ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್
ಯರಗಟ್ಟಿ 18: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಣ್ಣ ಪುಟ್ಟ ಪ್ರತಿಷ್ಠೆ ವಿಚಾರವಾಗಿ ರಾಜಕೀಯ ನಡೆಯುತ್ತದೆ. ಇದನ್ನು ಸರಿಪಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳವಾರ ಯರಗಟ್ಟಿ ಪಟ್ಟಣಕ್ಕೆ ಭೇಟೀನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಮಾತನಾಡಿದರೆ ಯಾವುದೇ ಉಪಯೋಗ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಲ್ಲಿ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯನವರು ಒಬ್ಬರೇ ಮಾತ್ರ ಸಿಎಂ. ಸಿಎಂ ಬದಲಾವಣೆ ಅದನ್ನ ನಾವು ಅಷ್ಟು ಸುಲಭವಾಗಿ ಆಗುತ್ತದೆ ಎಂದು ಹೇಳಲು ಆಗದು. ಎಲ್ಲರೂ ಕೂಡಿ ಒಮ್ಮತವಾಗಿ ಆಯ್ಕೆ ಮಾಡುವ ನಿರ್ಣಯ. ಅನಗತ್ಯ ಚರ್ಚೆ ಮಾಡುವುದು ವಿಷಯ ಅಲ್ಲ. ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ಎಸ್.ಸಿ, ಎಸ್. ಟಿ ಸಮಾವೇಶ ನಡೆಯಲಿದೆ ಎಂದರು. ಜನ ಸಾಮಾನ್ಯರಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿ ವ್ಯಾತ್ಯಾಸವಾಗದಂತೆ ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಅತಿ ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶಾಸಕ ವಿಶ್ವಾಸ ವೈದ್ಯ, ಜಿಲ್ಲಾ ವೈದ್ಯಾಧಿಕಾರಿ ಡಾ. ಆಯ್. ಪಿ. ಗಡಾದ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಪಾದ ಸಬ್ನಿಸ್, ವೈದ್ಯಾಧಿಕಾರಿ ಡಾ. ಬಿ. ಎಸ್. ಬಳ್ಳೂರ, ಡಾ. ಕಾರ್ತಿಕ ವಾಲಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನುಮಂತಪ್ಪ ಹಾರುಗೋಪ, ಸಲಿಂಬೇಗ ಜಮಾದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಸದಸ್ಯ ರಫೀಕ ಡಿ.ಕೆ, ಮಂಜುನಾಥ ತಡಸಲೂರ, ಪ್ರಕಾರ ವಾಲಿ, ಗೋಪಾಲ ದಳವಾಯಿ, ಫಾರುಕ್ ಅತ್ತಾರ, ಚಾಯಪ್ಪ ಹುಂಡೇಕಾರ, ಶಿವಪ್ರಸಾದ ಜಕಾತಿ, ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗನವರ, ಫಕ್ರುಸಾಬ ನದಾಫ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.