ಮಕ್ಕಳ ಹಕ್ಕುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ

ಹಾವೇರಿ25: ಮಕ್ಕಳು ಶಿಕ್ಷಣದ ಪಡೆಯುವುದರ ಜೊತೆಗೆ ಮಕ್ಕಳ ಹಕ್ಕುಗಳ ಹಾಗೂ ಗ್ರಾಹಕರ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಾಗೂ ಚೈತನ್ಯ ಗ್ರಾಮೀಣ ಅಬಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನೆಲೋಗಲ್ ಗ್ರಾಮದ ಸಕರ್ಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಗ್ರಾಹಕರ ಹಕ್ಕು ಕಾಯ್ದೆ ಬಗ್ಗೆ ಸಮಾಜದ ಬಹುತೇಕ ಜನತೆಗೆ ಅರಿವು ಇರದ ಕಾರಣ ಮೋಸ ಹೋಗುವುದು ಸಾಮಾನ್ಯವಾಗಿದೆ. ಗ್ರಾಹಕರು ತಮಗೆ ಮೋಸವಾದಾಗ ಯಾವ ರೀತಿ ನ್ಯಾಯ  ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಗ್ರಾಹಕರ ಮಾಹಿತಿ ಹಕ್ಕು ಜಾಗೃತಿ ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾಥರ್ಿಗಳು ಈಗಿನಿಂದಲೇ ಗ್ರಾಹಕರ ಮಾಹಿತಿ ಹಕ್ಕು ಬಗ್ಗೆ ತಿಳಿದುಕೊಂಡು ಇತರರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ನಿದರ್ೇಶಕ ಎಸ್.ಎಚ್. ಮಜೀದ್ ಅವರು ಮಾತನಾಡಿ, ಆಕರ್ಷಕ ಜಾಹೀರಾತುಗಳಿಗೆ ಮಾರುಹೋಗದೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು ಹಾಗೂ ಖರೀದಿಸುವ ಪ್ರತಿ ವಸ್ತುವಿಗೆ ರಸೀದಿ ಪಡೆಯಬೇಕು. 

      ಖರೀದಿಸುವ ವಸ್ತುವಿನಲ್ಲಿ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಇತರೆ ಲೋಪ ದೋಷಗಳು ಕಂಡುಬಂದರೆ  ಗ್ರಾಹಕರ ವೇದಿಕೆ ಮೂಲಕ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.

      ಲೋಗಲ್ನ ಸಕರ್ಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಎಚ್.ಎಂ. ದುಮ್ಮಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುತಿ.ಎನ್.ಎಚ್, ಶಿಕ್ಷಕರಾದ ಎಫ್.ಬಿ. ಮರಡೂರ, ಸಿ.ಎಸ್. ಅರಳಹಳ್ಳಿ, ಎಸ್.ಜಿ.ಅಡವಿ  ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರ-1098 ಸದಸ್ಯರಾದ ಶಿವಾನಂದ ಗದಿಗೇರ್ ಇತರರು ಉಪಸ್ಥಿತರಿದ್ದರು.