ಲೋಕದರ್ಶನವರದಿ
ಹಾವೇರಿ : ಮತದಾನ ಅತ್ಯಂತ ಪವಿತ್ರ ಕರ್ತವ್ಯವಾಗಿದ್ದು, ಅದನ್ನು ಚಲಾಯಿಸುವದು ಮತ್ತು ಮತದಾನ ಮಾಡುವಂತೆ ಪ್ರೋತ್ಸಾಹಿಸುವದರ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಈಡೇರಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.
ನಗರದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಪ್ರೌಢಶಾಲೆಯ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಮತದಾನದ ಸ್ಪಧರ್ೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ನೂತನ ಮತ್ತು ಭವಿಷ್ಯದ ಮತದಾರರಲ್ಲಿ ಚುನಾವಣಾ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರೌಢಶಾಲೆ ಹಂತದಿಂದಲೇ ಮತದಾನದ ಬಗ್ಗೆ ಅರಿವು ಮೂಡಿಸುವಂಥ ಪ್ರಬಂಧ ಸ್ಪಧರ್ೆ, ರಸಪ್ರಶ್ನೆ ಮತ್ತು ನಾಟಕಗಳ ಮೂಲಕ ಶೇಕಡಾ ನೂರಕ್ಕೆ ನೂರು ಮತದಾನವಾಗುವಂಥ ಜಾಗೃತಿ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಇಂದು ಸಾಕ್ಷರ ಮತದಾರರೇ ಮತದಾನದಿಂದ ದೂರ ಉಳಿಯುತ್ತಿದ್ದು, ಕಳವಳಕಾರಿ ಸಂಗತಿಯಾಗಿದ್ದು, ಭಾರತದ ಭವಿಷ್ಯವನ್ನು ನಿರ್ಧರಿಸುವ ಈ ಪವಿತ್ರ ಕಾರ್ಯದಲ್ಲಿ ಆಸೆ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡುವುದಲ್ಲದೇ ಶಾಲಾ ಹಂತದಲ್ಲಿಯೇ ವಿಧ್ಯಾಥರ್ಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ 18 ವರ್ಷಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮತದಾನ ಮಾಡಬೇಕು ಎಂಬುದು ಆಯೋಗದ ಉದ್ದೇಶವಾಗಿದ್ದು, ಇದಕ್ಕಾಗಿ ಶಾಲಾ ಕಾಲೇಜು ಹಂತದಲ್ಲಿ ಮತದಾನದ ಸಾಕ್ಷರತಾ ಸಂಘ ಮತ್ತು ಸ್ವೀಫ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ 50 ಕ್ಕೂ ಹೆಚ್ಚು ಪ್ರೌಢಶಾಲೆಯ ವಿಧ್ಯಾಥರ್ಿಗಳು ಪ್ರಬಂಧ, ರಸಪ್ರಶ್ನೆ ಮತ್ತು ನಾಟಕ ಸ್ಪಧರ್ೆಗಳಲ್ಲಿ ಭಾಗವಹಿಸಿದ್ದರು. ವಿಜೇತ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಸ್ವೀಫ್ ಸಮಿತಿಯ ನಾಗರಾಜ ಇಚ್ಚಂಗಿ, ಟಿ. ಮಂಜುನಾಥ, ಸಿ.ವಾಯ್ .ಅಂತರವಳ್ಳಿ, ಸಿ.ಜಿ. ಚಿಕ್ಕಮಠ, ಪಿ.ಬಿ. ಪ್ರಭುಸ್ವಾಮಿಮಠ, ಎಫ್.ಎಚ್. ಕೊರಗರ. ವಿ.ಬಿ. ಬನ್ನಿಹಳ್ಳಿ, ಎಸ್.ಐ. ಬಾಗೋದಿ, ಬಿ.ಜಿ.ಗೌಡಣ್ಣನವರ, ಬಿ.ಬಿ.ವಿಶ್ವನಾಥ, ಎಸ್.ಆರ್. ಹಿರೇಮಠ, ವೀಣಾ ಕಮ್ಮಾರ, ಎಸ್.ವಿ ಕಪ್ಪರದ, ಶಿವಬಸವ ಮರಳಿಹಳ್ಳಿ, ಬಿ.ಜಿ. ಕೊರಗ ಅನೇಕರಿದ್ದರು.