ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಕಡಿಮೆ ಅವಧಿಯಲ್ಲಿ 12 ಕೋಟಿ ವ್ಯವಹಾರ ಮಾಡುತ್ತಿರುವುದು ಶ್ಲಾಘನೀಯ

It is commendable that Karnataka Credit Souharda Cooperative Society is doing business of 12 crores

ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ  ಕಡಿಮೆ ಅವಧಿಯಲ್ಲಿ 12 ಕೋಟಿ ವ್ಯವಹಾರ ಮಾಡುತ್ತಿರುವುದು ಶ್ಲಾಘನೀಯ 

 ಹಳ್ಳೂರ  09  : ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ  ಕಡಿಮೆ ಅವಧಿಯಲ್ಲಿ 12 ಕೋಟಿ ವ್ಯವಹಾರ ಮಾಡುತ್ತಿರುವುದು ಶ್ಲಾಘನೀಯ ಆಡಳಿತ ಮಂಡಳಿಯವರು ಸಾರ್ವಜನಿಕರ ಜೊತೆ ಒಳ್ಳೆಯ ಸಹಕಾರ ನೀಡುತ್ತಿದ್ದಾರೆ ಗ್ರಾಹಕರೇ ಸಂಘ ಸಂಸ್ಥೆಗಳಿಗೆ ಜೀವಾಳ ಹೆಚ್ಚು ಲಾಭ ಗಳಿಸಿ ಬ್ಯಾಂಕ್ ಉನ್ನತ ಮಟ್ಟಕ್ಕೆರಲೆಂದು ಬಬಲಾದಿ ಸಿದ್ದರಾಮಯ್ಯ ಶ್ರೀಗಳು ಹೇಳಿದರು.                                            ಹಳ್ಳೂರ ಬಸವ ನಗರದಲ್ಲಿ  ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಹಕಾರ ಮತ್ತು ಸೌಹಾರ್ದ ಕ್ಷೆತ್ರದಲ್ಲಿ ಸಹಕಾರ ಸಹಯೋಗ ಸೌಹಾರ್ದತೆಯ ಭಾವನೆಗಳಿರುತ್ತವೆಂದ                                                        ದಿವ್ಯ ಸಾನಿಧ್ಯ ವಹಿಸಿದ ಡಾ  ಮಹಾಂತ ಪ್ರಭು ಮಹಾಸ್ವಾಮಿಗಳು ಮಾತನಾಡಿ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಬೇಕಾದರೆ ಹಳ್ಳಿಗಳು, ರೈತರ ಜೀವನ ಮಟ್ಟವು ಸುಧಾರಣೆಯಾದರೆ ದೇಶವು ಉದ್ದಾರವಾಗುತ್ತವೆ. ರೈತರು ಕೆಟ್ಟ ವ್ಯಸನಕ್ಕೆ ಬಲಿಯಾಗಿ ಸಾಲ ಮಾಡಿಕೊಂಡು ಆತ್ಮ ಹತ್ಯೆ ಮಾಡಿಕೊಳ್ಳದೆ ಭೂಮಿಯಲ್ಲಿ ಒಳ್ಳೆ ಬೆಳೆ ಬೆಳೆದು ಸೌಹಾರ್ದ್‌ ದಂತ ಬ್ಯಾಂಕ್ ಗಳಲ್ಲಿ ಹಾಗೂ ಸರಕಾರದ ಸೌಲಭ್ಯಗಳನ್ನು  ಪಡೆದುಕೊಂಡು  ಆರ್ಥಿಕ ಮಟ್ಟವನ್ನು  ಹೆಚ್ಚಿಸಿಕೊಳ್ಳಿರೆಂದು  ಹೇಳಿದರು. ಉದ್ಘಾಟನೆ ನೆರವಿರಿಸಿದ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಸುಸಜ್ಜಿತ ಸ್ವಂತ ಕಟ್ಟಡ ಒಳ್ಳೆಯ ವಾತಾವರಣ ಹೊಂದಿದ ಸೌಹಾರ್ದ ಬ್ಯಾಂಕ್ ಸಾರ್ವಜನಿಕರಿಗೆ ರೈತರಿಗೆ ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ನೀಡಿರಿ ಗ್ರಾಹಕರು ಸಾಲ ತಗೆದುಕೊಂಡು ಮರಳಿ ಸರಿಯಾದ ಸಮಯಕ್ಕೆ ಮರುಪಾವತಿಸಿದರೆ ಸೌಹಾರ್ದ ಸಂಸ್ಥೆಯು ಹೆಚ್ಚು ಬೆಳೆದು ಮುಂದಿನ ದಿನಗಳಲ್ಲಿ ಉಪ ಶಾಖೆಗಳಾಗಿ ಕಾರ್ಯ ನಿರ್ವಹಿಸಲಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ ಗುರುರಾಜ ನಿಡೋಣಿ ಮಾತನಾಡಿ  ಭವ್ಯ ಸುಸಜ್ಜಿತ ಸ್ವಂತ ಕಟ್ಟಡ 4 ಹಳ್ಳಿಗಳ ಹದ್ದಿನಲ್ಲಿ ನಿರ್ಮಿಸಿ  ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಪ್ರಗತಿ ಪತದತ್ತ  ಸಾಗುತ್ತಿದೆಂದರು. ದಿವ್ಯ ಸಾನಿಧ್ಯ ವಹಿಸಿದ ಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದರು ಪ್ರಾರಂಭದಲ್ಲಿ ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ಪೂಜೆ ಹೋಮ ಹವನದೊಂದಿಗೆ ನೆರವೇರಿತು.                                             ಕರ್ನಾಟಕ ರಾ ಸೌ ಸ ನಿ ಬೆಂಗಳೂರು ನಿರ್ದೇಶಕರು ಜಗದೀಶ ಕವಟಗಿಮಠ.ಸೌ ಪ್ರಾ ವ್ಯ ಬೆಳಗಾವಿ ಬಸವರಾಜ್ ಹೊಂಗಲ.ಮಾ ಜಿ ಪ ಸದಸ್ಯ  ಭೀಮಶಿ ಮಗದುಮ್‌.ಪ್ರಕಾಶ್ ಅಂಗಡಿ. ಅಧ್ಯಕ್ಷ ಸಿದ್ರಾಯ ಬೆನಚಿನಮರಡಿ. ಉಪಾಧ್ಯಕ್ಷ ಬಸಪ್ಪ ಮಾಲಗಾರ. ಅರ್ಚಕ ಮಲ್ಲಪ್ಪ ಪೂಜೇರಿ. ಮಾದೇವ ಹೊಸಟ್ಟಿ.ಮುರಿಗೆಪ್ಪ ಮಾಲಗಾರ. ಸಿಬ್ಬಂದಿಗಳಾದ ಕಾರ್ಯದರ್ಶಿ ಸಂಜಯ ಹೊಸಟ್ಟಿ . ಶ್ರೀಶೈಲ ರಾಮದುರ್ಗ. ಮಲ್ಲಪ್ಪ ಸಪ್ತಸಾಗರ. ಲಕ್ಷ್ಮಣ ಹಣಗಂಡಿ.ನಿರ್ದೇಶಕರಾದ ಸುರೇಶ ಬೆಳಗಲಿ. ಶಿವನಪ್ಪ ಶಿವಾಪುರ. ಬಸಪ್ಪ ದಾಸನ್ನವರ. ಬಸಪ್ಪ ಹೊಸಟ್ಟಿ. ಸದಾಶಿವ ಮಾಲಗಾರ. ಕರೆಪ್ಪ ಹಣಗಂಡಿ. ಸಿದ್ದಪ್ಪ ಮಾಳಿ. ನಿಂಗಪ್ಪ ಮಾಂಗ. ಮಂಜುಳಾ ಅಂಗಡಿ. ಸುನಂದಾ ರಗಟಿ ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಶ್ರುತಿ ನಿಗಡೆ ನಿರೂಪಸಿ, ವಂದಿಸಿದರು.