ಗೋಕಾಕ: ರೈತ- ಯೋಧರನ್ನು ಗೌರವಿಸುವದು ಎಲ್ಲ ನಾಗರಿಕರ ಕರ್ತವ್ಯ

ಲೋಕದರ್ಶನ ವರದಿ

ಗೋಕಾಕ 27: ಅನ್ನ ನೀಡಿದ ರೈತರ ಹಾಗೂ ದೇಶ ಕಾಯುವ ಯೋಧರನ್ನು ಗೌರವಿಸುವದು ಎಲ್ಲ ನಾಗರಿಕರ ಕರ್ತವ್ಯವಾಗಿದೆ ಎಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ ಬಿ ಪಾಗದ ಹೇಳಿದರು.

   ಅವರು, ಶುಕ್ರವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 20ನೇ ಕಾಗರ್ಿಲ ವಿಜಯೋತ್ಸವದ ಸ್ಮರಣೆಗಾಗಿ ಆಯೋಜಿಸಿದ್ಧ ಕಾಗರ್ಿಲ ವಿಜಯೋತ್ಸವ ಯುದ್ಧದಲ್ಲಿ ಪಾಲ್ಗೊಂಡ ಯೋಧರನ್ನು ಸನ್ಮಾನಿಸಿ ಮಾತನಾಡಿದರು. ತಮ್ಮ ಜೀವನದ ಹಂಗು ತೊರೆದು ನಮ್ಮ ಗಡಿಯನ್ನು ಕಾಯುವ ಸೈನಿಕರಿಂದ ನಾವೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದೆವೆ. ಅಂತ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು. ನಮ್ಮ ಯೋಧರಿಗೆ ಹೆಚ್ಚಿನ ಶಕ್ತಿಯನ್ನು ಭಗವಂತ ಪಾಲಿಸಲೆಂದು ಪ್ರಾಥರ್ಿಸಿದರು.

ಇದೇ ಸಂದರ್ಭದಲ್ಲಿ ಕಾಗರ್ಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.    ವೇದಿಕೆಯ ಮೇಲೆ ಯೋಧರಾದ ಜಾಕೀರ ಹುಸೇನ ಮೋಮಿನ, ಕೆಂಪಣ್ಣ ಕೊಳೆಯಗೋಳ, ಶಿಕ್ಷಕ ಎಮ್ ಸಿ ವಣ್ಣೂರ ಇದ್ದರು. ಶಿಕ್ಷಕಿಯರಾದ ಎಸ್ ಆರ್ ಪಾಟೀಲ, ಸ್ವಾಗತಿಸಿದರು. ಪೂಣರ್ಿಮಾ ತಾಂವಶಿ ನಿರೂಪಿಸಿದರು, ಎಮ್ ಕೆ ಮಕಾಂದಾರ ವಂದಿಸಿದರು.