ಲೋಕದರ್ಶನ ವರದಿ
ಹುಕ್ಕೇರಿ 04: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ತಾಲೂಕಿನಾದ್ಯಂತ ವ್ಯಾಪಕವಾಗಿ ರೈತರು ಬಿತ್ತನೆ ಕೈಕೊಂಡಿದ್ದು, ದಿ. 10ರಂದು ಸುರಿದ ಉತ್ತಮ ಮಳೆ ಹೊರತುಪಡಿಸಿ ಎಲ್ಲಿಯೂ ಸಮರ್ಪಕವಾಗಿ ಮಳೆಯಾಗಿರುವದಿಲ್ಲ. ಇದರಿಂದಾಗಿ ಈಗಾಗಲೇ ಬಿತ್ತನೆಯಾಗಿ ಬೆಳವಣಿಗೆ ಹಂತದಲ್ಲಿರುವ ಸೋಯಾಅವರೆ, ಶೇಂಗಾ, ದ್ವಿದಳ ಧಾನ್ಯಗಳು ತೀವ್ರ ಪ್ರಮಾಣದ ತೇವಾಂಶದ ಕೊರತೆಯನ್ನು ಅನುಭವಿಸುತ್ತಿವೆ. ಈ ಸ್ಥಿತಿ ಮುಂದುವರೆದಲ್ಲಿ ಖುಷ್ಕಿ ಬೆಳೆಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿಯುವ ಸಂಭವನೀಯತೆ ಇದ್ದು, ಮಳೆಯಾಶ್ರಿತ ಜೋಳ ಹಾಗೂ ಸೋಯಾಅವರೆ ಬೆಳೆದ ರೈತ ಬಾಂಧವರು ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಅಧಿಸೂಚಿತ ಪಂಚಾಯತಿ ಮಟ್ಟಕ್ಕೆ ನಿಗದಿ ಪಡಿಸಲಾದ ಈ ಬೆಳೆಗಳಿಗೆ ಸಮೀಪದ ತಮ್ಮ ಖಾತೆ ಇರುವ ಬ್ಯಾಂಕಿನಲ್ಲಿ ಆಧಾರಕಾಡರ್್, ಬ್ಯಾಂಕ್ ಖಾತೆ ಪುಸ್ತಕ ಮತ್ತು ಆರ್.ಟಿ.ಸಿ ಝರಾಕ್ಸ್ ಪ್ರತಿಗಳೊಂದಿಗೆ ವಿಮಾ ಕಂತಿನ ಮೊತ್ತವನ್ನು (ಖುಷ್ಕಿ ಜೋಳ : ರೂ. 1ರ್0/- ಪ್ರತಿ ಎಕರೆಗೆ ; ಸೋಯಾಅವರೆ : ರೂ. 116/- ಪ್ರತಿ ಎಕರೆಗೆ) ಭರಿಸಿ ಪ್ರಕೃತಿ ವಿಕೋಪ, ಕೀಟ-ರೋಗಬಾಧೆ, ಇತ್ಯಾದಿ ಅವಾಂತರಗಳಿಂದಾಗುವ ಆಥರ್ಿಕ ನಷ್ಟವನ್ನು ಕಡಿಮೆಗೊಳಿಸುವಂತೆ ಈ ಮೂಲಕ ಕೋರಲಾಗಿದೆ. ಪ್ರೀಮಿಯಂ ಭರಿಸಲು ಸೋಯಾಅವರೆಗೆ 31.07.2018 ಅಂತಿಮ ದಿನವಾಗಿದ್ದು, ಖುಷ್ಕಿ ಜೋಳಕ್ಕೆ ದಿನಾಂಕ 16.07.2018 ರಂದು ಅಂತಿಮ ದಿನವಾಗಿರುತ್ತದೆ.
ಇದಲ್ಲದೇ ಹೋಬಳಿ ಮಟ್ಟಕ್ಕೆ ಬಹುತೇಕ ಎಲ್ಲ ಬೆಳೆಗಳಿಗೆ ವಿಮೆ ಪ್ರೀಮಿಯಂ ಭರಿಸಿ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ತಾಲೂಕಿನ ರೈತರು ಯೋಜನೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ. ಪಂಚಾಯತವಾರು ಅಧಿಸೂಚನೆಯಾದ ಬೆಳೆ, ಪ್ರೀಮಿಯಮ್ ಮೊತ್ತ, ಮುಂತಾದ ವಿವರಗಳನ್ನು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದಿಂದ ಪಡೆಯಬಹುದಾಗಿದೆಯೆಂದು ಕೃಷಿ ಸಹಾಯಕ ನಿದರ್ೆಶಕ ಮಹಾದೇವ ಪಟಗುಂದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.