ಇವ್ಹಿಎಮ್ ಬದಲು ಮತಪತ್ರ?

ನವದೆಹಲಿ 27: ಕೆಲವು ರಾಜ್ಯಗಳಲ್ಲಿ  ನಡೆಯಲಿರುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಹಾಗೂ ವಿದ್ಯುನ್ಮಾನ ಮತಯಂತ್ರ ವಿವಾದಗಳ ಕುರಿತು ಇಂದು ನಡೆದ ಚುನಾವಣಾ ಆಯೋಗದ ಸಭೆಯಲ್ಲಿ ಮಹತ್ವದ ಚಚರ್ೆ ನಡೆಸಲಾಯಿತು.

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. ದೇಶದ 7 ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಾಗೂ 51 ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಕಳೆದ ಬಾರಿ  ಕೆಲವು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳ ಮೇಲೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯಕ್ಷಮತೆ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ನಡೆದ ಸಭೆ ಮಹತ್ವ ಪಡೆದುಕೊಂಡಿದೆ.

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರಗಳನ್ನು ಬಳಸುವಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈಗಾಗಲೇ ಆಯೋಗಕ್ಕೆ ಮನವಿ ಸಲ್ಲಿಸಿವೆ. ಇಂದು ನಡೆದ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ, ಇವಿಎಂ ವಿವಾದ, ಮತಪತ್ರಗಳ ಬಳಕೆ ವಿಚಾರ ಸೇರಿದಂತೆ ಗಮನಾರ್ಹ ವಿಷಯಗಳು ಚಚರ್ೆಗೆ ಬಂದವು.

ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬಳಸಲು ಅವಕಾಶ ನೀಡಬೇಕು, ಮತಪತ್ರಗಳು ಬೇಡ ಎಂದು ಬಿಜೆಪಿ ಪಟ್ಟು ಹಿಡಿದಿದೆ. ಆದರೆ ವಿರೋಧಪಕ್ಷಗಳು ಇದಕ್ಕೆ ತದ್ವಿರುದ್ಧ ನಿಲುವು ಹೊಂದಿರುವುದರಿಂದ ಇಂದಿನ ಸಭೆಯಲ್ಲಿ ಸಲಹೆ ಮತ್ತು ಅಭಿಪ್ರಾಯಗಳನ್ನು ಆಯೋಗ ಸಂಗ್ರಹಿಸಿ ಈ ಬಗ್ಗೆ ಸದ್ಯದಲ್ಲೇ ತೀಮರ್ಾನ ಕೈಗೊಳ್ಳಲಿದೆ.