ವಿಮಾನ ಸಮಯಕ್ಕಿಂತ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ಬುರುವುದು ಕಡ್ಡಾಯ, ಮೇ 25 ರಿಂದ ಸೇವೆ ಆರಂಭ

ನವದೆಹಲಿ, ಮೇ 21,ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದು, ದೇಶೀಯ ವಿಮಾನಗಳ ಸೇವೆ ಮೇ 25 ರಿಂದ ಪುನರಾರಂಭಗೊಳ್ಳಲಿದೆ. ಪ್ರಯಾಣಿಕರಿಗೆ ಹಲವು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವಿಮಾನ ಸಮಯಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬರುವುದು ಮತ್ತು ಆರೋಗ್ಯ ಸೆತು ಆ್ಯಪ್  ಹೊಂದಿರುವುದು ಅಗತ್ಯವಾಗಿರುತ್ತಿದೆ.ಪ್ರಯಾಣಿಕ ವಿಮಾನ ಸಮಯಕ್ಕಿಂತ ಕನಿಷ್ಠ ಎರಡು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ನಾಲ್ಕು ಗಂಟೆಗಳಲ್ಲಿ ವಿಮಾನ ಹಾರಾಟ ಮಾಡುವ ಪ್ರಯಾಣಿಕರಿಗೆ ಮಾತ್ರ ಟರ್ಮಿನಲ್ ಪ್ರವೇಶಿಸಲು ಅವಕಾಶವಿರುತ್ತದೆ.  ಟರ್ಮಿನಲ್ ಪ್ರವೇಶಿಸುವ ಮೊದಲು ಪ್ರಯಾಣಿಕರ ದೈಹಿಕ ಉಷ್ಣತೆ ತಪಾಸಣೆ ಮಾಡಲಾಗುತ್ತದೆ ಮತ್ತು ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯಗೊಳಿಸಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರೋಗ್ಯ ಸೆತು ಅಪ್ಲಿಕೇಶನ್ ಹೊಂದಲೇ ಬೇಕಾದ ಅವಶ್ಯಕತೆ ಇಲ್ಲ.ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ದೇಶದ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಮಾರ್ಚ್ 25 ರಂದು ಸ್ಥಗಿತಗೊಳಿಸಲಾಗಿತ್ತು. ದೇಶೀಯ ಪ್ರಯಾಣಿಕರ ಹಾರಾಟ ಮೇ 25 ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಪ್ರಕಟಿಸಿದ್ದಾರೆ.