ಲೋಕದರ್ಶನ ವರದಿ
ಬೆಳಗಾವಿ 02: ನಗರದ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡಮಿ(ರಿ) ಮತ್ತು ಸಿಂಗಿಂಗ್ ಸ್ಟಾರ್ ಕರೋಕೆ ಕ್ಲಬ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜ್ ರಸ್ತೆಯಲ್ಲಿರುವ ಹೊಟೇಲ್ ಆದರ್ಶ ಪ್ಯಾಲೇಸ್ ಪ್ಲಾಟಿನಂ ಹಾಲ್ದಲ್ಲಿ ಇದೇ ದಿ. 29 ಶನಿವಾರದಂದು ಸಾಯಂಕಾಲ 5 ಗಂಟೆಗೆ "ಸ್ವರ ವಿಹಾರ" ಬೆಳ್ಳಿತೆರೆಯ ಸುಮಧುರ ಗೀತೆಗಳ ಸಂಗೀತ ಗೀತೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಉಪಮೇಯರ ಶ್ರೀಮತಿ ಜ್ಯೋತಿ ಬಾವಿಕಟ್ಟಿಯವರು ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೆಳ್ಳಿಚುಕ್ಕಿ ಸಂಸ್ಥೆಯು ಹಲವಾರು ಯುವ ಪ್ರತಿಭೆಗಳನ್ನು ವೇದಿಕೆ ಪರಿಚಯಸಿ ಅವರಲ್ಲಿಯ ಕಲೆಯನ್ನು ಬೆಳೆಸುವ ಮೂಲಕ ಬೆಳದು ಹೆಮ್ಮರವಾಗಿ ನಿಂತಿದೆ. ಈ ಎಲ್ಲ ಶ್ರೆಯಸ್ಸು ಸಂಸ್ಥಾಪಕಿ ಶ್ರೀಮತಿ ರಾಜಶೇಶ್ವರಿ ಹಿರೇಮಠ ಇವರಿಗೆ ಸಲ್ಲುತ್ತದೆ. ಅದರಂತೆ ಶ್ರೀಮತಿ ಶೈಲಜಾ ಕುಲಕಣರ್ಿಯವರು ಸಿಂಗಿಂಗ್ ಸ್ಟಾರ್ ಕರೋಕೆ ಕ್ಲಬ್ ಸಂಘಟನೆಯನ್ನು ಬೆಳೆಸುವಲ್ಲಿ ಬೆನ್ನೆಲಬಾಗಿ ನಿಂತಿದ್ದಾರೆ. ಸಂಘಟನೆಗಳ ಕಾರ್ಯದಲ್ಲಿ ಮಹಿಳೆಯರು ಮುಂದಾಗುತ್ತಿರುವುದು ನನಗೆ ಅಭಿಮಾನ ತಂದಿದೆ ಎಂದು ಹೇಳಿದರು.
ಡಾ. ಸ್ವಪ್ನಾ ಕುಲಕಣರ್ಿಯವರ ಧ್ವನಿಯಲ್ಲಿ "ಹೊಸ ಬೆಳಕು" ಚಿತ್ರದ ಕುವೆಂಪು ರಚನೆಯ 'ತೆರೆದಿದೆ ಮನೆ ಓ ಬಾ ಅತಿಥಿ.....' ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕುಂಕುಮವಿರುವುದೇ ಹಣೆಗಾಗಿ (ನಾನಿರುವುದೇ ನಿನಗಾಗಿ) ರವಿ ಭಜಂತ್ರಿ, 'ಏಕೋ... ಏನೋ... (ಜ್ವಾಲಾಮುಖಿ) ಶಿವಕುಮಾರ ಪಾಟೀಲ ಹಾಗೂ ಇಂದಿರಾ ಮೊಟೆಬೆನ್ನೂರ, 'ಆಶೆಯ ಭಾವ...' (ಮಾಂಗಲ್ಯ ಭಾಗ್ಯ) ಪ್ರಶಾಂತ, 'ಪುಕಾರ ಕಾ ಚಲಾ ಹು ಮೈ....' ಮುರಗೇಶ ಶಿವಪೂಜಿ, 'ಸಿರಿವಂತನಾದರೂ ಕನ್ನಡ ನಾಡಲ್ಲಿ..' ಡಾ. ಮನಗೂಳಿ-ಶ್ರೀಮತಿ ರಮಾ ಮುಂತಾದವರು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಸುಮಾರು ಮೂರು ಗಂಟೆಗಳ ಕಾಲ ಜನರನ್ನು ರಂಜಿಸಿದರು. ಪ್ರೇಕ್ಷಕರ ಕೊರತೆಯಿಂದ ಬಳಲುತ್ತಿರುವ ಇಂದಿನ ದಿನಗಳಲ್ಲಿ ಸುಮಾರು ಐದನೂರಕ್ಕೂ ಸಂಗೀತಾಸಕ್ತರು ಈ ಸಂಗೀತ ಸಂಜೆಯಲ್ಲಿ ಸೇರಿದುದೊಂದು ವಿಶೇಷವಾಗಿತ್ತು.
ರಾಜೇಶ್ವರಿ ಹಿರೇಮಠ ಹಾಗೂ ವಾಸುದೇವ ಐಕೃತ ಹಾಡಿದ (ಅಪೂರ್ವ ಸಂಗಮ) "ತಾರಾ.. ಓ... ತಾರಾ...' ಮಂಜುಳಾ ಜಾನವಾಡ (ಹರೆರಾಮ ಹರೆಕೃಷ್ಣ) 'ದಮ್ ಮಾರೋ ದಮ್...' ಶೈಲಜಾ ಕುಲಕಣರ್ಿ ಹಾಗೂ ಸೂರಜ್ ಅವರು ಹಾಡಿದ 'ಯಾರ ಬಿನಾ ಚೈನ್ ಕಹಾಂ ರೆ' ಪೂಣರ್ಿಮಾ ಕುಲಕಣರ್ಿ (ಏಕ ದುಜೆ ಕೇ ಲಿಯೆ) 'ಪ್ಯಾರ ಕಿ ಪೆಹಲಿ ನಜರ ಕೊ ಸಲಾಂ...' ಭಾಗ್ಯಶ್ರೀ ಭೈರಪ್ಪನವರ ಹಾಡಿದ (ಲವ ಇನ್ ಟೋಕಿಯೊ) 'ಸಾಯೋ ನಾರಾ...' ರವಿ ಭಜಂತ್ರಿ ಮತ್ತು ಉಷಾ ನಾಯಕ ಅವರು ಹಾಡಿದ 'ನಾಚಿಕೆ ಇನ್ನೇಕೆ...' ಕು. ವೃಂದಾ ಕಾಮತ ಹಾಗೂ ಜಾನಕಿ ಘೋರ್ಪಡೆ ಹಾಡಿದ "ಕಜರಾ ಮೊಹಬ್ಬತವಾಲಾ....' ಹಾಡುಗಳು ಕುಳಿತವರಲ್ಲಿ ಉತ್ಸಾಹ ತುಂಬಿ ಕುಣಿದು ಕುಪ್ಪಳಿಸವಂತೆ ಮಾಡಿದರೆ. ಕು. ಸಹನಾ ಕುಲಕಣರ್ಿ ಅವರು ಹಾಡಿದ 'ಲಾಗಾ ಚುನರಿ ಮೇ ..." ಹಾಡಿದ ಹಾಡು ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಪ್ರತೀಕ್ಷಾ ಹಿರೇಮಠ ಇವರ ನೃತ್ಯ ಹಾಗೂ ಅನುಶ್ರೀ ರಘುವೀರ ಹಾಗೂ ಅಂಜಲಿ ಕುಲಕಣರ್ಿ ಇವರು ಪದ್ಮವತಿ ಚಿತ್ರದ "ನೈನೂವಾಲಿನಿ..." ಹಾಡಿನ ನೃತ್ಯ ಎಲ್ಲರ ಗಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳನ್ನ, ಕಲಾವಿದರನ್ನ, ಪ್ರಾಯೋಜಕರನ್ನ ಸನ್ಮಾನಿಸಿ ಗೌರವಿಸಲಾಯಿತು. ನಗರದ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡಮಿ(ರಿ) ಮತ್ತು ಸಿಂಗಿಂಗ್ ಸ್ಟಾರ್ ಕರೋಕೆ ಕ್ಲಬ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವೈದ್ಯರು, ಪತ್ರಕರ್ತರು, ಹಾಸ್ಯಭಾಷಣಕಾರರು, ಇಂಜನೀಯರರು ಹೀಗೆ ಬೇರೆ ಬೇರೆ ಉನ್ನತ ಹುದ್ದೆಯಲ್ಲಿರುವವರು, ಬೇರೆ ಬೇರೆ ವೃತ್ತಿಯಲ್ಲಿರುವವರು ಭಾಗವಹಿಸಿ ವೇದಿಕೆ ಮೇಲೆ ತಮ್ಮ ಕಂಠಸಿರಿ ಪ್ರತಿಭೆಯನ್ನು ಹಂಚಿಕೊಂಡುದೊಂದು ವಿಶೇಷವಾಗಿತ್ತು
ಮಲಬಾರ್ ಗೋಲ್ಡ್ ಜ್ಯುವೆಲರ್ಸದವರು ಭಾಗವಹಿಸಿದ್ದ ಪ್ರೇಕ್ಷಕರರಿಗಾಗಿ 'ಮಲಬಾರ ಲಕ್ಕಿ ಡ್ರಾ'ವನ್ನಿಟ್ಟಿದ್ದರು. ಇದರ ವಿಜಲಕ್ಷ್ಮೀ ಪಾಟೀಲ ಪ್ರಥಮ ಹಾಗೂ ಸುಮೀತ ಜೋಶಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಗಜಲ ಮತ್ತು ಹಿನ್ನಲೆ ಗಾಯಕರೂ ಸಂಗೀತ ನಿದರ್ೇಶಕರಾದ ರಫೀಕ ಶೇಖ ಹಾಗೂ ಲಘು ಉದ್ಯೋಗ ಭಾರತಿಯ ಕಾರ್ಯದಶರ್ಿಗಳಾದ ಪ್ರಿಯಾ ಪುರಾಣಿಕ ಆಗಮಿಸಿದ್ದರು. ಡಾ. ಸ್ವಪ್ನಾ ಕುಲಕಣರ್ಿ ನಿರೂಪಿಸಿದರು.