ಗದಗ 01: ಭಾರತೀಯ ಸಂಸ್ಕೃತಿಯಲ್ಲಿ ಪಾರಂಪರಿಕ ಸಾಂಸ್ಕೃತಿಕ ಪರಂಪರೆಗಳಿಗೆ ಇರುವಷ್ಟೇ ಮಹತ್ವ ಪ್ರಾಕೃತಿಕ ವಿಷಯಕ್ಕೂ ಇದ್ದು ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಸಂವರ್ಧನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕನರ್ಾಟಕ ಮೃಗಾಲಯ ಪ್ರಾಧಿಕಾರದ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ನುಡಿದರು.
ಗದಗ-ಬೆಟಗೇರಿಯ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಅರಣ್ಯ ಇಲಾಖೆಯು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಕಪ್ಪತ್ತ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಐವತ್ತು ವರ್ಷಗಳ ಹಿಂದೆ ಸಾಮಾನ್ಯವಾಗಿದ್ದ ಚಿರತೆಯನ್ನು ಇಂದು ಆಫಿಕಾದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದ್ದು ಎಲ್ಲರೂ ಸ್ಥಳೀಯ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಹಾವು, ಹುಳಹುಪ್ಪಡಿ, ಗಿಡಮರ, ಬಳ್ಳಿ, ಕಾಡು ಪ್ರಾಣಿಗಳಿಲ್ಲದೇ ಮಾನವ ಜೀವನ ಸಾಧ್ಯವಿಲ್ಲ. ಮೃಗಾಲಯ ಪ್ರಾಧಿಕಾರ ತೋಳಗಳ ಸಂರಕ್ಷಣೆಗೆ ವಿಶೇಷ ಆದ್ಯತೇ ನೀಡಿದೆ. ಬರೀ ರಾಜಧಾನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜಾಗೃತಿ ಕಾಯಾಗಾರಗಳು ಆಗುತ್ತಿದೆ. ಇಂದಿನ ಯುವ ಪೀಳಿಗೆ ಪ್ರಾಕೃತಿಕ ಹಾಗೂ ಮಾನವ ಜೀವನದ ಸಮತೋಲನ ಕ್ರಿಯೆ ಅರಿತು ಜಾಗೃತರಾಗಲು ಇಂತಹ ಜಾಗೃತಿ ಉತ್ಸವಗಳನ್ನು ರಾಜ್ಯದ ಉತ್ತರ ಭಾಗದಲ್ಲೂ ಹೆಚ್ಚು ನಡೆಯಬೇಕು ಎಂದು ಬಿ.ಪಿ.ರವಿ ನುಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಗದಗ ಜಿಲ್ಲೆ ಪ್ರಾಕೃತಿಕ ಸಂಪತ್ತಿನ ವಿಷಯದಲ್ಲಿ ಅತ್ಯಂತ ಗಂಡಾಂತರಕಾರಿ ಸನ್ನಿವೇಶ ಎದುರಿಸುತ್ತಿದೆ. ಇರುವ ಅರಣ್ಯ ಉಳಿಸಲು ಅರಣ್ಯ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಅಗತ್ಯದ ಎಲ್ಲ ಸಹಕಾರ ನೀಡಲಿದೆ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಬದುಕಿನಲ್ಲಿ ಪ್ರಾಮುಖ್ಯತೆ ಪಡೆಯಬೇಕು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಗದಗ ಜಿಲ್ಲೆಯ ಅರಣ್ಯ ಪ್ರದೇಶ ಶೇ. 6ರಷ್ಟಿದ್ದು ಅದರಲ್ಲಿ ಶೇ.5 ರಷ್ಟು ಕಪ್ಪತಗುಡ್ಡ ಆವರಿಸಿದೆ. ಆದುದರಿಂದ ಕಪ್ಪತಗುಡ್ಡದ ಉಳಿವು ಹಾಗೂ ಬೆಳವಣಿಗೆಗೆ ಜಿಲ್ಲೆಯ ಜನಜೀವನದ ಹಿತದೃಷ್ಟಿಯಿಂದ ಹೆಚ್ಚಿನ ಮಹತ್ವ ಹೊಂದಿದ್ದು ಯುವಜನರು, ಸಾರ್ವಜನಿಕರು, ರೈತರು ಹೆಚ್ಚಿನ ಮರಗಳನ್ನು ಬೆಳೆಸಲು ಇರುವ ವನ್ಯಜೀವಿಗಳ ಸಂರಕ್ಷಣೆ, ಸಂವರ್ಧನೆಗೆ ಮುಂದಾಗಬೇಕು. ಹಂಪಿ ಉತ್ಸವದಲ್ಲಿ ಈಗಾಗಲೇ ಇಂತಹ ಒಂದು ದಿನದ ಜಾಗೃತಿ ಕಾಯರ್ಾಗಾರ ಏರ್ಪಡಿಸಲಾಗಿತ್ತು ಎಂದು ನುಡಿದರು.
ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ ಸ್ವಾಗತಿಸಿ ಕಪ್ಪತ್ತ ಉತ್ಸವ ಆಯೋಜನೆಯ ಕುರಿತು ಮಾತನಾಡಿ ಜಿಲ್ಲೆಯ ವನ್ಯ ಜೀವಿ ಹಾಗೂ ಪರಿಸರ ಸಂವರ್ಧನೆಯಲ್ಲಿ ಇದೊಂದು ಮಹತ್ವದ ಮೊದಲ ಹೆಜ್ಜೆಯಾಗಲಿ ಎಂದು ಆಶಿಸಿದರು.
ಜಿಲ್ಲಾ ಪಂಚಾಯತ ಸಿ.ಇ.ಓ. ಡಾ.ಆನಂದ ಕೆ., ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಎಸ್.ಕಟಗೇರಿ, ಮೈಸೂರು ಮೃಗಾಲಯದ ಸಹಾಯಕ ನಿದರ್ೇಶಕ ಡಾ.ರಮೇಶ, ಬಳ್ಳಾರಿ ವನ್ಯ ಜೀವಿ ಪರಿಪಾಲಕ ಡಾ. ಅರುಣ ಎಸ್.ಕೆ., ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಬಾಗಲಕೋಟ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ, ಶ್ರೀಕುಮಾರ ಎಚ್.ಎನ್., ಸುಮಾ ಟಿ.ಎಸ್., ಸೇರಿದಂತೆ ಅರಣ್ಯ ಶಿಕ್ಷಣ ಕಾಲೇಜು, ಪಶುವೈದ್ಯಕೀಯ ಕಾಲೇಜು, ಅರಣ್ಯ ತರಬೇತಿ ಅಕಾಡೆಮಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿಧ್ಯಾಥಿ, ವಿಧ್ಯಾರ್ಥಿನಿಯರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗದಗ ಮೃಗಾಲಯ ಪ್ರಾಧಿಕಾರದಿಂದ ಹೊರತಂದ ಕ್ಯಾಲೆಂಡರನ್ನು ಬಿಡಗುಡೆ ಮಾಡಲಾಯಿತು.