ಮಾನವೀಯ ಮೌಲ್ಯಗಳನ್ನು ಪಡೆಯಲು ಭಗವಂತನ ಸ್ಮರಣೆಯಿಂದ ಸಾಧ್ಯ

ಲೋಕದರ್ಶನ ವರದಿ 

ಯರಗಟ್ಟಿ : ಭೂಮಿ ಮೇಲೆ ಮಾನವನು ತನ್ನ ಭೌದ್ಧಿಕ, ಲೋಕಿಕ ಸುಖಕ್ಕಾಗಿ ಹಾಗೂ ಸ್ವಾರ್ಥಕ್ಕಾಗಿ ನಾ ಎಂಬ ಅಹಂಕಾರದಿಂದ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಅಂಧಕಾರದಲ್ಲಿ ಮುಳಗಿದ್ದು ಭಗವಂತ ಬಾಬಾನ ಸ್ಮರಣೆಯಿಂದ ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ಬ್ರಹ್ಮಾಕುಮಾರಿ ಉಪವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾಜಿ ಹೇಳಿದರು.

ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬ್ರಹ್ಮಾಕುಮಾರೀಸ್ ಸೇವಾ ಕೇಂದ್ರದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬ್ರಹ್ಮಾಕುಮಾರಿ ವಿಶ್ವ ವಿದ್ಯಾಲಯ ಸಂಸ್ಥೆ ಹತ್ತು ಸಾವಿರಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ಹೊಂದಿದೆ ಎಂದರು.

ಶಾಸಕ ಆನಂದ ಮಾಮನಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ವ್ಯಕ್ತಿಯ ಆತ್ಮ ವಿಕಾಸನಕ್ಕಾಗಿ ಹಾಗೂ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಂಸ್ಥೆಯ ಅಣ್ಣಂದಿರ ಹಾಗೂ ಅಕ್ಕಂದಿರ ಕಾರ್ಯ ಶ್ಲಾಘನೀಯ ಮತ್ತು ಯಲ್ಲಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಓಂ ಶಾಂತಿ ಸೇವಾ ಕೇಂದ್ರಗಳ ಸ್ಥಾಪನೆಗೆ ಸ್ಥಳವಕಾಶ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಓಂ ಶಾಂತಿ ಸೇವಾ ಕೇಂದ್ರದಿಂದ ಮಹಿಳೆಯರು ವಿವಿಧ ದೇವತೆಗಳ ವೇಷಭೂಷಣ ಧರಿಸಿ ಹಾಗೂ ಈಶ್ವ ಸ್ವರೂಪಿ ಬಾಬಾನ ಮೆರವಣಿಗೆ ವಿವಿಧ ವಾಧ್ಯ ಮೇಳಗಳೊಂದಿಗೆ ಗ್ರಾಮದ ವಿವಿದ ನಗರಗಳ ಮೂಲಕ ಸಂಚರಿಸಿತು.

ಬಸವನ ಬಾಗೇವಾಡಿ ಸಿದ್ಧಲಿಂಗ ಶ್ರೀಗಳು, ಗೋಕಾಕ ನಾರಾಯಣ ಶರಣರು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ವಿಜಯಪೂರ ಬ್ರಹ್ಮಾಕುಮಾರಿಸ್ ನೀಲು ಅಕ್ಕನವರು ಈಶ್ವರೀಯ ಸಂದೇಶ ನೀಡಿದರು, ಜಿ.ಪಂ.ಸದಸ್ಯರಾದ ಅಜೀತಕುಮಾರ ದೇಸಾಯಿ, ವಿಧ್ಯಾರಾಣಿ ಸೊನ್ನದ, ಗ್ರಾ.ಪಂ.ಅಧ್ಯಕ್ಷರಾದ ಕಸ್ತೂರಿ ಕಡೆಮನಿ, ಸುರೇಶ ಬಂಟನೂರ, ಈರಣ್ಣ ಸಂಗಪ್ಪನವರ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊನ್ನವರ, ಎ.ಎಮ್.ಹಾದಿಮನಿ, ಎಚ್.ಎಸ್.ಗಂಗರಡ್ಡಿ, ರಾಜೇಂದ್ರ ವಾಲಿ, ಮಹಾಂತೇಶ ಜಕಾತಿ, ಸಂತೋಷ ಹಾದಿಮನಿ, ಜೆ.ರತ್ನಾಕರ ಶೆಟ್ಟಿ, ಬ್ರಹ್ಮಾಕುಮಾರಿಸ್ ಕೇಂದ್ರ ಕಛೇರಿ ಮೌಂಟ್ ಅಬು ನಾಗೇಶ ಅಣ್ಣನವರು, ಜಮಖಂಡಿ ಬ್ರಹ್ಮಾಕುಮಾರಿಸ್ ಮೀರಾ ಅಕ್ಕನವರು, ಬ್ರಹ್ಮಾಕುಮಾರಿಸ್ ಇಂಡಿ ಯಮುನಾ ಅಕ್ಕನವರು, ಬೈಲಹೊಂಗಲ ಬ್ರಹ್ಮಾಕುಮಾರಿಸ್ ಪ್ರಭಾ ಅಕ್ಕನವರು ಸೇರಿದಂತೆ ವಿವಿಧ ಜಿಲ್ಲೆಯ ನೂರಾರು ಸೇವಾ ಕೇಂದ್ರದ ಧೈವಿ ಪರಿವಾರದವರು ಹಾಜರಿದ್ದರು. ಬ್ರಹ್ಮಾಕುಮಾರಿ ಜಯಶ್ರಿ ಅಕ್ಕನವರು ಸ್ವಾಗತಿಸಿದರು, ಸುವಣರ್ಾ ಅಕ್ಕನವರು ನಿರೂಪಿಸಿದರು, ಬಿ.ಎಮ್.ಪಾಟೀಲ ಅಣ್ಣನವರು ವಂದಿಸಿದರು.