ಕಾಗವಾಡ 03: ಗ್ರಾಮಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಹಾತ್ಮಾ ಗಾಂಧಿಜಿ ಇವರು ಸತ್ಯ, ಅಹಿಂಸೆದೊಂದಿಗೆ ಸ್ವಚ್ಛತೆಗೆ ಆಧ್ಯತೆ ನೀಡಿದ್ದರು. ಅದರಂತೆ ಪ್ರಧಾನಿ ನರೇಂದ್ರ ಮೋದಿಜಿ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಪಣ ತೊಟ್ಟಿದ್ದಾರೆ. ಅವರು ಕೈ ಬಲಪಡಿಸಲು ನಾವೆಲ್ಲರು ಒಂದಾಗಿ ಶ್ರಮಿಸೋಣ ಎಂದು ರಾಯಬಾಗ ತಾಲೂಕಿನ ಮುಗೊಳಖೊಡ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಮಹಾವೀರ ಬೊರನ್ನವರ ಉಗಾರದಲ್ಲಿ ಹೇಳಿದರು.
ಬುಧವಾರ ಸಂಜೆ ಉಗಾರ ಲಾಯನ್ಸ್ ಕ್ಲಬ್ ವತಿಯಿಂದ ಮಹಾತ್ಮಾ ಗಾಂಧಿಜಿ ಮತ್ತು ಲಾಲಬಹಾದ್ದೂರ ಶಾಸ್ತ್ರಿಜಿ ಇವರ ಜಯಂತಿ ನಿಮಿತ್ಯ ಉಗಾರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮಹಾವೀರ ಬೊರನ್ನವರ ಇವರು ಪಾಲ್ಗೊಂಡು ಸ್ವಚ್ಛತೆಯ ಮಹತ್ವ ಬಗ್ಗೆ ಎಲ್ಲ ಸದಸ್ಯರಿಗೆ ಮಾಹಿತಿ ನೀಡಿ, ಪ್ರತಿಜ್ಞೆ ಬೋಧಿಸಿದರು.
ಉಗಾರ ಲಾಯನ್ಸ್ ಕ್ಲಬ್ ಆಧ್ಯಕ್ಷ ಶ್ರೀಕಾಂತ ಭಟ್ಟ ಇವರು ಸ್ವಾಗತಿಸಿ, ಗಾಂಧಿಜಿ ಮತ್ತು ನೇಹರು ಜೀ ಇವರ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಲಾಯನ್ಸ್ ಕ್ಲಬ್ ಕಾರ್ಯದರ್ಶಿ ರಾಮಚಂದ್ರ ಕಿಲ್ಲೇದಾರ, ಮಾಜಿ ಆಧ್ಯಕ್ಷರಾದ ಸುಭಾಷ ಹೆಬ್ಬಾಳೆ, ಡಾ. ಎಸ್.ಎ.ಭರಮದೆ, ಡಾ. ಬಿ.ಎ.ಪಾಟೀಲ, ಖಜಾಂಚಿ ಚಂದ್ರಶೇಖರ ಕುರಿ, ಜ್ಯೋತಿಕುಮಾರ ಪಾಟೀಲ,ಡಾ. ಅಮೋಲ ಸರಡೆ,ಬಿ.ಎನ್.ಚೌಗುಲೆ,ಬಿ.ಬಿ.ಕಾಗೆ,ಡಾ. ಧವಲ್ ಭೋಮಾಜ್, ಡಾ. ಬಿ.ಎ.ಪಾಟೀಲ(ಕುಡಚಿ), ಡಾ. ಎಸ್.ಎಂ.ಕಟಿಗೇರಿ, ಡಾ. ಬಿ.ಎನ್.ಸಾಬಡೆ, ಗಿರೀಶ ಗೋಸಾವಿ, ಸೇರಿದಂತೆ ಅನೇಕರು ಇದ್ದರು.