ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಅವಶ್ಯಕ

ಲೋಕದರ್ಶನ ವರದಿ

ಬೈಲಹೊಂಗಲ:  ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಅವಶ್ಯವಾಗಿದೆ. ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಕೆಎಲ್ಇ ಸಂಸ್ಥೆಯ ನಿಕಟಪೂರ್ವ ಉಪಾಧ್ಯಕ್ಷ ಬಿ.ಎಸ್.ತಟವಟಿ ಹೇಳಿದರು. 

    ಪಟ್ಟಣದ ಕೆಎಲ್ಇ ಪಾಲಿಟೆಕ್ನಿಕ್ ಸಂಸ್ಥೆಯ ಸಿವ್ಹಿಲ್ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ನವರಾತ್ರಿ ನಿಮಿತ್ತ ಪ್ರಪ್ರಥಮ ಬಾರಿಗೆ ನಡೆದ ತಾಲೂಕಾ ಮಟ್ಟದ ದಾಂಡೀಯಾ ನೃತ್ಯ ಸ್ಪಧರ್ೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ವರು ಜಾತಿ, ಮತ, ಪಂಥ, ಮೇಲು ಕೀಳು, ಬಡವ-ಬಲ್ಲಿದ ಎಂಬುದನ್ನು ಮರೆತು ದಾಂಡಿಯಾ ನೃತ್ಯ ಆಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಕೆಎಲ್ಇ ಕಾಲೇಜಿನಿಂದ ಹೊಸ, ಹೊಸ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಹಲವು ಜಿಲ್ಲೆಗಳಲ್ಲಿ ಕೋಲನ್ನು ಬಳಸಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ದಾಂಡಿಯಾ ಆಡುವ ಸಂಪ್ರದಾಯ ಇಂದಿಗೂ ಜೀವಂತಾಗಿದೆ. ಪ್ರತಿಯೊಬ್ಬರು ನಮ್ಮ ಭಾರತೀಯ ಸಂಸ್ಕೃತಿ, ಸಾಹಿತ್ಯ, ಸಂಪ್ರದಾಯ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗಂಗಾಧರಯ್ಯಾ ಸಾಲಿಮಠ ಮಾತನಾಡಿ, ಮಹಾತ್ಮ ಗಾಂದೀಜಿ ಅವರು ಕಂಡ ಕನಸು ಸ್ವಚ್ಛ ಭಾರತ, ಪ್ಲಾಸ್ಟೀಕ್ ಮುಕ್ತ ಭಾರತ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಎಲ್ಲರೂ ಕಂಕಣ್ಣಬದ್ಧರಾಗಬೇಕೆಂದರು. 

ಎಲ್ಲ ಉಪನ್ಯಾಸಕರ ಸಹಕಾರದಿಂದ ನವರಾತ್ರಿ ಹಬ್ಬದ ನಿಮಿತ್ತ ಏರ್ಪಡಿಸಿದ್ಧ ದಾಂಡೀಯಾ ನೃತ್ಯ ಎಲ್ಲರ ಗಮನ ಸೆಳೆದಿದೆ. ಸ್ಪಧರ್ೆಯಲ್ಲಿ ಒಟ್ಟು 13 ಶಾಲೆಗಳು ಹಾಗೂ ಮೂರು ಕಾಲೇಜುಗಳ ವಿದ್ಯಾಥರ್ಿ ತಂಡಗಳು ಭಾಗವಹಿಸಿ ಉತ್ತಮ ದಾಂಡೀಯಾ ನೃತ್ಯ ಮಾಡಿದ್ದಾರೆ.

    ಸಿವ್ಹಿಲ್ ವಿಭಾಗದ ಮುಖ್ಯಸ್ಥ ಎಚ್.ಆಯ್.ಸಂಕಣ್ಣವರ ಮಾತನಾಡಿದರು. ಇದೇ ವೇಳೆ ತರ ತರನಾದ ಉಡುಪುಗಳು ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ಹೆಜ್ಜೆ ಹಾಕಿದು ವಿಶೇಷವಾಗಿದೆ. ವಿದ್ಯಾಥರ್ಿಗಳು ಶೀಳ್ಳೇ, ಚಪ್ಪಾಳೆ ಹಾಕಿ ತಂಡಗಳನ್ನು ಹುರುದುಂಬಿಸಿದರು. ನಿಣರ್ಾಯಕರಾಗಿ ಗಣೇಶ ಘಾಟಗೆ, ಮಂಜುನಾಥ ಕಗ್ಗೊಡಿ ಆಗಮಿಸಿದ್ದರು. 

     ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್.ಎನ್.ವಾರಿ, ಉಪನ್ಯಾಸಕರಾದ ಅಕ್ಷಯ ಮೂಗಿ, ಭರತ ಹುಣಶೀಕಟ್ಟಿ, ರಜನಿ ಹಲ್ಯಾಳ ಹಾಗೂ ಎಲ್ಲ ವಿಭಾಗಗಳ ಮುಖಸ್ಥರು, ನಾನಾ ಶಾಲಾ, ಕಾಲೇಜುಗಳ ಉಪನ್ಯಾಸಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. 


ವಿಜೇತ ತಂಡಗಳು: 

ಪಟ್ಟಣದ ಸರಕಾರಿ ಮಹಿಳಾ ಕಾಲೇಜು (ಪ್ರಥಮ), ದೇವಲಾಪೂರದ ಜ್ಞಾನತೀರ್ಥ ಶಾಲೆ (ದ್ವೀತಿಯ), ಲಿಟಲ್ ಹಾಟ್ರ್ಸ (ತೃತೀಯ), ಕೆಆರ್ಸಿ ಮಹಾವಿದ್ಯಾಲಯ ನಾಲ್ಕನೇ ಸ್ಥಾನ, ಕಾಮರ್ೆಲ್ ಶಾಲೆ ಐದನೇ ಸ್ಥಾನ ಪಡೆದಿವೆ.