ಶ್ರೀಮಂತ ಪಾಟೀಲರಿಂದ ಮತದಾರರಿಗೆ ದ್ರೋಹ: ಈಶ್ವರ ಖಂಡ್ರೆ ಆರೋಪ

ಮೋಳೆ 29:  ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಪಡೆದು ಗೆದ್ದು ಬಂದು 14 ಕೇ ತಿಂಗಳುಗಳಲ್ಲಿ ಮಾತೃ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿ ಮತದಾರರಿಗೆ ದ್ರೋಹ ಬಗೆದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಒಬ್ಬ ನಮಕ್ ಹರಾಮಿ ಮನುಷ್ಯ ಇತನಿಗೆ ಮತದಾರರು ತಕ್ಕ ಶಾಸ್ತಿ ಮಾಡಬೇಕೆಂದು ರಾಜ್ಯ ಕೆಪಿಸಿಸಿ ಕಾಯರ್ಾದ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಅವರು ಗುರುವಾರ ಸಂಜೆ ಮಂಗಸೂಳಿ ಗ್ರಾಮದಲ್ಲಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ರಾಜು ಕಾಗೆ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯಾವ ವ್ಯಕ್ತಿ ಪಕ್ಷಕ್ಕೆ, ಮತದಾರರಿಗೆ ಮೋಸ ಮಾಡುತ್ತಾನೋ ಆತ ಹೆತ್ತ ತಾಯಿಗೆ ಮೋಸ ಮಾಡಿದಂತೆ. ಇಂಥ ಪಕ್ಷದ್ಯೋಹಿಗಳಿಗೆ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.

ಸಾವಿರ ಕೋಟಿ ಕೊಟ್ಟರೂ ಹೋಗಲ್ಲ;-

 ಶ್ರೀಮಂತ ಪಾಟೀಲ ನಮ್ಮ ಜೊಗೆಯಲ್ಲಿಯೇ ಹೊಟೇಲ್ನಲ್ಲಿದ್ದು ಮಾದ್ಯಮಗಳ ಮುಂದೆ ಸಾವಿರ ಕೋಟಿ ರೂ ಕೊಟ್ಟರು ಬೇರೆ ಪಕ್ಷಕ್ಕೆ ಹೋಗಲ್ಲ, ಹೋಗಲ್ಲ... ಎಂದು ಹೇಳಿಕೆಗಳನ್ನು ಕೊಡುತ್ತಲೇ ಈ ಆಸಾಮಿ ರಾತ್ರೋರಾತ್ರಿ ಗಾಯಬ್ ಆಗಿ ಬಿಟ್ಟಿತು. ಹೃದಯ ಕಾಯಿಲೆ ನೆಪವೊಡ್ಡಿ ರಾತ್ರಿ ಹೊತ್ತಿನಲ್ಲಿ ಬೆಂಗಳೂರಿನಿಂದ  ಹೈದ್ರಾಬಾದ ಮೂಲಕ ಮುಂಬೈಗೆ ಹೋಗಿ ಹೃದಯದ ಕಾಯಿಲೆ ಎಂದು ಕಣ್ಣಿಗೆ ಹಾಕಿದ ಚಸ್ಮಾ ಕೂಡ ತಗೆಯದೇ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಇಂಥವನನ್ನು ಮತ್ತೇ ಆರಿಸಿ ಕೊಡಬೇಕಾ? ಎಂದು ಪ್ರಶ್ನಿಸಿದರು.

ಮೊದಲು ಕಬ್ಬಿನ ಬಿಲ್ಲು ಕೊಡಿ ;-

 ಕಾಗವಾಡ ಮತಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ, ಈ ಕ್ಷೇತ್ರದಲ್ಲಿ ಬ್ರಷ್ಟಾಚಾರ ತುಂಬಿದೆ. ನಾನು ಆಯ್ಕೆಯಾಗಿ ಬಂದ ಮೇಲೆ ಬ್ರಷ್ಟಾಚಾರ ಮುಕ್ತ ಮಾಡುತ್ತೇನೆ ಎಂದು ಹೇಳಿ ಮತದಾರರನ್ನು ನಂಬಿಸಿ ಆಯ್ಕೆಯಾದೀರಿ. ನಂತರ ತನ್ನದೇ ಒಡೆತನದ ಸಕ್ಕರೆ ಕಾಖರ್ಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಕಳೆದ ಮುರು ವರ್ಷಗಳಿಂದ ಸರಿಯಾಗಿ ಬಿಲ್ ಕೊಡದೆ, ಅನ್ಯಾಯವೆಸಗಿದ್ದಾರೆ. ಪ್ರತಿದಿನ ಕಬ್ಬಿನ ಕಾಟಾಹೊಡೆದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೇಳಲು ಹೋದರೆ ಮಹಾರಾಷ್ಟ್ರ ಗುಂಡಾಗಳನ್ನು ತಂದು ರೈತರ ಮೇಲೆ ಹಲ್ಲೆ ಮಾಡಿದ್ದೀರಿ, ಇದೇನಾ ನಿಮ್ಮ ಬ್ರಷ್ಟಾಚಾರ ಮುಕ್ತ ಆಡಳಿತ ಎಂದು ಪ್ರಶ್ನಿಸಿದರು. ಯಂಜಲು ಕಾಸಿಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದೀರಾ ಸ್ವತ: ನೀವೇ ಬ್ರಷ್ಟಾಚಾರಿಯಾಗಿದ್ದಿರಾ ಎಂದು ಈಶ್ವರ ಖಂಡ್ರೆ ಕುಟುಕಿದರು.

  ನಿಮ್ಮನ್ನು 5 ವರ್ಷಗಳ ಕಾಲಾವದಿಗೆ ಆಯ್ಕೆಮಾಡಿ ಕಳುಹಿಸಿದ್ದೇವೇ ಹೊರತು 14 ತಿಂಗಳುಗಳಿಗೆ ಆಯ್ಕೆಮಾಡಿ ಕಳುಹಿಸಿಲ್ಲ ಎಂದು ಮತದಾರರು ಪ್ರಶ್ನಿಸಬೇಕೆಂದರು. ಇಂಥ ಬ್ರಷ್ಟಾಚಾರಿಗಳನ್ನು ಮತದಾರರು ಈ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಇನ್ನೊಮ್ಮೆ ಚುನಾವಣೆಗೆ ಸ್ಪದರ್ಿಸಬಾರದಂತೆ ಹೀನಾಯವಾಗಿ ಸೋಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  ಮಾಜಿ ಶಾಸಕ ಮೋಹನರಾವ್ ಶಹಾ ಮಾತನಾಡಿ ಕ್ಷೆತ್ರದ ಜನ ನಿಮಗೆ ಪ್ರೀತಿಯಿಂದ ತಾತ್ಯಾ, ತಾತ್ಯಾ ಎಂದು ಕರೆಯುತ್ತಿದ್ದರು. ಆದರೆ ನೀವು ಅಂಥ ಪ್ರೀತಿಯ ಮತದಾರರಿಗೆ, ಕಾರ್ಯಕರ್ತರಿಗೆ ವಿಶ್ವಾಸದ್ರೋಹ ಬಗೆದು ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಿ ಹೋದಿರಲ್ಲಾ ನಿಮಗೆ ಈ ಮತದಾರರ ಶಾಪ ತಟ್ಟದೇ ಇರದು ಎಂದರು. ಚುನಾವಣೆಯಲ್ಲಿ ಆಯ್ಕೆಯಾದರೆ ಶಾಸಕರು ಎಂದು ಕರೆಯುತ್ತಾರೆ, ಎಡನೇ ಬಾರಿಗೆ ಸೋತರೆ ಅವರಿಗೆ ಮಾಜಿ ಶಾಸಕರು ಎಂದು ಕರೆಯುತ್ತಾರೆ ಆದರೆ ಈ ಅನರ್ಹ ಶಾಸಕರು ಎಂದು ಕೇಳಿರಲಿಲ್ಲ. ಶ್ರೀಮಂತ ಪಾಟೀಲರು ಮಾತೃಪಕ್ಷಕ್ಕೆ ದ್ರೋಹ ಬಗೆದು ಬೇರೆ ಪಕ್ಷಕ್ಕೆ ಹೋಗಿ ಈ ಕ್ಷೇತ್ರಕ್ಕೆ ಕಳಂಕ ಹಚ್ಚಿದರು. ಇಂಥವರಿಗೆ ತಕ್ಕ ಪಾಠ ಕಲಿಸಬೇಕೆಂದರು.

 ಮಾಜಿ ಶಾಸಕ ಶಹಾಜಾನ್ ಡೊಂಗರಗಾಂವ ಮಾತನಾಡಿ ಉಪಚುನಾವಣೆಗಳು ಯಾವಾಗ ನಡೆಯುತ್ತವೆಂದರೆ ಆ ಕ್ಷೇತ್ರವನ್ನು ಪ್ರತಿನಿಧಿಸುವ  ಶಾಸಕರು ಸತ್ತರೆ ಮಾತ್ರ ಉಪ ಚುನಾವಣೆಗಳು ನಡೆಯುತ್ತವೆ.ಆದರೆ ಈಗಿನ ಇಬ್ಬರು ಶಾಸಕರು ಸ್ವಾರ್ಥಕ್ಕಾಗಿ ಪಕ್ಷಕ್ಕೆ ಮೋಸ ಮಾಡಿ ಪಕ್ಷಾಂತರ ಮಾಡಿದ್ದಾರೆ. ಅವರು ಇದ್ದು ಸತ್ತಂತೆ. ಇಂಥವರನ್ನು ದೇವರು ಕ್ಷಮಿಸಲ್ಲಾ ಎಂದರು.

 ಕಾಂಗ್ರೆಸ ಅಭ್ಯಥರ್ಿ ರಾಜು ಕಾಗೆ ಮತಯಾಚಿಸಿದರು. ವೇದಿಕೆಯ ಮೇಲೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡರ,ಮಾಜಿ ಶಾಕ ಕಾಕಾ ಪಾಟೀಲ, ಕೆಪಿಸಿಸಿ ಸದಸ್ಯ ದಿಗ್ವಿಜಯ ಪವಾರದೇಸಾಯಿ(ಸಕರ್ಾರ) ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ,ಮುಖಂಡರಾದ ರವೀಂದ್ರ ಗಾಣಿಗೇರ, ಶಿದಗೌಡ ಪಾಟೀಲ,ಗಜಾನನ ಯರಂಡೋಲಿ ಸಂಜಯ ಭಿರಡಿ ಆದಿನಾಥ ದಾನೊಳ್ಳಿ, ಎಐಸಿಸಿ ರಾಷ್ಟ್ರೀಯ ಕಾರ್ಯಕಾರಾರಿ ಸದಸ್ಯೆ ವಿದ್ಯಾ ಹಿರೇಮಠ, ಸುನಿತಾ ಹುರಕಡ್ಲಿ, ಸಂಜಯ ತಳವಲಕರ, ಚಿದಾನಂದ ಮಾಳಿ,ಸಂಜಯ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.