ಪಾಟ್ನಾ, ಆಗಸ್ಟ್ 7 ಮಾಜಿ ವಿದೇಶಾಂಗ ಸಚಿವೆ , ದೆಹಲಿ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್.ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿ ಇದು ದೇಶಕ್ಕೆ ಆದ ದೊಡ್ಡ ನಷ್ಟ ಎಂದು ಬಣ್ಣಿಸಿದ್ದಾರೆ.
ಸ್ವರಾಜ್ ಅದ್ಭುತ ಭಾಷಣಕಾರಗಿ ಉತ್ತಮ ಸಂಸದೀಯ ಪಟುವಾಗಿ ಅದೆಲ್ಲಕ್ಕಿಂತಲೂ ಮಾನವ ಪ್ರೇಮಿಯಾಗಿ ಜನರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಅಪಾರ ಪ್ರತಿಭೆ ಹೊಂದಿದ್ದ ಅವರು ನಿರ್ವಹಿಸಿದ ಕೆಲಸ, ಪಾತ್ರಗಳು ಜನರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತವೆ. ಅವರ ಹಠಾತ್ ನಿಧನದಿಂದ ದೇಶ ಆಘಾತಕ್ಕೊಳಗಾಗಿದೆ, ಮೇಲಾಗಿ ಇದು ಸರಿಪಡಿಸಲಾಗದ ದೊಡ್ಡ ನಷ್ಟ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ .