ಸಿಎಂ ಯಡಿಯೂರಪ್ಪನವರಿಗೆ ಪರಿಹಾರದ ಚೆಕ್ ವಿತರಣೆ

ಲೋಕದರ್ಶನ ವರದಿ

ಮೋಳೆ 05: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮುಖ್ಯಮಂತ್ರಿ ಬಿ.ಎಸ್,ಯಡಿಯುರಪ್ಪ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಚಕ್ ವಿತರಿಸಿದರು.

 ಶುಕ್ರವಾರ ದಿ.4 ರಂದು ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಕೃಷ್ಣಾನದಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಗೆ ಆಗಮಿಸಿ ಮುಖ್ಯಮಂತ್ರಿಗಳು ಆ ಸಭೆಯನ್ನು ಮುಗಿಸಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದರು.

  ಕಳೆದ ಅಗಷ್ಟ ತಿಂಗಳಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದು ಅಥಣಿ ಹಾಗೂ ಕಾಗವಾಡ ತಾಲೂಕಿನ ಹಲವಾರು ಗ್ರಾಮಗಳ ಜನ ಜಾನುವಾರುಗಳಿಗೆ ಬಹಳಷ್ಟು ತೊಂದರೆಯಾಗಿ, ರೈತರ ಬೆಳೆದ ಬೆಳೆಗಳೆಲ್ಲ ನಾಶ್ಯವಾಗಿ ಹೋಗಿ ಸಾವಿರಾರು ಕೋಟಿ ರೂ ಹಾನಿ ಸಂಭವಿಸಿದೆ. ಅವರಿಗೆ ಪರಿಹಾರ ನೀಡಲು ಬಂದ ಸಂದರ್ಭದಲ್ಲಿ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ,ಎಂ,ಪಾಟೀಲರು ಕಾರ್ಖಾನೆಯ ವತಿಯಿಂದ 5 ಲಕ್ಷ ರೂ ಹಾಗೂ ಕಾರ್ಖಾನೆಯ ನೌಕರರ ಸಂಘ, ಹಾಗೂ ಕಾರ್ಮಿಕರ  ವತಿಯಿಂದ 2.31 ಲಕ್ಷ ರೂ ಪರಿಹಾರದ ಚಕ್ ವಿರಿಸಿದರು.  

  ದರೂರ ಕಾರ್ಯಕ್ರಮ ಮುಗಿದ ಬಳಿಕ ಕಾರ್ಖಾನೆಯಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಪರಿಹಾರದ ಚಕ್ ಸ್ವೀಕರಿದ ಮುಖ್ಯಮಂತ್ರಿಗಳು ಕಾರ್ಖಾನೆಯನ್ನು ವೀಕ್ಷಿಸಿ ರೈತರಿಗೋಸ್ಕರ ನಿರ್ಮಿಸಿದ ರೈತ ಭವನವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ರೈತರಿಗೆ ಮಧುವೆ, ಮುಂಜೆಯಂತಹ ಕಾರ್ಯಕ್ರಮಗಳು ಮಾಡಲು ರೈತರಿಗೆ ಅನುಕೂಲವಾಗಿದೆಎಂದ ಅವರು ಪ್ರತಿ ಕಾರ್ಖಾನೆಯವರು ರೈತರಿಗೋಸ್ಕರ ಇಂಥ ಕಲ್ಯಾಣ ಮಂಟಪಗಳನ್ನು ನಿರ್ಮಿಸಬೇಕೆಂದ ಅವರು ಕಾರ್ಖಾನೆ ಸುತ್ತ ಮುತ್ತ ನೆಟ್ಟಿರುವ ಗಿಡ,ಮರಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಎಂಡಿ ಜಿ.ಎಂ.ಪಾಟೀಲ ಹಾಗೂ ಆಡಳಿತ ಮಂಡಳಿಗೆ ಶಭಾಷಗಿರಿ ಕೊಟ್ಟರು.

  ಈ ಸರಳ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ. ಲಕ್ಷಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಶಾಶಕರಾದ ಸಂಸದ ಅಣ್ಣಾಸಾಬ ಜೊಲ್ಲೆ, ಶಾಶಕರಾದ ದುರ್ಯೋದನ ಐಹೋಳೆ, ಪಿ.ರಾಜೀವ, ಮಹಾದೇವಪ್ಪ ಯಾದವಾಡ, ಹಣಮಂತ ನಿರಾಣಿ ಅನರ್ಹ ಶಾಸಕ ಶ್ರೀಮಂತ ಪಾಟೀಲ, ನಿರ್ದೇಶಕರಾದ  ಗುರಬಸು ತೇವರಮನಿ, ಸಿ.ಎಚ್. ಪಾಟೀಲ, ಶಾಂತಿನಾಥ. ನಂದೇಶ್ವರ, ಗುಳಪ್ಪ ಜತ್ತಿ, ವಿಶ್ವನಾಥ ಪೋಲಿಸ್ಪಾಟೀಲ,ರಮೇಶ ಪಟ್ಟಣ, ಕಚೇರಿಯ ಅಧೀಕ್ಷಕ ಸುರೇಶ ಠಕ್ಕಣ್ಣವರ, ಎಸ್.ಬಿ. ಗೋಟಖಿಂಡಿ, ಸೇರಿದಂತೆ  ಅನೇಕರು ಮೇದಿಕೆಯ ಮೇಲೆ ಇದ್ದರು.