ದೇವರಹಿಪ್ಪರಗಿ 19: ಪಟ್ಟಣದ ಜಡಿಮಠದ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀಗಳ ಪಟ್ಟಾಧಿಕಾರ ವರ್ಧಂತಿ ಮಹೋತ್ಸವಕ್ಕೆ ರಂಭಾಪುರಿ ಶ್ರೀಗಳಿಗೆ ಅಹ್ವಾನ ನೀಡಿದ ದೇವರಹಿಪ್ಪರಗಿ ಶ್ರೀಗಳು. ಪಟ್ಟಣದ ಜಡೆ ಮಠದ ಷ.ಬ್ರ ಶ್ರೀ ಜಡಿ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಟ್ಟಣದ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಕಲಕೇರಿಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಚಬನೂರ ಶ್ರೀಗಳು ಬುಧವಾರದಂದು ಬಾಳೆಹನ್ನೂರಿನ ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳನ್ನು ಭೇಟಿಯಾಗಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಶ್ರೀಗಳನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.