ನಮ್ಮ ನಾಡಿನ ಗತವೈಭವವನ್ನು ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ: ಲಿಂಗಯ್ಯ ಹಿರೇಮಠ
It is necessary to inform children about the past glory of our country: Lingaiah Hiremath
ಲೋಕದರ್ಶನ ವರದಿ
ಶಿಗ್ಗಾವಿ 28 : ಪ್ರಸ್ತುತ ದಿನಮಾನಗಳಲ್ಲಿ ನಾಡಿನ ನೆಲ, ಜಲ, ಭಾಷಾ ವೈವಿಧ್ಯತೆಯ ಭವ್ಯ ಪರಂಪರೆಯನ್ನ ಮತ್ತು ನಮ್ಮ ನಾಡಿನ ಗತವೈಭವವನ್ನು ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅದ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ದಿಶಾ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜಿಲ್ಲಾ ಕ.ಸಾ.ಪ, ಮತ್ತು ತಾಲೂಕಾ ಕ.ಸಾ.ಪ, ದಿಶಾ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಿ. ವೀರಪಗಪ ಬಸಪ್ಪ ಮತ್ತಿಗಟ್ಟಿ ಮತ್ತು ದಿ.ಮಾತೋಶ್ರೀ ಗಂಗಮ್ಮ ಕೋಂ ಸೋಮಶೇಖರಯ್ಯ ಕಂಬಾಳಿಮಠ ಹಾಗೂ ದಿ.ಯಜಮಾನ ಚನ್ನವೀರ್ಪ ಮಹಾಜನಶೆಟ್ಟರ ಇವರ ಸ್ಮರಣಾರ್ಥವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಶ್ರೀಮಂತ ಸಂಸ್ಕೃತಿ, ಇಡೀ ವಿಶ್ವಕ್ಕೆ ಸಂದೇಶ ಸಾರಿದ ಧೀಮಂತ ಸಂತರ, ಶರಣರ, ಕವಿಗಳ, ಕಲಾವಿದರ, ಬುದ್ಧಿ ಜೀವಿಗಳ ನಾಡು ನಮ್ಮದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಮನದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಮತ್ತು ಭಾಷಾಭಿಮಾನ, ದೇಶಾಭಿಮಾನವನ್ನು ಇಮ್ಮಡಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನದತ್ತಿ ಉಪನ್ಯಾಸಗಳು ಸಹಕಾರಿಯಾಗಿವೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾವಿ ಘಟಕದ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದರು.
ದತ್ತಿ ದಾನಿ ಸಿ ವ್ಹಿ ಮತ್ತಿಗಟ್ಟಿ ಮಾತನಾಡಿ, ಶಿಗ್ಗಾವಿ ನೆಲ ಭಾವೈಕ್ಯತೆಯ ನೆಲೆವೀಡು, ಸಾಮರಸ್ಯದ ತವರೂರಾಗಿದ್ದು ಇಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು “ಕನ್ನಡ ಸಾಹಿತ್ಯ ಭವನ”ದ ಅವಶ್ಯವಿದೆ ಹಾಗಾಗಿ ತಾಲೂಕಾ ಘಟಕ ಈಗಾಗಲೇ ಪುರಸಭೆಯಿಂದ ಜಾಗೆಯನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ನಾವೇಲ್ಲರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿಶಾ ಶಾಲೆಯ ಮುಖ್ಯಸ್ಥ ರಾಘವೇಂದ್ರ ಬೇವಿನಮರದ, ಇಂದಿನ ಮಕ್ಕಳೇ ಮುಂದಿನ ನಾಡಿನ ನಾಯಕರು ಹಾಗಾಗಿ ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ದಿನ ಪತ್ರಿಕೆ, ಕಥೆ, ಕವನ, ಹಾಡು, ಕಾದಂಬರಿ ಓದುವ ಹವ್ಯಾಸವನ್ನು ನಾವೆಲ್ಲರೂ ಬೆಳೆಸಬೇಕು ಹಾಗೂ ಇಂಥಹ ಸಾಹಿತ್ಯಾತ್ಮಕ ಕಾರ್ಯಕ್ರಮಗಳಿಗೆ ನಾವೇಲ್ಲರೂ ಮಕ್ಕಳೊಂದಿಗೆ ಆಗಮಿಸಿ ಮಕ್ಕಳಲ್ಲಿ ವಾಚನಾಭಿರುಚಿಯನ್ನು ಹೆಚ್ಚಿಸಬೇಕು ತಮ್ಮ ಅಜ್ಜಿಯವರ ಹೆಸರಿನಲ್ಲಿ ದತ್ತಿ ನಿಧಿಯನ್ನು ಇಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಸಹ ಶಿಕ್ಷಕ ಯಲ್ಲಪ್ಪ ಹಾರೋಗೊಪ್ಪ ದತ್ತಿ ಉಪನ್ಯಾಸ ನೀಡಿದರು.
ದತ್ತಿ ದಾನಿ ಆನಂದಗೌಡ ಹಿರೇಗೌಡರ ಅವರನ್ನ ಸನ್ಮಾನಿಸಲಾಯಿತು, ತಾಲೂಕಾ ಕ.ಸಾ.ಪ ಅಧ್ಯಕ್ಷ ನಾಗಪ್ಪ ಬೆಂತೂರ, ಲಲಿತಾ ಹಿರೇಮಠ, ರುದ್ರಮ್ಮ ಕಂಬಾಳಿಮಠ, ಸೋಮಶೇಖರ ಮಹಾಜನಶೆಟ್ಟರ, ಸಂಜನಾ ರಾಯ್ಕರ, ಮಂಗಲಾ ಮತ್ತಿಗಟ್ಟಿ. ರತ್ನಮ್ಮ ಪಾಟೀಲ, ಕಾವೇರಿ ಬೋಸಲೆ, ಮಾಂತೇಶ ನಾಯ್ಕೋಡಿ, ಸಂಜೀವ ಪೂಜಾರ, ಕೆ.ಬಿ.ಚನ್ನಪ್ಪ. ಬಸವರಾಜ ಕೌದಿ. ವಿ ಎಂ ರೇವಣಕರ, ಬಸವರಾಜ ಬಮ್ಮಿಗಟ್ಟಿ, ಸುರೇಶ ಹರಿಜನ. ಸಿದ್ದಪ್ಪ ಮಸಳಿ, ದೀಪಕ.ಕೆ, ಎನ್. ಕಲಾಲ. ಎನ್ ಎಂ ನದಾಪ್. ಸೇರಿದಂತೆ ಸಾಹಿತ್ಯಾಭಿಮಾನಿಗಳು, ಕ,ಸಾ.ಪ ಪದಾಧಿಕಾರಿಗಳು, ಆಜೀವ ಸದಸ್ಯರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 