ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ನಿಯಮಾನುಸಾರ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್

ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ನಿಯಮಾನುಸಾರ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್ Issue birth and death certificates in accordance with the rules: Deputy Commissioner Snehal R.

ಲೋಕದರ್ಶನ ವರದಿ

ಧಾರವಾಡ ೨೪: ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಕಾನೂನು ಪ್ರಕಾರ ಪ್ರಮಾಣಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಸಭಾ ಭವನದಲ್ಲಿ ಜನನ - ಮರಣ ಬೆಳೆ ಅಂದಾಜು ಸಮೀಕ್ಷೆ ಹಾಗೂ ಕೃಷಿ ಅಂಕಿ ಅಂಶಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು. ಜನನ-ಮರಣ ಘಟನೆಗಳನ್ನು ನೋಂದಣಿ ಮಾಡುವಾಗ ತಂದೆ ತಾಯಿಯ ಹೆಸರಿನ ಕಾಲಂ ನಲ್ಲಿ ಸಣ್ಣ ಪುಟ್ಟ ತಪ್ಪುಗಳು, ಮರಣ ನೋಂದಣಿ ಮಾಡುವಾಗ ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆ ನಮೂದು ಮಾಡುವ ಬದಲಾಗಿ ಅರ್ಜಿದಾರರ ಆಧಾರ್ ಸಂಖ್ಯೆ ನಮೂದು ಮಾಡಿರುವುದು, ಮರಣ ನೋಂದಣಿ ಮಾಡುವಾಗ ನಮೂನೆ-೪ ಮತ್ತು ನಮೂನೆ-೪ಎ ಅಪ್ಲೋಡ್ ಮಾಡುವ ಬದಲಾಗಿ ಬೇರೆ ದಾಖಲಾತಿಗಳನ್ನು ಅಪ್ಲೋಡ್ ಮಾಡುತ್ತಿರುವುದು, ಜನನ-ಮರಣ ನೋಂದಣಿ ಸಮಯದಲ್ಲಿ ಡಾಟಾ ಎಂಟ್ರಿ ಮಾಡುವಾಗ ಜನನ ಮತ್ತು ಮರಣ ದಿನಾಂಕಗಳನ್ನು ತಪ್ಪಾಗಿ ನಮೂದು ಮಾಡುತ್ತಿರುವುದು ಕಂಡು ಬರುತ್ತಿವೆ. ಜನನ–ಮರಣ ಪ್ರಮಾಣಪತ್ರ ನೀಡುವ ಸಿಬ್ಬಂದಿಗೆ ತರಬೇತಿ ನೀಡಬೇಕು. ದಾಖಲೆಗಳ ಪರಿಶೀಲನೆ ಮಾಡಿ, ನಿಯಮಗಳ ಪ್ರಕಾರ ಪ್ರಮಾಣಪತ್ರ ವಿತರಣೆಯ ಬಗ್ಗೆ ಅಧಿಕಾರಿಗಳು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ಸೂಚಿಸಿದರು. ಅಲಭ್ಯ ಪ್ರಮಾಣಪತ್ರ ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಜನನ ನೋಂದಣಿ ಲಭ್ಯವಿಲ್ಲದ ಪ್ರಕರಣಗಳಲ್ಲಿ ಸಂಬAಧಪಟ್ಟ ಮಗುವಿನ ವಯಸ್ಸು ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಮಗುವನ್ನು ಖುದ್ದಾಗಿ ಪರಿಶೀಲಿಸಿ ವಯಸ್ಸಿಗೆ ಸಂಬAಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ತಾಳೆ ಮಾಡಿ ನಂತರವೇ ಪ್ರಮಾಣಪತ್ರ ನೀಡಬೇಕು ಎಂದು ಅವರು ಹೇಳಿದರು.

ಪೋಷಕರು ಅಥವಾ ಅರ್ಜಿದಾರರು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ, ಸಂಬAಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ, ಪ್ರಮಾಣಪತ್ರ ನೀಡುವುದರಿಂದ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಂಬAಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಬೆಳೆ ಸಮೀಕ್ಷೆಯಡಿಯಲ್ಲಿ ಸ್ಥಳೀಯ ಖಾಸಗಿ ನಿವಾಸಿಗಳಿಂದ   ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾದ ಬೆಳೆ ವಿಸ್ತೀರ್ಣದ ಮಾಹಿತಿಯಲ್ಲಿ ಶೇ. ೧ ರಷ್ಟನ್ನು ಮೇಲ್ವಿಚಾರಕರ ಮೇಲ್ವಿಚಾರಣೆ ಕಾರ್ಯವನ್ನು ೮೩ ಗ್ರಾಮಗಳಿಗೆ ಸಪ್ಟೆಂಬರ್ ೨೦, ೨೦೨೬ ರೊಳಗಾಗಿ ನಿಗದಿತ ಅವಧಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು.

ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾದ ಬೆಳೆ ವಿಸ್ತೀರ್ಣದ ಮಾಹಿತಿಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಮೇಲ್ವಿಚಾರಣೆಯ ಸಂದರ್ಭದಲ್ಲಿ ಯಾವ ಪ್ರಾಧಿಕಾರದವರು ತಪ್ಪು ಬೆಳೆ ಮಾಹಿತಿಯನ್ನು ದಾಖಲಿಸಿರುವುದು ಕಂಡುಬರುತ್ತದೆಯೋ ಅಂತಹವುಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಡಾ ಪರಶುರಾಮ್ ಎಫ್. ಕೆ., ಅಪರ ಜಿಲ್ಲಾ ಜನನ ಮರಣ ನೋಂದಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.