ಅನ್ನದ ಮಹತ್ವವನ್ನು ಅರಿಯುವುದು ಮುಖ್ಯ: ಗುರುಮಹಾಂತ ಶ್ರೀ

ಲೋಕದರ್ಶನವರದಿ

ಹುನಗುಂದ25; ಅನ್ನವನ್ನು ಚೆಲ್ಲಿವುದು ಮತ್ತು ಕೆಡಸುವುದು ಮಹಾಪಾಪ ಎನ್ನವುದ್ದನ್ನು ಸದಾ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾಥರ್ಿಗಳಿಗೆ ಬೋಧಿಸುವಂತ ಬಹು ದೊಡ್ಡ ವ್ಯಕ್ತಿತ್ವ ಕಾಯಕ ಯೋಗಿ ಲಿಂ,ಗುರುಬಸವಾರ್ಯ ಮಠ ಗುರುಗಳದಾಗಿತ್ತು ಎಂದು ಚಿತ್ತರಗಿ ಸಂಸ್ಥಾನಮಠ ಇಲಕಲ್ಲದ ಗುರುಮಹಾಂತ ಶ್ರೀಗಳು ಹೇಳಿದರು.                            ಮಂಗಳವಾರ ಪಟ್ಟಣದ ವಿಜಯ ಮಹಾಂತೇಶ ಉಚಿತ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಯೋಗಿ ಲಿಂ,ಶ್ರೀ ಗುರುಬಸವಾರ್ಯ ಮಠ ಗುರುಗಳ 41 ನೆಯ ಪುಣ್ಯಸ್ಮರಣೆ ಸಮಾವೇಶದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು,ಅನ್ನದ ಮಹತ್ವವನ್ನು ಅರಿತುಕೊಂಡವರು ಬಹು ದೊಡ್ಡ ವ್ಯಕ್ತಿಗಳಾಗಲು ಸಾಧ್ಯ.ವಿದೇಶದವರು ಭಾರತೀಯರಿಗೆ ಅನ್ನವನ್ನು ವ್ಯರ್ಥವಾಗಿ ಹಾಳ ಮಾಡುತ್ತಿರುವುದ್ದಕ್ಕೆ ಅನ್ನದ ಬೆಲೆ ಗೊತ್ತಿಲ್ಲದ ಭಾರತೀಯರು ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ.ಅದಕ್ಕೆ ನಾವ್ಯಾರು ಅನ್ನವನ್ನು ಸುಮ್ಮಸುಮ್ನೆ ವ್ಯರ್ಥ ಮಾಡುವುದ್ದನ್ನು ನಿಲ್ಲಿಸಬೇಕು.

    ಪ್ರಸಾದ ಮಹತ್ವವನ್ನು ಜಗತ್ತಿನಲ್ಲಿ ಮೊಟ್ಟ ಮೊದಲು ತಿಳಿಸಿದವರು 12 ನೆಯ ಶತಮಾನದ ಬಸವಣ್ಣನವರು.ಅವರು ಹಾಕಿ ಕೊಟ್ಟ ಪ್ರಸಾದ ಮಹತ್ವದ ಹಾದಿಯನ್ನು ಮಠಗುರುಗಳು ತಮ್ಮ ಜೀವನದಲ್ಲಿ ನಿಷ್ಠೆಯನ್ನು ಪಾಲಿಸಿದವರು.ಅಂತವರ ಪುಣ್ಯಸ್ಮರಣೆ ಮಾಡುವುದು ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ.                                                                               ನಿವೃತ್ತ ಪ್ರಾಚಾರ್ಯ ಅಮರೇಗೌಡ ಪಾಟೀಲ ಮಾತನಾಡಿ ವಿದ್ಯಾಥರ್ಿಗಳು ವಿದ್ಯಾವಂತರಾಗುವುದರ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿತುಕೊಳ್ಳುವುದು ಮುಖ್ಯ. ಶಿಕ್ಷಣದಿಂದ ನಮ್ಮ ದೇಶದ ಅಭಿವೃದ್ದಿಯಾಗಲು ಸಾಧ್ಯ.ಹಿರಿಯರ ಬಗ್ಗೆ ಗೌರವ,ಕಿರಿಯರ ಬಗ್ಗೆ ಅನುಕಂಪ ಇರಬೇಕು.

     ನಮ್ಮ ನೋವು ನಮಗೆ ಅರ್ಥವಾದರೇ ನಾವು ಜೀವಂತವಾಗಿ ಇದ್ದೇವೆ ಎಂದರ್ಥ.ಇನ್ನೊಬ್ಬರ ನೋವುವನ್ನು ಅರ್ಥ ಮಾಡಿಕೊಂಡವರು ಅವರು ನಿಜವಾದ ಮನುಷ್ಯರು ಎಂದು ಹೇಳಿವ ಮೂಲಕ ಉಚಿತ ಪ್ರಸಾದ ನಿಲಯಕ್ಕೆ 1 ಲಕ್ಷ ದೇಣಿಗೆಯನ್ನು ನೀಡಿದರು.                                                        ಪಶುಪಾಲನ ಇಲಾಖೆಯ ನಿವೃತ್ತ ಉಪನಿದರ್ೇಶಕ ಡಾ.ಡಿ.ಎಸ್.ಹವಲ್ದಾರ,ಉಚಿತ ಪ್ರಸಾದ ನಿಲಯದ ಕಾಯರ್ಾಧ್ಯಕ್ಷ ಸಂಗಣ್ಣ ಚಿನಿವಾಲ, ಡಾ.ಮಲ್ಲಣ್ಣ ನಾಗರಾಳ,ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿದರು.

  ವಿ.ಮ.ವಿ.ವ ಸಂಘದ ಗೌರವ ಕಾರ್ಯದಶರ್ಿ ಬಿ.ಎಂ.ಹೊಕ್ರಾಣಿ ಅಧ್ಯಕ್ಷತೆಯನ್ನು ವಹಿಸಕೊಂಡಿದ್ದರು.  ಈ ಸಂದರ್ಭದಲ್ಲಿ ಹಿರಿಯ ಟ್ರಸ್ಟಿ ಎಸ್.ಎಸ್.ಬೆಳ್ಳಿಹಾಳ, ವಿ.ಮ.ವಿ.ವ ಸಂಘದ ನಿದರ್ೇಶಕ ವೀರಣ್ಣ ಚಟ್ಟೇರ, ವಿ.ಮ.ವಿ.ವ ಸಂಘದ ಅಭಿವೃದ್ದಿ ಅದಿಕಾರಿ ವ್ಹಿ,ಬಿ, ಬಳಿಗಾರ, ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ, ಎಮ್.ಎನ್. ತೆನ್ನಿಹಳ್ಳಿ, ಎಸ್.ಜಿ. ಎಮ್ಮಿ, ಎಂ,ಎಸ್. ಮಠ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.