ಕ್ರೀಡೆಯಿಂದ ಉತ್ತಮ ಆರೋಗ್ಯ ಹೊಂದಲು ಸಾದ್ಯ

ಲೋಕದರ್ಶನ ವರದಿ

ಚಿಕ್ಕೋಡಿ 29: ಚಿಕ್ಕೋಡಿಯ ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ, 2019-20ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟಗಳು ಜರುಗಿದವು. ಕ್ರೀಡಾಜ್ಯೋತಿ ಬೆಳಗಿಸಿ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಲೆಪ್ಟಿನಂಟ ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯ, ಚಿಕ್ಕೋಡಿ ದೈಹಿಕ ಶಿಕ್ಷಣ ನಿರ್ದೇಶಕರಾದ  ಡಾ. ಶಿವಾನಂದ ಎಮ್. ಬುಲಬುಲೆ ಆಗಮಿಸಿದ್ದರು. 

ಇಂದಿನ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಹಾಗೂ ಉತ್ತಮ ಆರೋಗ್ಯವನ್ನು ಹೊಂದಲು ಕ್ರೀಡೆಗಳಲ್ಲಿ ಸ್ಪರ್ಧಿಸಬೇಕೆಂದು ಮತ್ತು ಕ್ರೀಡೆಗಳಿಂದ ಮನುಷ್ಯನ ದೇಹಕ್ಕೆ ಆಗುವ ಪ್ರಯೊಜನಗಳ ಬಗ್ಗೆ ತಿಳಿಸಿದರು.  ಮಹಾವಿದ್ಯಾಲಯದ ಪ್ರಾಚಾರ್ಯರಾದ  ಡಿ.ಬಿ. ಸೊಲಾಪುರೆ  ಅಧ್ಯಕ್ಷತೆಯನ್ನು ವಹಿಸಿದ್ದರು, ಪ್ರೊ ವೈಶಾಲಿ ಎಸ್. ಬೀಳಗಿ ಅತಿಥಿಗಳ ಸ್ವಾಗತ ಮತ್ತು ಪರಿಚಯ ಮಾಡಿದರು, ಪ್ರೊ. ಪ್ರಭಾಕರ ಎಮ್. ಕಮತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

ಧರ್ಮರಾಜ ಗೌಡರ ಹಾಗೂ ಕಾವೇರಿ ಹುರಕಡ್ಲಿ ನಿರೂಪಿಸಿದರು. ಲತಾ ಎ. ಸರದಾರ, ಎಸ್.ಡಿ. ಶಿರಹಟ್ಟಿ, ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರಾದಂಥ ಎಸ್.ಡಿ. ಕಿಲ್ಲೇದಾರ, ಎಸ್. ಎ. ಜಾಡವಾಲೆ, ಎಲ್. ಕಾಂಬಳೆ, ರಾಹುಲ ಮುರದಂಡೆ, ಮೋಹನ ಪಾಟೀಲ, ಸುಭಾಷ ಲೈನದಾರ, ಬೋಧಕ ಮತ್ತು  ಭೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿದ್ಯಾಥರ್ಿಗಳು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.