ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಯುವುದು ಅವಶ್ಯಕ

ಬೆಳಗಾವಿ: 24 :ಗ್ರಾಹಕರ ವೇದಿಕೆ ಎಲ್ಲರಿಗೂ ಮಕ್ತವಾಗಿದ್ದು,  ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ನಿಮಗೆ ಆದ ಮೋಸದ ಬಗ್ಗೆ ದೂರು ದಾಖಲಿಸಬಹುದಾಗಿದೆ. ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷಕರಾದ ಬಿ.ವಿ.ಗುದ್ಲಿ ಅವರು ಹೇಳಿದರು.

ಜಿಲ್ಲಾಡಾಳಿತ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಅವರ ಸಂಯುಕ್ತಾಶ್ರಯದಲ್ಲಿ  ಡಿ.24 ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ "ರಾಷ್ಟ್ರೀಯ ಗ್ರಾಹಕ ದಿನಾಚರಣೆ-2019" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸರಿ ಸುಮಾರು 2000 ಸೊಸೈಟಿಗಳು ಇದ್ದು ಗ್ರಾಹಕರ ವೇದಿಕೆಗೆ ಬರುತ್ತಿರುವ ಪ್ರಕರಣಗಳಲ್ಲಿ ಸೊಸೈಟಿಯಿಂದ ವಂಚನೆಗೊಳಗಾದ ಪ್ರಕರಣಗಳೇ ಹೆಚ್ಚು ಎಂದು ಹೇಳುತ್ತಾ, ಜನರು ಹೆಚ್ಚಿನ ಬಡ್ಡಿಗೆ ಆಸೆ ಪಡದೇ ಜೀವನ ಪೂರ್ತಿ  ದುಡಿದು ಗಳಿಸಿದ ನಿವೃತ್ತಿಯ ನಂತರದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ಸುರಕ್ಷಿತವಾಗಿ ಇಡಬೇಕೆಂದು ಹೇಳಿದರು.

ನ್ಯಾಯವಾದಿಗಳು ಹಾಗೂ ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷಕರಾದ ಎನ್.ಆರ್.ಲಾತೂರ ಅವರು ಮಾತನಾಡಿ, ಗ್ರಾಹಕರ ಹಕ್ಕುಗಳ ಕಾನೂನಿನಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ತಿದ್ದುಪಡೆಸಿ-2019ರ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ಹಕ್ಕುಗಳ ರಕ್ಷಣೆ ಹಾಗೂ ಗ್ರಾಹಕರಿಗೆ ಶೀಘ್ರವಾಗಿ ಅಥವಾ ನಿಗದಿತ ಅವಧಿಯಲ್ಲಿ ನ್ಯಾಯ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬ  ವ್ಯಕ್ತಿಯು ಹುಟ್ಟಿದಾಗಿನಿಂದ ಮರಣದವರಿಗೂ ಗ್ರಾಹಕನಾಗಿದ್ದು, ಸಂಸ್ಥೆ, ಸಂಘಗಳು ಕೂಡಾ ಗ್ರಾಹಕರೇಂದು ಪರಿಗಣಿಸಲಾಗುತ್ತದೆ. ಗ್ರಾಹಕರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಅವಶ್ಯಕವಾಗಿದ.ೆ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಹೆಚ್ಚು ಉತ್ತಮಪಡಿಸಿದ ಗ್ರಾಹಕ ರಕ್ಷಣಾ ಕಾಯ್ದೆ-2019 ರಲ್ಲಿ ಹಲವಾರು ಗ್ರಾಹಕ ಕೇಂದ್ರಿತ ಅಂಶಗಳು ಇದ್ದು, ಜಿಲ್ಲಾ ವೇದಿಕೆಗಳಿಗೆ ಸೀಮಿತಗೊಂಡಂತೆ  ರೂ. 20 ಲಕ್ಷಗಳ ಪರಿಹಾರ ಮೊತ್ತವನ್ನು 1 ಕೋಟಿಗೆ 2019 ರ ಕಾಯ್ದೆಯಲ್ಲಿ ಏರಿಸಲಾಗಿದೆ ಎಂದು ಹೇಳಿದರು. 

ಗ್ರಾಹಕರು ಎಂತೆಂತಹ ಸಂದರ್ಭಗಳಲ್ಲಿ ಪರಿಹಾರಕ್ಕೆ ಮೊರೆ ಹೋಗಬಹುದೆನ್ನುವುದನ್ನು ಸವಿಸ್ತಾರವಾಗಿ ತಿಳಿ ಹೇಳಿದ ಅವರು 2019 ರ ಗ್ರಾಹಕರ ರಕ್ಷಣಾ ಕಾಯ್ದೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ಸುನಿತಾ ಬಾಗೇವಾಡಿ  ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿದರ್ೇಶಕರಾದ ಚನ್ನಬಸಪ್ಪ ಕೊಡ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್.ಆರ್.ಮಾಳಿ, ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಗಳಾದ ವೈಜಯಂತಿ ಚೌಗಲಾ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರಾದ ಎಂ.ಎಂ.ಗಡಗಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇ ಶಕರಾದ ಚನ್ನಬಸಪ್ಪ ಕೊಡ್ಲಿ ಅವರು ಸ್ವಾಗತಿಸಿದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರಾದ ಎಂ.ಎಂ.ಗಡಗಲಿ ಅವರು ವಂದಿಸಿದರು.