ಧಾರವಾಡ 13: ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಪರಿಚಯವಾಗುತ್ತದೆ. ಮಕರ ಸಂಕ್ರಾಂತಿ ಹಬ್ಬ ಸೂರ್ಯನಿಗೆ ಸಮರ್ಿತವಾದ ಹಬ್ಬ. ಇದು ಸಮೃದ್ಧಿಯ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಿಸಿ ಮಕರ ರಾಶಿಗೆ ಪ್ರವೇಶಿಸುವದರಿಂದ ಈ ಹಬ್ಬವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಂಕ್ರಾಂತಿ ಹಬ್ಬದಲ್ಲಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಂಕ್ರಾಂತಿ ಹಬ್ಬ ಕೇವಲ ಧಾರ್ಮಿಕವಾಗಿ ಅಲ್ಲದೇ ವೈಜ್ಞಾನಿಕ ದೃಷ್ಟಿಕೋನದಿಂದ ಪ್ರಾಮುಖ್ಯತೆ ಪಡೆದಿದೆ. ಇದು ಸಂಭಂದಗಳನ್ನು ಬೆಸೆಯುವ ಹಬ್ಬವಾಗಿದ್ದು, ಸಿಹಿ ಹಂಚುವ ಮೂಲಕ ಮಕ್ಕಳು ನಿಮ್ಮ ತಂದೆ-ತಾಯಿ, ಗುರುಗಳು ಹಾಗೂ ಗೆಳೆಯರೊಂದಿಗೆ ಭಾಂದವ್ಯವನ್ನು ಗಟ್ಟಿಯಾಗಿಸಿಕೊಳ್ಳಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲೆಂದು ಹಾರೈಸಿ, ಮಕ್ಕಳಿಗೆ ಕರಿ ಎರೆದು, ಹಬ್ಬದ ಊಟವನ್ನು ಉಣಬಡಿಸಿದರು.
ಹಬ್ಬದ ಪ್ರಯುಕ್ತ ಸಂಕ್ರಾಂತಿ ಸಂತೆಯನ್ನು ಸಹ ಆಯೋಜಿಸಲಾಗಿತ್ತು. ಹಬ್ಬಕ್ಕೆ ಬೇಕಾಗುವ ವಿವಿಧ ರೀತಿಯ ವಸ್ತುಗಳನ್ನು, ಆಹಾರ ಪಧಾರ್ಥಗಳನ್ನು ಸ್ವ-ಉದ್ಯೋಗ ಮಾಡುತ್ತಿರುವ ಮಹಿಳೆಯರು ವಿದ್ಯಾರ್ಥಿಗಳ ಸಹಾಯದಿಂದ ವಸ್ತುಗಳನ್ನು ಮಾರಾಟ ಮಾಡಿದರು. ಮಕ್ಕಳು ಸಾಂಸ್ಕತಿಕ ಉಡುಪುಗಳನ್ನು ತೊಟ್ಟು, ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯೆ ಸಾಧನಾ ಎಸ್, ಜೆ.ಎಸ್.ಎಸ್ ಐ.ಟಿ.ಐ ನ ಶ್ರೀ ಮಹಾವೀರ ಉಪಾದ್ಯೆ, ಪಾಲಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.