ಮಕ್ಕಳಿಗೆ ಕಲೆಗಳ ಅರಿವು ಮುಖ್ಯ:ಚಂದ್ರಕಾಂತ ಬೆಲ್ಲದ
ಧಾರವಾಡ 10 : ಮಕ್ಕಳು ಕೇವಲ ಓದಿನತ್ತ ಗಮನ ಹರಿಸುವುದಲ್ಲದೆ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸೇರಿದಂತೆ ಹಲವಾರು ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಪ್ರೇರೆಪಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ
ಇಂದು ಧಾರವಾಡ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‌ಗಳ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ “ನಮ್ಮ ಸಂವಿಧಾನ ನಮ್ಮ ಕಲರವ” ಧ್ಯೇಯವಾಕ್ಯದಡಿ ಹಮ್ಮಿಕೊಂಡಿದ್ದ ಚಿಣ್ಣರಮೇಳ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಕುಟುಂಬದ ಮಾತ್ರವಲ್ಲದೆ ಭವಿಷ್ಯದಲ್ಲಿ ದೇಶದ ಆಸ್ತಿ. ಆದ್ದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಪೋಷಕರು ನೀಡಬೇಕು. ಕಲೆ, ಬಹುಸಂಸ್ಕೃತಿಗಳ ಕುರಿತು ಅರಿವನ್ನು ಮೂಡಿಸುವ ಕಾರ್ಯವನ್ನು ರಂಗಾಯಣವು ಬೇಸಿಗೆ ಶಿಬಿರದ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಒಂದು ತಿಂಗಳ ಕಾಲ ನಡೆಯುವ ಈ ಶಿಬಿರವು ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದು ಹೇಳಿದರು.ಚಿತ್ರಕಲಾ ಶಿಲ್ಪಿ ಡಿ.ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಸುರೇಶ ಹಾಲಭಾವಿ ಅವರು ಮಾತನಾಡಿ, ಮಕ್ಕಳು ಚಿಕ್ಕವರಿದ್ದಾಗಲೆ ಅವರಿಗೆ ಮುಂದಿನ ಭವಿಷ್ಯದ ಕುರಿತು ಉತ್ತಮ ಮಾರ್ಗವನ್ನು ನೀಡಬೇಕು. ಈ ಶಿಬಿರದಲ್ಲಿ ಹಲವಾರು ಕಲೆಗಳ ಕುರಿತು, ವಿಚಾರ, ಪ್ರಸ್ತುತ ವಿದ್ಯಮಾನ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಪರಿಣಿತರಿಂದ ಮಕ್ಕಳಿಗೆ ತಿಳಿಸುವುದರ ಮೂಲಕ ಅವರನ್ನು ಉತ್ತಮ ನಾಗರಿಕನ್ನಾಗಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಮಕ್ಕಳೊಂದಿಗೆ ಬೆರೆಯುವುದೇ ಒಂದು ಸಂತೋಷದ ಸಂಗತಿ. ಇಂದಿನ ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ಅರಿವೇ ಇಲ್ಲ. ಈ ಶಿಬಿರದಲ್ಲಿ ಮಕ್ಕಳಿಗೆ ಹಲವಾರು ಕಲೆಗಳು, ಚಟುವಟಿಕೆಗಳು ಸೇರಿದಂತೆ ನಾಟಕವನ್ನು ಕಲಿಸುವುದರ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸುವ ಕಾರ್ಯವನ್ನು ರಂಗಾಯಣವು ಮಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‌ಗಳು ಈ ಬಾರಿ ಚಿಣ್ಣರಮೇಳಕ್ಕೆ ಕೈಜೋಡಿಸಿದ್ದು ಹರ್ಷವೆನಿಸುತ್ತಿದೆ ಎಂದು ಹೇಳಿದರು.ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಪಾರ್ವತಿ ಹಾಲಭಾವಿ, ಬಿ. ಮಾರುತಿ, ಪಂ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌್ಟನ ಸದಸ್ಯರಾದ ನಿಜಗುಣಿ ರಾಜಗುರು, ಶಿಬಿರ ನಿರ್ದೇಶಕರಾದ ಲಕ್ಷ್ಮಣ ಪೀರಗಾರ ಅವರು ಉಪಸ್ಥಿತರಿದ್ದರು.