ಅಂಟಿಗುವಾ, ಆ 24 ಇಶಾಂತ್ ಶರ್ಮಾ (42 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ಮೊದಲನೇ ಟಸ್ಟ್ ಪ್ರಥಮ ಇನಿಂಗ್ಸ್ನಲ್ಲಿ ಭಾರತದ ವಿರುದ್ಧ ಹಿನ್ನಡೆ ಭೀತಿಯಲ್ಲಿದೆ. ಇಲ್ಲಿನ ಸರ್ ವಿವಿಯನ್ ರಿಚಡ್ಸರ್್ ಕ್ರೀಡಾಂಗಣದಲ್ಲಿ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ 297 ರನ್ಗಳಿಗೆ ಆಲೌಟ್ ಆಯಿತು. ಬಳಿಕ ಇದಕ್ಕೆ ಪ್ರತ್ಯುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿ ಆತಿಥೇಯ ವೆಸ್ಟ್ ಇಂಡೀಸ್ ಎರಡನೇ ದಿನದಾಟ ಮುಕ್ತಾಯಕ್ಕೆ 59 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 189 ರನ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 108 ರನ್ ಹಿನ್ನಡೆಯಲ್ಲಿದೆ. ಭಾರತದ ಬೌಲಿಂಗ್ ದಾಳಿ ಎದುರಿಸಿ ಹೆಚ್ಚು ಸಮಯ ವಿಂಡೀಸ್ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಉಳಿಯುವಲ್ಲಿ ವಿಪಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೇಸ್ 48 ರನ್ ಹಾಗೂ ಶೀಮ್ರೊನ್ ಹೆಟ್ಮೇರ್ 35 ರನ್ ಗಳಿಸಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟ್ಸ್ಮನ್ಗಳು ವೈಯಕ್ತಿಕ ಮೊತ್ತ 30 ರ ಗಡಿ ದಾಟಲೇ ಇಲ್ಲ. ಕ್ರೈಗ್ ಬ್ರಾಥ್ವೇಟ್ (14), ಜಾನ್ ಕ್ಯಾಂಪ್ಬೆಲ್ (23), ಬ್ರೂಕ್ಸ್ (11), ಡೆರೆನ್ ಬ್ರಾವೊ(18), ಶಾಯ್ ಹೋಪ್(24) ಹಾಗೂ ನಾಯಕ ಜೇಸನ್ ಹೋಲ್ಡರ್(10) ಅವರು ಭಾರತ ಬೌಲರ್ಗಳೆದುರು ಮಂಡಿಯೂರಿ ನಿಂತರು. ರವೀಂದ್ರ ಜಡೇಜಾ(58 ರನ್) ಅವರನ್ನು ಬಿಟ್ಟರೆ ಎರಡನೇ ದಿನ ಪ್ರಮುಖ ಆಕರ್ಷಣೆಯಾಗಿದ್ದು ಇಶಾಂತ್ ಶರ್ಮಾ. ಆರಂಭದಿಂದಲೂ ಮೊಣಚಾದ ದಾಳಿ ನಡೆಸಿದ ಇಶಾಂತ್, ವಿಂಡೀಸ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಪೆರೆಡ್ ಕಳುಹಿಸಿದರು. 13 ಓವರ್ ಬೌಲಿಂಗ್ ಮಾಡಿದ ಇವರು 42 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಇನ್ನುಳಿದಂತೆ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ತಲಾ ಒಂದು ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರ್ ಭಾರತ ಪ್ರಥಮ ಇನಿಂಗ್ಸ್: 297 ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್: 59 ಓವರ್ಗಳಲ್ಲಿ 189/8 (ರೋಸ್ಟನ್ ಚೇಸ್ 48, ಶೀಮ್ರೊನ್ ಹೆಟ್ಮೇರ್ 35, ಶಾಯ್ ಹೋಪ್ 24, ಜಾನ್ ಕ್ಯಾಂಪ್ಬೆಲ್ 23; ಇಶಾಂತ್ ಶರ್ಮಾ 42 ಕ್ಕೆ 5, ಜಸ್ಪ್ರಿತ್ ಬುಮ್ರಾ 36 ಕ್ಕೆ 1, ಮೊಹಮ್ಮದ್ ಶಮಿ 41 ಕ್ಕೆ 1, ರವೀಂದ್ರ ಜಡೇಜಾ 58 ಕ್ಕೆ