ಮೂಡಲಗಿ 16: ನಮ್ಮ ಭಾರತ ದೇಶವನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ವೀರ ಧೀರ ಸೈನಿಕರ ನಿಸ್ವಾರ್ಥ ದೇಶ ಪ್ರೇಮ, ದೇಶ ಭಕ್ತಿ ಹೆಮ್ಮೆ ತರವಂತಹ ಸಂಗತಿ, ನಾವುಗಳು ಸೈನಿಕರಿಗೆ ಗೌರವ ಕೊಡುವದರೊಂದಿಗೆ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಹೇಳಿದರು. .
ಪಟ್ಟಣದ ಆರ್.ಡಿ.ಎಸ್. ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ ವೀರಯೋಧರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಧರು ಮಳೆ, ಬಿಸಿಲು, ಚಳಿ ಎನ್ನದೇ ರಾತ್ರಿ ಹಗಲು ಕಷ್ಟಪಟ್ಟು ದೇಶದ ರಕ್ಷಣೆ ಮತ್ತು ನಮ್ಮನ್ನು ರಕ್ಷಣೆ ಮಾಡುತ್ತಾರೆ ಅವರನ್ನು ಸದಾಕಾಲ ಸ್ಮರೀಸುವುದು ಅವಶ್ಯವಿದೆ ಜನ್ಮ ನೀಡಿದ ತಾಯಿತಂದೆಯ ಋಣದ ಜೊತೆಗೆ ಸೈನಿಕರ ಮತ್ತು ಅನ್ನನೀಡುವ ರೈತರ ಋಣ ಸ್ಮರೀಸುವುದು ಅಗತ್ಯವಿದೆ ಎಂದರು.
ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯ ಜೋಶಫ್ ಬೈಲಾ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರು ಬಹುದೊಡ್ಡ ಪಾತ್ರವಹಿಸುತ್ತಾರೆ. ತಮ್ಮ ಕುಟುಂಬ ತೊರದು ನಿಸ್ವಾರ್ಥ ದೇಶಸೇವೆ ಮಾಡುವ ವೀರಯೋಧರ ಇದ್ದಾಗಲೇ ಅಖಂಡ ಭಾರತದ ಸೌರ್ವಭೌಮತ್ವಕ್ಕೆ ಸ್ಪೂರ್ತಿ ತುಂಬುತ್ತದೆ. ಸೈನಿಕರು ತಮ್ಮ ಉಸಿರು ಇರುವವರಿಗೊ ದೇಶಸೇವೆ ಈಶ ಸೇವೆ ಎಂದು ಭಾವಿಸುತ್ತಾರೆ ವಿದ್ಯಾರ್ಥಿಗಳು ಸೈನಿಕರಿಗೆ ಗೌರವಕೊಡುವ ನೈತಿಕತೆ ಬೆಳಸಿಕೊಳ್ಳಬೇಕೆಂದರು.
ಸಂಸ್ಥೆಯ ಉಪಾಧ್ಯಕ್ಷೆ ಪೂಜಾ ಪಾರ್ಶಿ ಮಾತನಾಡಿ, ರೈತ ನಮೆಗಲ್ಲಾ ಅನ್ನ ನೀಡಿದರೆ ಸೈನಿಕರು ನಮ್ಮ ದೇಶದಲ್ಲಿ ಉಸಿರು ಇರುವಂತೆ ಮಾಡುತ್ತಾರೆ ನಮಗಾಗಿ ಪ್ರಾಣ ನೀಡುವ ಅನ್ನದಾತರ ಸೈನಿಕರ ಕಾರ್ಯ ಚಿರಸ್ಮರಣೀಯ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲಕ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರಯೋದರಿಗೆ ದೀಪ ಬೆಳಗುವದರೊಂದಿಗೆ ಮತ್ತು ಮೌನಾಚರಣೆ ಮೂಲಕ ಗೌರವ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುನೀತಾ ಸುಣದೋಳಿ, ಮೋಶಿನ್ ಜಮಖಂಡಿ ಶಾಲಾ ಸಿಬ್ಬಂದಿವರ್ಗ ಹಾಜರಿದ್ದರು
ಶಿಕ್ಷಕಿ ಸುಹಾಸಿನಿ ಮಗದುಮ್ಮ ನಿರೂಪಿಸಿದರು ನಸೀಮಾ ಕೆಸರಟ್ಟಿ ಸ್ವಾಗತಿಸಿದರು ಅಪ್ಪಣ್ಣಾ ಮಂಗಸೂಳಿ ವಂದಿಸಿದರು.