ಲೋಕದರ್ಶನವರದಿ
ಗುಳೇದಗುಡ್ಡ25: ಪದವಿ ವಿದ್ಯಾಥರ್ಿಗಳು ಕನ್ನಡ ಕವಿಗಳ ಕಾವ್ಯ ಮೌಲ್ಯವನ್ನು ಸಂಗೀತದ ಗಮಕ ಕಲೆಯ ಮೂಲಕ ಅದರ ವಾಚನ, ವ್ಯಾಖ್ಯಾನ ಕಲಿತರೆ ಕಾವ್ಯದ ಪಾತ್ರಗಳ ಪರಿಕಲ್ಪನೆ ಹೆಚ್ಚು ಅರ್ಥವಾಗುತ್ತದೆ ಎಂದು ಪಿಇ ಟ್ರಸ್ಟ್ನ ಗೌರವ ಕಾರ್ಯದಶರ್ಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ಪ್ರತಿಷ್ಠಿತ ಪಿಇ ಟ್ರಸ್ಟ್ನ ಭಂಡಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಕನರ್ಾಟಕ ಸಂಘ ಮತ್ತು ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪದವಿ ವಿದ್ಯಾಥರ್ಿಗಳಿಗಾಗಿ "ಕವಿ ಪರಿಚಯ ಹಾಗೂ ಗಮಕ ಕಾರ್ಯಕ್ರಮ" ಆಯೋಜಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಪಠ್ಯಗಳು ಮನನವಾಗಲು ಸಂಗೀತದ ಆಲಾಪನ ಮತ್ತು ಆ ಮೂಲಕ ವ್ಯಾಖ್ಯಾನದೊಂದಿಗೆ ಪಾಠ ತಿಳಿಯುವುದು ಸೂಕ್ತವೆಂದರು.
ನಾಗಚಂದ್ರನ ಪಂಪರಾಮಾಯಣವನ್ನು ಇದೇ ಸಂದರ್ಭದಲ್ಲಿ ಗಮಕ ಕಲಾವಿದೆ ಸುಮಾಪ್ರಸಾದ್ ವಾಚನ ಮಾಡಿದರು. ರತ್ನಾಮೂತರ್ಿ ಅವರು ವ್ಯಾಖ್ಯಾನ ಮಾಡಿದರು.
ಹತ್ತು ಜನ ವಿದ್ಯಾಥರ್ಿ, ವಿದ್ಯಾಥರ್ಿನಿಯರು 'ನನ್ನ ನೆಚ್ಚಿನ ಕವಿ-ಕಾವ್ಯ ಕುರಿತು ಪ್ರಬಂಧ ಮಂಡಿಸಿದರು. ಪ್ರಬಂಧ ಮಂಡಿಸಿದ ವಿದ್ಯಾಥರ್ಿ,ವಿದ್ಯಾಥರ್ಿನಿಯರಿಗೆ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ಪ್ರಮಾಣಪತ್ರ ಮತ್ತು ಬಹುಮಾನ ನೀಡಲಾಯಿತು. ಶ್ರೀದೇವಿ ಹನಮನ್ನವರ ಪ್ರಥಮ, ಉಮಾ ಇಂಗಳಗಿ ದ್ವಿತೀಯ, ಭರತ್ ಕುಮಾರ ತೃತೀಯ ಬಹುಮಾನಗಳನ್ನು ಪಡೆದರು. ಉಳಿದಂತೆ ಪ್ರಬಂಧ ಮಂಡಿಸಿದ ಎಲ್ಲಾ ವಿದ್ಯಾಥರ್ಿಗಳಿಗೂ ಸಮಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.ಪ್ರಾಚಾರ್ಯ ಡಾ.ಕೆ.ಆರ್. ಚೌಕಿಮಠ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಾಗ್ದೇವಿ ಗಮಕ ಪ್ರತಿಷ್ಠಾನದ ಕಾರ್ಯದಶರ್ಿ ಸಿ.ವಿ. ಶ್ರೀಮತಿ ಮತ್ತು ಸಿದ್ದರಾಮಯ್ಯ ಪುರಾಣಿಕಮಠ, ಐ.ಕ್ಯೂ.ಎ.ಸಿ. ಚೇರಮನ್ನ ಡಾ. ಎನ್.ವೈ. ಬಡಣ್ಣವರ ಉಪಸ್ಥಿತರಿದ್ದರು. ಡಾ. ಆರ್.ಎಸ್. ವಾಲಿ, ಪ್ರೊ. ಆರ್.ಎಸ್. ಜುಮನಾಳ, ಪ್ರೊ. ಆರ್.ವಿ. ಪೂಜಾರ, ಪ್ರೊ. ಬಿ.ಯು. ಹಣಗಿ, ಪ್ರೊ. ಪಿ.ಬಿ. ಕಣವಿ, ಪ್ರೊ. ಎಂ.ಎಂ.ಪಾಟೀಲ, ಬಸವರಾಜ ಬಾಣದ, ಡಾ. ಬಿ.ಎಸ್. ಚವಡಿ, ಡಾ. ಬಾಲು ಮಾದಾರ, ಡಾ. ಸರೋಜ ಗುಡದೂರ, ಡಾ. ಸಿ.ಕೆ. ನಂದಾರ, ಡಾ. ಗಿರೀಶ್ ಕುಮಾರ್, ಡಾ. ನಾಗೇಂದ್ರಸ್ವಾಮಿ, ಪ್ರೊ. ಮಾರುತಿ ಸೇರಿದಂತೆ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಂಘದ ಅಧ್ಯಕ್ಷ ಡಾ. ವಿ.ಎನ್. ಡಾಣಕಶಿರೂರ ಸ್ವಾಗತಿಸಿದರು. ಡಾ. ಸಣ್ಣವೀರಣ್ಣ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಇಂಗಳಗಿ ಪ್ರಾರ್ಥನೆ ಹಾಡಿದರು. ಡಾ. ಮಂಜಣ್ಣ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಎಸ್. ಪಾಟೀಲ ವಂದಿಸಿದರು.