದರಿಂದ ಬೇಂದ್ರೆಯವರ ಸಾಹಿತ್ಯವನ್ನು ಅರಿಯಬೇಕೆಂದರೆ ಒಂದೇ ದೃಷ್ಠಿಯಿಂದ ನೋಡಿದರೆ ಎಂದಿಗೂ ಆಗದು. ಹೀಗಾಗಿ ಅದನ್ನರಿಯಬೇಕೆಂದರೆ ಹೃದಯದ ಒಳಗಣ್ಣೀಂದ ಹಾಗೂ ಅರಿವಿನ ಆಳದಿಂದ ನೋಡಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರಾದ ಜಿ.ಹೆಚ್. ಮಣ್ಣೂರ ಅವರು; ವಿಜಯಪುರದ ಹಲಸಂಗಿ ಗೆಳೆಯರ ಬಳಗದ ಸಾಹಿತ್ಯ ಇಂದು ಜಗತ್ತಿನಾಧ್ಯಂತ ಪಸರಿಸಿದೆ ಅದಕ್ಕೆ ಕಾರಣರಾಗಿದ್ದೇ ಮಧುರ ಚನ್ನರ ದೂರದೃಷ್ಠಿ ಹಾಗೂ ಹಿನ್ನೆಲೆಯಲ್ಲಿರುವ ಆಧ್ಯಾತ್ಮದ ಕಂಪು. ಅಂಥ ಮಧುರ ಚನ್ನರು ಹಾಗೂ ದ.ರಾ.ಬೇಂದ್ರೆಯವರು ಒಡನಾಡಿಗಳಾಗಿದ್ದರು. ಹೀಗಾಗಿ ಇರ್ವರ ಸಾಹಿತ್ಯದಲ್ಲಿ ಕೊಂಚ ಸಮಭಾವ ನಮಗೆ ಸಿಗುತ್ತದೆ. ಇಂಥಹ ಬೇಂದ್ರೆಯವರು ಕನ್ನಡಕ್ಕೆ ಜ್ಞಾನಪೀಠವನ್ನು ತರುವ ಮೂಲಕ ಕನ್ನಡ ಭಾಷೆಯ ಗರಿಮೆಯನ್ನು ಹೆಚ್ಚಿಸಿದರು ಎನ್ನುವುದಕ್ಕಿಂದ ಕನ್ನಡ ಸಾಹಿತ್ಯದಲ್ಲಿ ಪದದಗಳನ್ನು ಹೆಣೆದು ಮನಗಳನ್ನು ಬೆಸೆದ ಇವರಿಗೆ ಜ್ಞಾನಪೀಠ ಸಿಕ್ಕಿದ್ದು ಜ್ಞಾನಪೀಠಕ್ಕೆ ಒಂದು ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿ ಉಪನ್ಯಾಸಕರಾದ ಮನೋಹರ ದೊಡ್ಡಮನಿ ಹಾಗೂ ಶ್ರೀಮತಿ ಕುಲಕಣರ್ಿ ಮಾತನಾಡಿ; ಕನ್ನಡ ಸಾರಸ್ವತ ಲೋಕದ ಶ್ರೀಮಂತಿಕೆಗೆ ಕಾರಣರಾದವರೆಂದರೆ ಅದು ವರಕವಿ ಬೇಂದ್ರೆಯವರು ಅವರಿಂದ ಹೊರಬಂದ ಕವಿತೆಗಳೆ ಸಾಟಿಯಾಗಬಲ್ಲ ಯಾವ ಕವಿತೆಯೂ ಇದುವರೆಗೂ ಸೃಷ್ಠಿಯಾಗಿಲ್ಲ ಆಗುವುದು ಸಹ ಅಷ್ಟು ಸುಲಭವಲ್ಲ ಕಾರಣ ಬೇಂದ್ರೆ ಎಂದರೆ ಕನ್ನಡ ಸಾಹಿತ್ಯ ಲೋಕದ ಅದಮ್ಯ ಚೇತನ ಎಂದು ಹೇಳಿದರು. ಉಪನ್ಯಾಸಕ ಮಂಜುನಾಥ ಜುನಗೊಂಡ ಪ್ರಾಥರ್ಿಸಿದರು, ಭಾಸ್ಕರ ಮರಕಲ್ ನರೂಪಿಸಿದರು ಹಾಗೂ ಉಮೇಶ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.