ಗೋಕಾಕ 09: ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯವಂತರಾಗಿ ದೀರ್ಘಾ ಯುಷಿಗಳಾಗಿ ಬದುಕಲು ಸಾಧ್ಯವೆಂದು ನಿವೃತ್ತ ವೈಧ್ಯ ಡಾ. ಉದಯ ಬಡೇಸಗೋಳ ಹೇಳಿದರು.
ರವಿವಾರದಂದು ಬಸವ ಮಂದಿರದಲ್ಲಿ ಆರೋಗ್ಯ ಇಲಾಖೆಯ ನಿವೃತ್ತರ ಹಿತವರ್ಧಕ ಸಂಘ ಗೋಕಾಕ ಇವರು ಹಮ್ಮಿಕೊಂಡ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಿವೃತ್ತ ಆರೋಗ್ಯ ಇಲಾಖೆಯವರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧ್ಯಾತ್ಮಿಕ, ಯೋಗ, ವಾಯುವಿಹಾರ, ಸಮತೋಲನ ಆಹಾರ ಹಾಗೂ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಿ. ತಮ್ಮ ಮಕ್ಕಳಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿ ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಜನತೆಯ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯವರ ಪಾತ್ರ ಮಹತ್ವದ್ದು. ಸೇವಾ ಮನೋಭಾವನೆಯಿಂದ ಜನತೆಗೆ ಆರೋಗ್ದ ಮಾಹಿತಿ ನೀಡಿ, ಆರೋಗ್ಯವಂತ ಸಮಾಜ ನಿಮರ್ಿಸಲು ಶ್ರಮಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಅಶೋಕ ಮುರಗೋಡ ವಹಿಸಿದ್ದರು.
ವೇದಿಕೆ ಮೇಲೆ ಡಾ. ಎಮ್.ಬಿ.ಕರಕಣ್ಣವರ, ಡಾ. ಬಿ.ಎಸ್.ಮದಭಾಂವಿ, ಡಾ. ಎಸ್.ಎಮ್.ಹೊಸಮನಿ, ಬಿ.ಬಿ.ರಾಜಾಪೂರೆ ಇದ್ದರು.
ಡಾ. ಎಸ್.ಜಿ.ಪಂಡಿತ ಸ್ವಾಗತಿಸಿದರು. ಎಸ್.ಎಸ್.ಈರಗಾರ ನಿರೂಪಿಸಿದರು. ಡಿ.ಬಿ.ಜಿನರಾಳ ವಂದಿಸಿದರು.