ವೈದಿಕ ಪರಂಪರೆಗೆ ಲಿಂಗಾಯತರು ಬಲಿಯಾಗುತ್ತಿರುವದು ವಿಪರ್ಯಾಸ: ಪ್ರೊ.ಸಿದ್ದು ಯಾಪಲಪರ್ವಿ
It is ironic that Lingayats are falling victim to Vedic heritage: Prof. Siddu Yapalaparvi
ಬೆಳಗಾವಿ 26: ಧರ್ಮದ ಹೆಸರಲ್ಲಿ ಮತ್ತು ಆಚರಣೆ ಹೆಸರಲ್ಲಿ ಭಯವನ್ನು ಬಿತ್ತಿ, ಭಯವನ್ನೇ ನಗದಿಕರಣ ಮಾಡುವ ವೈದಿಕ ಪರಂಪರೆಗೆ ಲಿಂಗಾಯತರು ಬಲಿಯಾಗುತ್ತಿರುವದು ವಿಪರ್ಯಾಸವೆಂದರೆ ಅತಿಶಯೋಕ್ತಿಯಾಗಲಾದು. ಲಿಂಗಾಯತರಿಗೆ ತಮ್ಮದೇ ಆದ ಪ್ರತ್ಯೇಕ ಧರ್ಮದ ಆಚಾರ ವಿಚಾರಗಳ ಹಾಗೂ ಸಕಲ ಜೀವಾತ್ಮರಿಗೂ ಲೇಸನ್ನು ಬಯಸುವ ಉತ್ಕೃಷ್ಟ ಧರ್ಮವೊಂದಿದೆ ಎಂಬುದನ್ನು ಬಿಟ್ಟು ಬೇರೆ ಧರ್ಮದ ಆಚರಣೆಗೆ ಬಲಿಯಾಗುತ್ತಿದ್ದಾರೆ ಎಂದು ವಚನ ಟಿವಿ ಯ ಪ್ರಧಾನ ಸಂಪಾದಕರು, ಹಿರಿಯ ಸಾಹಿತಿಗಳು, ಸಮಾಜಪರ ಚಿಂತಕ ಪ್ರೊ.ಸಿದ್ದು ಯಾಪಲಪರ್ವಿ ಅವರು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಲಿಂಗಾಯತ ಧರ್ಮದ ಸವಾಲುಗಳು ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಲಿಂಗಾಯತ ಧರ್ಮಕ್ಕೆ ಖಚಿತವಾದ ಆಧಾರ ಮತ್ತು ಸಾಕ್ಷಿ ಎಂದರೆ ಅದು ಹನ್ನೆರಡನೆ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ. ನಮ್ಮದೇ ಆದ ಧರ್ಮವಿದೆ, ಅದರದೇ ಆದ ಸಿದ್ಧಾಂತವಿದೆ ಅಂತಾ ಯಾಕೆ ನಮ್ಮಕೆಲವು ಲಿಂಗಾಯತರು ಒಪ್ಪತಾ ಇಲ್ಲ? ಧರ್ಮದ ಕುರಿತು ಜಾಗೃತಿ ಮೂಡಿಸಲು ನಾವು ವಿಫಲರಾಗುತ್ತಿದ್ದೇವೆ. ಅಂತಾ ಅನಿಸುತ್ತಿದೆ. ಪಟ್ಟಭದ್ರ ಹಿತಾಸಕ್ತಿವುಳ್ಳ ಕೆಲವು ಸಂಘಟನೆಗಳು ನಮ್ಮ ಧರ್ಮದ ಯುವಕರನ್ನು ಮಠಾಧೀಶರನ್ನು ಉಪಯೋಗಿಸಿಕೊಂಡು ಅವರ ಮುಖಾಂತರ ಲಿಂಗಾಯತ ಧರ್ಮದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನಗಳು ನಿರಂತರ ಪ್ರಯತ್ನ ನಡೆಯುತ್ತಿವೆ. ಸೋ ಕಾಲ್ಡ ನಮ್ಮ ಲಿಂಗಾತರಿಗೆ ಯಾವಾಗ ಅರಿವಾಗುವದೊ ತಿಳಿದಿಲ್ಲ. ಅಕ್ಕಮಹಾದೇವಿ, ಅಲ್ಲಮರು, ಚನ್ನ ಬಸವಣ್ಣ ಬಸವಣ್ಣನವರ ವಚನಗಳು ಸರ್ವ ಕಾಲಕ್ಕೂ ಸರ್ವ ಜನಾಂಗಕ್ಕೂ ಪ್ರಸ್ತುತವಾದುಗಳು. ವಚನ ಸಾಹಿತ್ಯದ ಸಾರವನ್ನು ಅವಲೋಕಿಸಿದಾಗ ಒಬ್ಬೊಬ್ಬ ಶರಣರಿಗೂ ಒಂದೊಂದು ನೋಬಲ್ ಪ್ರಶಸ್ತಿ ಬರಬೇಕು. ಅಂತಹ ಶ್ರೀಮಂತ ಸಾಹಿತ್ಯ ವಚನ ಸಾಹಿತ್ಯ.ಹಲವು ವಿಷಯಗಳ ಕುರಿತು ವಚನಗಳಲ್ಲಿ ವಿಶ್ಲೇಷಣೆ ಇದೆ. ಇಪ್ಪತ್ತನೆಯ ಶತಮಾನದಲ್ಲಿ ಮನಸ್ಸಿನ ಕುರಿತು ಸಂಶೋಧನೆ ಮಾಡಿ ನೋಬಲ್ ಪ್ರಶಸ್ತಿ ಪಡೆದ ವಿದ್ವಾಂಸರು ಹೇಳಿದ ವಿಷಯಗಳನ್ನು ಹನ್ನೆರಡನೆಯ ಶತಮಾನದ ಬಸವಣ್ಣ, ಚನ್ನ ಬಸವಣ್ಣ ಅಲ್ಲಮ,ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಹೇಳಿದ್ದನ್ನು ನೋಡಿದಾಗ ವಚನ ಸಾಹಿತ್ಯ ಎಷ್ಟೊಂದು ಶ್ರೀಮಂತ ಸಾಹಿತ್ಯ ಅನ್ನುವುದು ನಮಗೆ ತಿಳಿಯುತ್ತದೆ. ಆ ನಿಟ್ಟಿನಲ್ಲಿ ವಚನ ಸಾಹಿತ್ಯವನ್ನು ಓದಿ, ಅರ್ಥೈಸಿ ಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮಠಾಧೀಶರು, ಸಮಾಜ ಹಿರಿಯರು ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಸಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಜ್ಯದ ಸರ್ವ ಬಸವಪರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಬಸವ ಸಾಂಸ್ಕೃತಿಕ ಅಭಿಯಾನ ರೂಪ ರೇಷೆಗಳ ಕುರಿತು ವಿವರಿಸಿದರು. ಧರ್ಮ ಜಾಗೃತಿ, ವಚನಗಳ ಪ್ರಚಾರ ಪ್ರಸಾರ, ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯುವ ಅಭಿಯಾನದ ಎರಡನೆಯ ಹಂತದ ಹೋರಾಟ ಮುಂತಾದ ವಿಷಯಗಳ ಕುರಿತು ಜನಜಾಗೃತಿ ಮೂಡಿಸುವ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ಬೆಳಗಾವಿಯಲ್ಲಿ ಸಪ್ಟೆಂಬರ್ 11ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ವ ಜನಾಂಗದ ಸಹಕಾರ ಕೋರಿದರು. ಅಲ್ಲದೇ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ಕೋರಿದರು. ಪ್ರಸಾದ ದಾಸೋಹ ಮಾಡಿ ಷಟ್ ಸ್ಥಲ ಧ್ವಜಾರೋಹಣ ಮಾಡಿದ ಶರಣ ದಂಪತಿ ಸುರೇಖಾ ಶ್ರೀಕಾಂತ ವಣ್ಣೂರ ಅವರು ವೇದಿಕೆಯ ಮೇಲಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ನಗರ ಘಟಕದ ಪ್ರ.ಕಾರ್ಯದರ್ಶಿ ಚಂದ್ರ್ಪ ಬೂದಿಹಾಳ ನಿರ್ವಹಣೆ ಮಾಡಿದರು. ಶರಣೆ ನೇತ್ರಾವತಿ ಕೆಂಪಣ್ಣ ರಾಮಾಪೂರಿ ಶರಣು ಸಮರ್ಪಣೆ ಮಾಡಿದರು.
ಎಸ್ ಜಿ ಸಿದ್ನಾಳ, ಮುರಿಗೆಪ್ಪ ಬಾಳಿ, ಅರವಿಂದ ಪರುಶೆಟ್ಟಿ, ಶಂಕರ ಶೆಟ್ಟಿ, ರುದ್ರಗೌಡರ, ಶಿವಾನಂದ ನಾಯಕ, ಪ್ರವೀಣ ಚಿಕಲಿ, ಮೋಹನ ಗುಂಡ್ಲೂರ, ಬಸವರಾಜ ಮಿಂಡೊಳ್ಳಿ, ಸುಜಾತಾ ಮತ್ತಿಕಟ್ಟಿ, ರತ್ನಾ ಬೆಣಚಮರ್ಡಿ, ಭಾಗ್ಯ ಬೆಣಚಮರ್ಡಿ, ಕಾವೇರಿ ಕಿಲಾರಿ, ಸುಲೋಚನ ಮಠದ, ಅನ್ನಪೂರ್ಣ ಮಳಗಲಿ, ನಂದಾ ಬಗಲಿ, ಮಹಾದೇವಿ ಬೂದಿಹಾಳ, ಶೈಲಾ ವನಹಳ್ಳಿ, ಎಮ್ ಎ ಕೋರಿಶೆಟ್ಟಿ, ಡಾ. ಅಡಿವೆಪ್ಪ ಇಟಗಿ, ಅಶೋಕ ಭದ್ರಶೆಟ್ಟಿ ವಿವಿಧ ಬಡಾವಣೆಯ ಬಸವಾಭಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 