ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ: ಕಾಳೆ

ಲೋಕದರ್ಶನವರದಿ

ಹಾವೇರಿ ೨೮:ನಾಡಿನಲ್ಲಿ ಜನಪದ ಕಲೆ ಉಳಿಯಬೇಕಾದರೆ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ದಲಿತ ಮುಖಂಡ ಪರಶುರಾಮ ಕಾಳೆ ಹೇಳಿದರು.

       ಜಿಲ್ಲೆಯ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಜನಪದ ಸಂಸ್ಕೃತಿಕ ಕಲಾ ಸಂಘ(ರಿ)ಬೆಳವಲಕೊಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಇವರ ಪ್ರಾಯೋಜಿತದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

          ರಾಜ್ಯದ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಅಸಂಘಟಿತ ಕಲಾವಿದರು ಇರುವುದರಿಂದ ಜಿಲ್ಲೆಯ ಗೋಟಗೋಡಿಯಲ್ಲಿ ಜಾನಪದ ವಿಶ್ವ ವಿದ್ಯಾಲಯವನ್ನು ಸಕರ್ಾರ ಮಂಜೂರು ಮಾಡಲು ಸಹಕಾರವಾಗಿದೆ.

 ಕಲೆಯ ಉಳಿವಿಗಾಗಿ ಸಕರ್ಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ.ಕಲಾವಿದರು ಹಿಂದಿನ ಕಾಲದ ಕಲಾ ಕೌಶಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುವುದು ಅಗತ್ಯವಾಗಿದೆ ಎಂದರು.

          ಇದೇ ಅವಧಿಯಲ್ಲಿ ನಾಗರಾಜ ಗಾಳೆಪ್ಪನವರ,ಅಕ್ಕವ್ವ ಚಂದ್ರು ಲಮಾಣಿ ಹಾಗೂ ಸಂಘಡಿಗರಿಂದ ಗೊರವರ ಕುಣಿತ,ಭಕ್ತಿಗೀತೆ ಪ್ರಸ್ತುತ ಪಡಿಸಿದರು.ಕಾರ್ಯಕ್ರಮದಲ್ಲಿ ಜನಪದ ಸಂಸ್ಕೃತಿಕ ಕಲಾ ಸಂಘ(ರಿ)ಅಧ್ಯಕ್ಷರಾದ ಸಿದ್ದಪ್ಪ ತಳವಾರ, ಸಹದೇವಪ್ಪ ಬೀರವಳ್ಳಿ.ಸೋಮಣ್ಣ ಸುರಣ್ಣನವರ, ರುದ್ರಪ್ಪ ಕ್ಷೌರದ.ಮೌನೇಶ ಕಮ್ಮಾರ.ಹನಮಂತಪ್ಪ ಶ್ಯಾಡಂಭಿ.ಧರ್ಮಣ್ಣ ಕಿವಡನವರ ಅನೇಕ ಕಲಾಪ್ರೇಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.