ಸತತ ಓದು ಅಧ್ಯಯನವಿಲ್ಲದೆ ಕೃತಿ ಬರೆಯಲು ಸಾಧ್ಯವಿಲ್ಲ : ಡಾ.ಬಸವರಾಜ ಜಗಜಂಪಿ
It is impossible to write a literary work without continuous reading and study: Dr. Basavaraja Jagaj
ಬೆಳಗಾವಿ 27 : ಸತತ ಓದು, ಅಧ್ಯಯನವಿಲ್ಲದೆ ಕೃತಿ ಬರೆಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ ಹೇಳಿದ್ದಾರೆ.* ರಂಗಸೃಷ್ಟಿ ಸಾಂಸ್ಕೃತಿಕ ಸಂಘ (ರಿ), ಬೆಳಗಾವಿ ವತಿಯಿಂದ ಡಾ. ಪಿ. ಜಿ. ಕೆಂಪಣ್ಣವರ ಅವರ ‘ಜಿನ ದೀವಿಗೆ’ ಹಾಗೂ ಶೀರೀಷ ಜೋಶಿ ಅವರ ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರೆ್ಣ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದು ಬಿಡುಗಡೆಯಾಗಿರುವ ಎರಡೂ ಕೃತಿಗಳು ಅತ್ಯಂತ ತಳಸ್ಪರ್ಶಿಯಾಗಿ ಬರೆದವುಗಳಾಗಿವೆ.
ಬಹಳಷ್ಟು ಅಧ್ಯಯನ ಮಾಡಿ ಬರೆದವುಗಳಾಗಿವೆ ಎಂದು ಅವರು ಹೇಳಿದರು..ಧರ್ಮ ಸಹಿಷ್ಣುತೆ ಎಂದರೆ ಏನು ಎನ್ನುವುದನ್ನು ಜೈನ ಧರ್ಮೀಯರಿಂದ ಕಲಿತುಕೊಳ್ಳಬೇಕು ಎಂದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಜೈನ ಧರ್ಮೀಯರ ಕೊಡುಗೆ ಸಾಕಷ್ಟಿದೆ ಎಂದರು.ಮತ್ತೋರ್ವ ಸಾಹಿತಿ ಎಲ್. ಎಸ್. ಶಾಸ್ತ್ರಿ ಮಾತನಾಡಿ, ಕನ್ನಡ- ಮರಾಠಿ ಬಾಂಧವ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಕೃತಿಯಾಗಿರುವ ಮರಾಠಿಯೊಳಗೊಂದು ಕನ್ನಡ ಗತವೈಭವ ಮರಾಠಿ ಭಾಎಗೂ ಅನುವಾದವಾಗಬೇಕೆಂದರು.
ಇಬ್ಬರು ಲೇಖಕರೂ ಬಹಳಷ್ಟು ಅಧ್ಯಯನ ಮಾಡಿದವರಾಗಿದ್ದು, ಮೌಲಿಕ ಕೃತಿಗಳನ್ನು ನೀಡಿದ್ದಾರೆ ಎಂದರು.ಹಿರಿಯ ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ಪ್ರಾಧ್ಯಾಪಕರಾದ ಡಾ. ಎಚ್. ಬಿ. ಕೋಲ್ಕಾರ ಅವರು ಕೃತಿಗಳ ಕುರಿತು ಮಾತನಾಡಿದರು.ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಮೇಶ ಜಂಗಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕೃತಿಕಾರರಾದ ಡಾ.ಪಿ.ಜಿ.ಕೆಂಪಣ್ಣವರ್ ಹಾಗೂ ಶೀರೀಷ ಜೋಶಿ ಮಾತನಾಡಿದರು. ಶರಣಯ್ಯ ಮಠಪತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶುಭಾ ಶ್ರೀನಾಥ್ ಜೋಶಿ ವಂದಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 