ದೇವರ ಹಿಪ್ಪರಗಿ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2025-26ನೇ ಸಾಲಿನ ಕರ್ನಾಟಕ ಮುಂಗಡ ಪತ್ರ ಮಂಡನೆಯಾಗಿದೆ. ಕ್ಷೇತ್ರಕ್ಕೆ ದಿಂಡವಾರ ಮಾರ್ಗವಾಗಿ ನಾಲತವಾಡ (ಎಸ್.ಎಚ-41) ರಸ್ತೆ, ಹೊಸ ತಾಲೂಕಿನ ಪ್ರಜಾಸೌಧ ಬಜೆಟಿನಲ್ಲಿ ಅನುದಾನ ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ತಿಳಿಸುತ್ತೇನೆ.
ನಮ್ಮ ನೀರೀಕ್ಷೆ ರೈತರಿಗಾಗಿ ನೀರಾವರಿ, ರಸ್ತೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೆ, ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡದೇ ಇರುವುದು ಈ ಬಜೆಟ್ ನಿರಾಶೆಗೊಳಿಸಿದೆ.
ದೀನ ದಲಿತರ ಹಣವನ್ನು ಅವರ ಅಭಿವೃದ್ಧಿಗೆ ಬಳಸದೆ ಗ್ಯಾರೆಂಟಿಗಳಿಗೆ ಬಳಕೆ ಮಾಡಿರುವುದರಿಂದ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಬೆಲೆ ಏರಿಕೆ ಇಳಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಪ್ರತಿದಿನ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ.