ಸುಪ್ರೀಂ ಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ್ತ್ಘ್ಲೂ್ಣ್ಘು? !

ಬೆಂಗಳೂರು,ನ  07:    17 ಶಾಸಕರ ಅನರ್ಹತೆ ಪ್ರಕರಣದ ತೀರ್ಪನ್ನು ಸುಪ್ರಿಂ ಕೋರ್ಟ್  ಕಾಯ್ದರಿಸಿದ್ದು,ನವೆಂಬರ್ 8 ರಂದು ಸುಪ್ರೀಂ ಕೋರ್ಟ್ ನ ನ್ಯಾ.ರಮಣ ನೇತೃತ್ವದ  ತ್ರಿಸದಸ್ಯ ಪೀಠ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ತೀಪು ದೇಶದ  ಪ್ರಜಾಪ್ರತಿನಿಧಿ ಕಾಯ್ದೆಗೆ ಹೊಸ ಭಾಷ್ಯ ಬರೆಯುವ,ಹೊಸ ಆಯಾಮಕ್ಕೆ ನಾಂದಿಯಾಗುವ  ಸಾಧ್ಯತೆಯಿದೆ. ಈ ನಡುವೆ ತೀಪು ಪ್ರಕಟಿಸುವ ದಿನಾಂಕದಲ್ಲಿ ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ನ್ಯಾಯಾಂಗ ತಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ. ಅನರ್ಹ  ಶಾಸಕರ ಪರ ವಕೀಲರ ಪ್ರಕಾರ, ಶುಕ್ರವಾರ ಬಹುತೇಕ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು  ನೀಡುವ ಸಾಧ್ಯತೆ ಇದೆ. ಆದರೆ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಚುನಾವಣಾ  ಸಮಿತಿ ಸಭೆಯಲ್ಲಿ ಮಾತನಾಡಿದ ಆಡಿಯೋ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್  ಪರ ವಕೀಲರು ಮಂಡಿಸಿರುವ ಹಿನ್ನೆಲೆಯಲ್ಲಿ ತೀಪು ಹೊರ ಬೀಳುವುದು ಮತ್ತಷ್ಟು ವಿಳಂಬವಾ  ಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. ಅನರ್ಹ ಶಾಸಕರು ಸೇರಿದಂತೆ  ಬಿಜೆಪಿ, ಕಾಂಗ್ರೆಸ್ ನಾಯಕರಲ್ಲಿ ತೀಪು ಏನಾಗ ಬಹುದು ಎಂಬ ಆತಂಕ, ಗೊಂದಲ, ಕುತೂಹಲಗಳು  ಸುಳಿದಾಡುತ್ತಿದೆ. ಸುಪ್ರೀಂ ಕೋರ್ಟ್ ತೀಪು ಆಧರಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ  ಕಾರ್ಯತಂತ್ರಗಳ ನ್ನು ರೂಪಿಸುವ ಚಿಂತನೆಯಲ್ಲಿವೆ. ಇವೆಲ್ಲೂ ಅನರ್ಹತೆಯನ್ನು  ರದ್ದುಪಡಿಸಿದರೆ ಉಪ ಚುನಾವಣೆಯೇ ರದ್ದಾಗುವ ಸಂಭವೂ ಇದೆ ಎಂಬ ಮಾತುಗಳು ದೆಹಲಿಯ ಕಾನೂನು  ತಜ್ಞರ ವಲಯದಲ್ಲಿ ಮಾತ್ರ ಚರ್ಚೆ ಯಾಗುತ್ತಿದೆ. ಹಾಗಿದ್ದರೆ ಸುಪ್ರೀಂ ಕೋರ್ಟ್ ತೀರ್ಪುನ ಸಾಧ್ಯತೆಗಳು : 1.  ಅನರ್ಹತೆಯನ್ನು  ರದ್ದುಪಡಿಸಬಹುದು: ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಶಾಸಕರ ಅನರ್ಹತೆಯನ್ನು ಸುಪ್ರೀಂ  ಕೋರ್ಟ್ ರದ್ದುಪಡಿಸಬಹುದು. ಶಾಸಕರನ್ನು ಅನರ್ಹಗೊಳಿಸಿದ್ದೇ ತಪ್ಪು ಎಂದು ತೀಪು  ನೀಡಿದರೆ ಚುನಾವಣೆ ಅಧಿಸೂಚನೆಯನ್ನು ಚುನಾವಣೆ ಆಯೋಗ ಹಿಂದಕ್ಕೆ ಪಡೆಯಬೇಕಾಗುತ್ತದೆ.  ಅಥವಾ ತನ್ನಿಂತಾನೆ ರದ್ದಾಗು ತ್ತದೆ.ಆಗ ಎಲ್ಲಾ17 ಜನರೂ ಶಾಸಕರಾಗಿ  ಮುಂದುವರಿಯಲಿದ್ದಾರೆ. ಅವರು ಸಲ್ಲಿಸಿರುವ ರಾಜಿನಾಮೆಯನ್ನು ಮರು ಪರಿಶೀಲಿಸಿ ಎಂದು  ನ್ಯಾಯಪೀಠ ಹೊಸ ಸ್ಪೀಕರ್ ಗೆ ನಿರ್ದೇಶನ ನೀಡಬಹುದು.ಆಗ ಶಾಸಕರ ರಾಜೀನಾಮೆ ಸ್ಪೀಕರ್  ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಸೇರಲಿದೆ.ಸ್ಪೀಕರ್ ಅದನ್ನು ಅಂಗೀಕರಿಸದೆ ಹಾಗೆ ಯೇ  ಉಳಿಸಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು.ಈಗಾಗಲೆ ಬಿಜೆಪಿ ಸರಕಾ ರ ಅಸ್ಥಿತ್ವಕ್ಕೆ  ಬಂದಿರುವುದರಿಂದ ಈ ಸರ್ಕಾರಕ್ಕೆ ಸದ್ಯಕ್ಕೇನೂ ತೊಂದರೆ ಆಗುವು ದಿಲ್ಲ.ಇದು ರಾಜ್ಯ  ಇತಿಹಾಸದಲ್ಲೆ ವಿನೂತನ ವಿದ್ಯಮಾನಕ್ಕೆ ನಾಂದಿ ಹಾಡಲಿದೆ ಎಂಬ ಮಾತುಗಳು ಕೇಳಿ  ಬರುತ್ತಿದೆ. 2 .ಅನರ್ಹತೆಯನ್ನು ಎತ್ತಿ ಹಿಡಿಯಬಹುದು : ಸ್ಪೀಕರ್ ತೀರ್ಪನ್ನು  ಸುಪ್ರಿಂ ಕೋರ್ಟ್ ಎತ್ತಿ ಹಿಡಿ ಯಬಹುದು.ಜೊತೆಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು  ಅಡ್ಡಿಯಿಲ್ಲ ಎಂದರೆ ಅನರ್ಹ ಶಾಸಕರು ಮತ್ತಷ್ಟು ನಿರಾಳರಾಗುತ್ತಾರೆ.ಚುನಾವ ಣಾ  ಆಯೋಗದ  ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾಪಿಸದಂತೆ  ಉಪಚುನಾವಣೆ ಯಲ್ಲಿ ಸ್ಪರ್ಧಿಸುವ  ಅವಕಾಶ ಪಡೆದು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಬಹುದು. ಒಂದು ವೇಳೆ  ಅನರ್ಹತೆಯನ್ನು ಎತ್ತಿ ಹಿಡಿಯುವ ಜೊತೆಗೆ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು  ನಿರಾಕರಿಸಿದರೆ ಮತ್ತೆ ಅನರ್ಹ ಶಾಸಕರು ತಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿ  ಮತ್ತೆ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸ ಬಹುದು.ಅಲ್ಲದೆ ಪ್ರಕರಣದ ತೀಪು  ಹೊರಬೀಳುವವರೆಗೆ ಚುನಾವಣೆ ಮುಂದೂ ಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಬಹುದು.ಜೊತೆಗೆ  ತ್ರಿಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ  ಎನ್ನಲಾಗಿದೆ. 3. ಕೆಲವರ ಅನರ್ಹತೆ ಎತ್ತಿ ಹಿಡಿದು ಉಳಿದವರ ಅನರ್ಹತೆ  ರದ್ದುಪಡಿಸ ಬಹುದು : 12 ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಅನರ್ಹತೆಯನ್ನು ಎತ್ತಿ  ಹಿಡಿದು ಆನಂದ್ ಸಿಂಗ್, ಡಾ.ಸುಧಾಕರ್, ಎಂಟಿಬಿ ನಾಗರಾಜ್, ಶ್ರೀಮಂತ ಪಾಟೀಲ್,  ಆರ್.ಶಂಕರ್ ಅವರ ಅನರ್ಹತೆಯನ್ನು ರದ್ದುಪಡಿಸುವ ಸಾಧ್ಯತೆಯೂ ಇದೆ.ಒಂದು ವೇಳೆ ತ್ರಿಸದಸ್ಯ  ಪೀಠದಿಂದ ಇಂತಹದೊಂದು ಆದೇಶ ಹೊರಬಿ ದ್ದರೂ ಸರ್ಕಾರ ಸೇಫ್ ಆಗಲಿದೆ.5 ಜನರೂ ಶಾಸಕರಾಗಿ  ಉಳಿಯಲಿದ್ದಾರೆ.ವಿಪ ರ್ಯಾಸವೆಂದರೆ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ನಾಲ್ವರನ್ನು  ಉಚ್ಛಾಟನೆ ಮಾಡಿರುವುದರಿಂದ 5 ಜನರು ಪಕ್ಷೇತರರಾಗಿ ಉಳಿಯುವ ಮೂಲಕ ಬಿಜೆಪಿ ಸರ್ಕಾರದಲ್ಲಿ  ಸಚಿವರಾಗಿ ಬಹುಮತದ ಕೊರತೆಯನ್ನು ನೀಗಿಸಬಹುದು.     ಒಂದು ವೇಳೆ ಬೇರೆ ಪಕ್ಷದಿಂದ  ಆಯ್ಕೆಯಾಗಿದ್ದೇವೆ.ತಮಗೆ ಆ ಪಕ್ಷದ ಚಿಹ್ನೆ ಅಡಿ ಗೆದ್ದು ಬಂದೆವು ಎಂಬ ಆರೋಪ ಬೇಡವೆಂದರೆ  ಮತ್ತೆ ಶಾಸಕ ಸ್ಥಾನಕ್ಕೆ ರಾಜೀನಾ ಮೆ ನೀಡಿ ಉಪ ಚುನಾವಣೆಯಲ್ಲಿ ಗೆದ್ದು ಬರಲು  ಅವಕಾಶವಿದೆ ಎನ್ನಲಾಗಿದೆ. ಮುಂದುವರೆ ಅಗತ್ಯ ಬಿದ್ದರೆ ಮತ್ತೆ ರಾಜೀನಾಮೆ ಸಲ್ಲಿಸಿ ಸ್ಪೀಕರ್ ಮೂಲಕ ರಾಜೀನಾಮೆ ಅಂಗೀಕರಿಸಿ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಬರಬ ಹುದು.     4.ಸಂವಿಧಾನ  ಪೀಠಕ್ಕೆ ಪ್ರಕರಣ ವರ್ಗಾಯಿಸಬಹುದು: ಸ್ಪೀಕರ್ ಕಾರ್ಯವ್ಯಾಪ್ತಿ, ವಿಪ್ ಜಾರಿ,ಪಕ್ಷಾಂತರ  ನಿಷೇಧ ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿ ಸಲು ಸಂವಿಧಾನ ಪರಾಮರ್ಶಿ ನಡೆಸುವ  ಅಗತ್ಯತೆ ತ್ರಿಸದಸ್ಯ ಪೀಠದ ನ್ಯಾಯ ಮೂರ್ತಿಗಳಿಗೆ ಕಂಡು ಬಂದಲ್ಲಿ ಪ್ರಕರಣವನ್ನು  ಸಂವಿಧಾನ ಪೀಠಕ್ಕೆ ವರ್ಗಾಯಿಸಲು ಅವಕಾಶವಿದೆ ಎನ್ನಲಾಗಿದೆ. ಆದರೆ ಇದು ಅಪರೂಪ ಹಾಗೂ  ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ತ್ರಿಸದಸ್ಯ ಪೀಠ ಪ್ರಕರಣವನ್ನು ಸಂವಿಧಾನ  ಪೀಠಕ್ಕೆ ವರ್ಗಾಯಿಸಿ ಚುನಾವಣೆ ಯನ್ನು ಮುಂದೂಡುವ ಅನಿವಾರ್ಯತೆ ಸೃಷ್ಠಿಯಾಗಬಹುದು.ಆದರೆ  ಇದರ ಸಾಧ್ಯತೆ ತೀರಾ  ಕಡಿಮೆ ಎನ್ನಲಾಗಿದೆ.