ಕೊಪ್ಪಳ :11 ಸಮಾಜದಲ್ಲಿ ಹಿರಿಯ ನಾಗರಿಕರಿಗೆ, ಮಾತೇಯ ರಿಗೆ ತಂದೆ ತಾಯಿಯರಿಗೆ ಗೌರವಿಸುವುದು ನಮ್ಮ ಕರ್ತವ್ಯ ಅದು ನಮ್ಮ ಸಂಸ್ಕೃತಿ ಪರಂಪರೆ ಅದನ್ನು ನಾವು ಉಳಿಸಿ ಬೆಳೆಸಿಕೊಂಡು ಮುಂದಿನ ಯುವ ಪೀಳಿಗೆಗೆ ಸೂಕ್ತವಾದಂತ ಮಾರ್ಗದರ್ಶನ ನೀಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅಭಿಪ್ರಾಯಪಟ್ಟರು.
ಅವರು ನಗರದ ಸುರಭಿ ವೃದ್ಧಾಶ್ರಮ ದಲ್ಲಿ ಏರಿ್ಡಸಿದ ಮದರ್ಸ್ ಡೇ ಮಾತೇಯರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ವೃದ್ಧರಿಗೆ ಸೀರೆ ಇತ್ಯಾದಿ ಸಮವಸ್ತ್ರ ವಿತರಣೆ ಮಾಡಿ ಸಿಹಿ ಹಂಚಿಸಿ ಏರಿ್ಡಸಿದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು,ವೃದ್ಧರಿಗೆ ,ಹಿರಿಯರಿಗೆ ವೃದ್ಧಾಶ್ರಮಕ್ಕೆ ಸೇರಿಸದೆ ಮನೆಯಲ್ಲಿ ಅವರಿಗೆ ಗೌರವಿಸಿ ಉತ್ತಮ ಸೇವೆ ಮಾಡಿ ಬದುಕು ಸಾರ್ಥಕ ವನ್ನಾಗಿ ಮಾಡಿಕೊಳ್ಳಬೇಕು ಎಂದರು,ಮುಂದುವರೆದು ಮಾತನಾಡಿ ಇಲ್ಲಿನ ಸುರಭಿ ವೃದ್ಧಾಶ್ರಮ ದಲ್ಲಿ ವಾಸಿಸುವ ಬಡ ನಿರ್ಗತಿಕ ಮಾತೆಯರು ಮತ್ತು ಹಿರಿಯರನ್ನು ಗೌರವಿಸಿ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾದಠಹ ಪ್ರಯತ್ನ ಮಾಡಬೇಕಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು.
ಸಮಾರಂಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷರಾದ ಮಧು ಶೆಟ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ, ಪಾರ್ವತಿ ಪಾಟೀಲ್, ನಿತಾ ತಂಬ್ರಳ್ಳಿ, ಸದಸ್ಯರಾದ ಕವಿತಾ ಶೆಟ್ಟರ್ ನಿರ್ಮಲಾ ಮೊಳದ್, ಶೋಭಾ ಹಮ್ಮಿಗಿ ನಾಗರತ್ನ ಶೆಟ್ಟರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.