ಗ್ರಾಮೀಣ ನಾಟಕ ಕಲೆಗೆ ಪ್ರೋತ್ಸಾಹ ನೀಡುವದು ನಮ್ಮೆಲ್ಲರ ಕರ್ತವ್ಯ: ಮಹಾಂತೇಶ ದೊಡ್ಡಗೌಡರ
It is our duty to encourage rural drama: Mahantesh Doddagouda
ನೇಸರಗಿ 29: ನಾಟಕಗಳಿಂದ ಸಾಮಾಜಿಕ ಕಳಕಳಿ ಕುರಿತು ಜನರಿಗೆ ತಿಳುವಳಿಕೆ ಮತ್ತು ಸ್ವಂತ ಗ್ರಾಮೀಣ ಪ್ರತಿಭಾವಂತರಿಂದ ನಟಿಸಲ್ಪಡುವ ಗ್ರಾಮೀಣ ಜನರ ಕಲೆಯನ್ನು ಹೊರಕ್ಕೆ ತರಲು ಜಾತ್ರೆಗಳಲ್ಲಿ ಸಾಮಾಜಿಕ ನಾಟಕ ಪ್ರಮುಖವಾಗಿ ಕಾರ್ಯ ಮಾಡುತ್ತಿದ್ದು, ಇದು ಆಧುನಿಕ ಕಾಲದಿಂದಲೂ ನಡೆದುಕೊಂಡು ಬಂದ ಕಲಾ ಸಂಪ್ರದಾಯ ಎಂದು ಮಾಜಿ ಶಾಸಕರು ಹಾಗೂ ಬೆಳಗಾವಿ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ವಣ್ಣೂರ ಗ್ರಾಮದಲ್ಲಿ ಮೇ 23 ರಿಂದ ಪ್ರಾರಂಭವಾಗಿರುವ ಗ್ರಾಮದೇವತೆಯರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹಾ ತಾಯಿಯರ ಆಶೀರ್ವಾದ ಪಡೆದು ರಾತ್ರಿ 9-30 ಕ್ಕೆ ಸಾವಿರ ಹಳ್ಳಿಯ ಸರದಾರ ಅರ್ಧಾರ್ತ : ಧರ್ಮದ ದೊರೆ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಾತ್ರಾ ಕಮಿಟಿ ಅಧ್ಯಕ್ಷರು, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷರಾದ ಬಾಳಾಸಾಹೇಬ ದೇಸಾಯಿ ಮಾತನಾಡಿ ಮಳೆಯಲ್ಲಿಯೂ ಗ್ರಾಮದೇವತೆಯರ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದ್ದು ಇದ್ದಕೆ ಸರ್ವ ಜನಾಂಗದ ಸಹಕಾರ ಕಾರಣ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯ ಬಸವರಾಜ ಅಂಗಡಿ, ಶೇಖರ ಬಶೆಟ್ಟಿ, ರವಿಗೌಡ ಪಾಟೀಲ, ವಿಶಾಲಗೌಡ ಪಾಟೀಲ, ಮಲ್ಲೇಶ ಹಳ್ಳೂರಿ, ನಾಗಪ್ಪ ಬಶೆಟ್ಟಿ, ಭೀಮಪ್ಪ ಸೋಮನಟ್ಟಿ, ಹೊನ್ನಾನಾಯ್ಕ ಪಾಟೀಲ, ಬಾಬು ಶೇಬನ್ನವರ, ರೇವಪ್ಪ ಗಾಣಿಗೇರ, ಈರ್ಪ ಹಳ್ಳೂರಿ, ಸಂಗಯ್ಯ ಬಾಗೋಜಿ, ಮಾರುತಿ ಕೆಳಗೇರಿ, ಬಸಪ್ಪ ಕುಲಕರ್ಣಿ, ವೀರಭದ್ರ ಬಡಿಗೇರ, ಪ್ರಕಾಶ ಗಿಡಗಿ,ಕಲ್ಮೇಶ ಕುಲಕರ್ಣಿ, ಗದಗಯ್ಯ ಹಿರೇಮಠ ಸೇರಿದಂತೆ ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ವನ್ನೂರ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 