ಲೋಕದರ್ಶನ ವರದಿ
ರಾಮದುರ್ಗ 10: ನೆರೆ ಪ್ರವಾಹದಿಂದಾ ನಿರಾಶ್ರಿತರಾದ ಸಂತ್ರಸ್ತರಿಗೆ ಕೇವಲ ಹತ್ತು ತಿಂಗಳಲ್ಲಿ ಸೂಕ್ತ ಜಾಗ ನೋಡಿ ಸುಸಜ್ಜಿತ ಮನೆ ನಿಮರ್ಾಣ ಮಾಡಿಕೊಡಲಾಗುವುದು, ಅದಕ್ಕೆ ತಾಲೂಕ ಆಡಳತ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಸಂತ್ರಸ್ತರು ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕಿನ ಸಂಗಳ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕ ಪಂಚಾಯತ ಮತ್ತು ಗ್ರಾಮ ಪಂಚಾಯತಗಳ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗಾಗಿ ನಿಮರ್ಿಸಲಾದ ತಾಕ್ಕಾಲಿಕ ಶೆಡೆಗಳ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಎನ್ ಡಿ ಆರ್ ಎಫ್ ನಿಯಮದಂತೆ ನೆರೆ ಸಂತ್ರಸ್ತರಿಗೆ ರೂ. 3800 ನೀಡಬೇಕಾಗಿತ್ತು ಆದರೆ ತಾತ್ಕಾಲಿಕ ಪರಿಹಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರೂ. 10,000 ಹಣ ನೀಡಿ ಸರಕಾರ ನೆರ ಸಂತ್ರಸ್ತರೊಂದಿಗಿದೆ ಎಂಬುದನ್ನು ಸಾಬೀತು ಪಡಿಸಿ ಬಿದ್ದ ಮನೆಗಳ ನಿಮರ್ಾಣಕ್ಕೆ ಐದು ಲಕ್ಷ ಹಣ ಬಿಡುಗಡೆಗೊಳಿಸಿದ್ದಾರೆ ಎಂದು ನುಡಿದರು.
ಕೇಲವು ಕಡೆ ತಾಂತ್ರಿಕ ದೋಷದಿಂದ ಲಾಗಿನ್ ಬಂದಾಗಿ ಮನೆಗಳಿಗೆ ಹಣ ಜಮಾ ಆಗುತ್ತಿಲ,್ಲ ಶೀಘ್ರದಲ್ಲಿ ದೋಷ ನವಾರಣಿಸಲು ಕ್ರಮ ಕೈಕೊಳ್ಳಾಗುವದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯೆ ಶಿವಕ್ಕಾ ಬೆಳವಡಿ, ಗ್ರೆಡ್ 2 ತಹಶೀಲ್ದಾರ ಸೋಮಶೇಖರ ತಂಗೊಳ್ಳಿ, ಶಿರಸ್ತೆದಾರ ಆರ್ ಎಮ್ ಹಿರೇಮನಿ, ಗ್ರಾಮ ಲೆಕ್ಕಾಧಿಕಾರಿ ಯಲ್ಲಪ್ಪ ವಿಭೂತಿ, ತಾಪಂ ಸದಸ್ಯೆ ಕಾಶವ್ವ ಕಂಕೈಟ್ಟಿ, ಗ್ರಾಮ ಪಂಚಾಯತ ಉಪಾಧ್ಯಕ್ಷ ಯಲ್ಲಪ್ಪ ಹಂಪಿಹೋಳಿ ಸದಸ್ಯರಾದ ಅಬ್ದುಲ್ ಅತ್ತಾರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ನಿದರ್ೇಶಕರಾದ ಸಿದ್ದಪ್ಪ ಯಡಹಳ್ಳಿ ಹಾಗೂ ಗ್ರಾಮಸ್ಥರು ಇದ್ದರು.