ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧರಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ .ಸಿ.ಡಿ.ರಾಜಶೇಖರ
It is the duty of every citizen to work tirelessly for the survival and prosperity of Kannada. C.D.
ಲೋಕದರ್ಶನ ವರದಿ
ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧರಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ .ಸಿ.ಡಿ.ರಾಜಶೇಖರ
ಕಂಪಿ 02: ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧವಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ಅಭಿಪ್ರಾಯ ಪಟ್ಟರು. ಪಟ್ಟಣದ ಅಂಬೇಡ್ಕರ್ ವೃತ್ತದ ಉಪ ನೋಂದಣಾಧಿಕಾರಿಗಳ ಕಛೇರಿ ಮುಂಭಾಗದ ಡಾ.ರಾಜಕುಮಾರ ರಸ್ತೆ ಬಳಿಯಲ್ಲಿ ಕರವೇ(ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನು ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ಪರಭಾಷೆಗೆ ಒಳಗಾಗದೆ ನಮ್ಮ ಭಾಷೆ ಉಳಿವಿಗೆ ಮುಂದಾಗಬೇಕು. ಎಂದರು.ಪುರಸಭೆ ಸಿ.ಓ ಬಿ.ಮಲ್ಲಿಕಾರ್ಜುನ ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕಿ ಮಂಗಳಮುಖಿ ರಾಜಮ್ಮಗೆ ಸನ್ಮಾನಿಸಿ ಗೌರವಿಸಿದರು. ತದನಂತರ ಮೈಕಲ್ ಜಾಕ್ಸನ್ ಡ್ಯಾನ್ಸ್ ತರಬೇತಿ ಕೇಂದ್ರದ ಮಕ್ಕಳು ರಸ್ತೆಯಲ್ಲಿ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುವ ಜೊತೆಗೆ ಮೈಕಲ್ ಜಾಕ್ಸನ್‌ನಂತೆಯೇ ಡ್ಯಾನ್ಸ್ ಮಾಡುವ ಮೂಲಕ ನೋಡುಗರ ಗಮನ ಸೆಳೆದರು. ತದನಂತರ ಡ್ಯಾನ್ಸ್ ವಿದ್ಯಾರ್ಥಿಗಳಿಗೆ ಗೌರವ ನೃತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರಾ್ಯಲಿ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ ಕರವೆ ತಾಲೂಕು ಉಪಾಧ್ಯಕ್ಷರಾದ ವಿ.ಬಿ.ನಾಗರಾಜ, ಬಳ್ಳಾಪುರ ಮೌನೇಶ, ರವಿಶಂಕರ್, ಪ್ರಧಾನ ಕಾರ್ಯದರ್ಶಿ ಪಿ.ಶಂಭುಲಿಂಗ, ಖಜಾಂಚಿ ಪ್ರಕಾಶ ಶೇಟ್, ಸಂಘಟನಾ ಕಾರ್ಯದರ್ಶಿ ದೊಡ್ಡಮನೆ ಗಣೇಶ, ಕಾರ್ಯದರ್ಶಿ ಹರೀಶ್, ನಗರ ಘಟಕ ಅಧ್ಯಕ್ಷ ಜಂಗಲಿ ನಾಗರಾಜ, ತಾ.ಯುವ ಘಟಕ ಅಧ್ಯಕ್ಷ ರಾಘವೇಂದ್ರ, ವಿದ್ಯಾರ್ಥಿ ಘಟಕ ಅಧ್ಯಕ್ಷ ಎಂ.ಎಸ್.ಮುನ್ನಾ, ಮುಖಂಡರಾದ ಬಿ.ನಾರಾಯಣಪ್ಪ, ಎನ್.ರಾಮಾಂಜನೇಯಲು, ಗಾದಿಲಿಂಗಪ್ಪ, ಎಂ.ರಂಜೀತ್, ಹೂಗಾರ ಗಣೇಶ, ಮಣ್ಣೂರು ವಿರೇಶ, ಹೆಚ್.ಉಮೇಶ, ಶೇಖರ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 