ರೋಟಾ ವೈರಸ್ ಲಸಿಕಾ ಪರಿಚಯ ಕಾರ್ಯಾ ಗಾರ

ಬೆಳಗಾವಿ, 24: ಬೆಳಗಾವಿ ಜಿಲ್ಲೆಯಲ್ಲಿ ಪೋಲಿಯೋ, ಬಾಲಕ್ಷಯ, ಮಿಜಲ್ಸ್ ರೂಬೆಲ್ಲಾ (ಗೋಬ್ಬರ), ನಾಯಿಕೆಮ್ಮು, ಗಂಟಲು ಮಾರಿ, ಧನರ್ುವಾಯು, ಇನ್ಪ್ಲೋಯಂಜಯಾ, ಕಾಮಾಲೆ,   9 ರೋಗಗಳ ವಿರುದ್ದ ಲಸಿಕೆಯನ್ನು ನೀಡಲಾಗುತ್ತಿದ್ದು ಈಗ ಹೊಸದಾಗಿ 10ನೇಯ ಲಸಿಕೆಯಾಗಿ ರೋಟಾ ವೈರಸ್ ಲಸಿಕೆಯನ್ನು ಅಗಷ್ಟ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ: ಶಶಿಕಾಂತ ವ್ಹಿ ಮುನ್ಯಾಳ ಅವರು ಹೇಳಿದರು.

ಇಂದು (ಜು.24) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾ ಲಯದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ರೋಟಾ ವೈರಸ್ ಲಸಿಕೆಯನ್ನು ಅಳವಡಿಸುವ ಕುರಿತು ಜಿಲ್ಲಾ ಮಟ್ಟದ ಕಾಯರ್ಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆದು ಬಂದ ದಾರಿಯ ಕುರಿತು ಮಾತನಾಡುತ್ತಾ ಈಗಾಗಲೇ ಮಕ್ಕಳಲ್ಲಿ ಉಂಟಾಗುವ ಗಂಭೀರ ಸ್ವರೊಪದ ಬೇದಿಯಿಂದ ರಕ್ಷಣೆ ಪಡೆಯಲು ಈ ಲಸಿಕೆಯು ಉಪಯೋಗಕಾರಿಯಾಗಿದೆ ಎಂದು ತಿಳಿಸಿದರು. 

ವೇದಿಕೆಯಲ್ಲಿ ಡಾ.ಸಿದ್ದಲಿಂಗಯ್ಯಾ ಎಸ್.ಎಮ್ ಓ ಬೆಳಗಾವಿ, ಡಾ.ಪ್ರವೀಣಸ್ವಾಮಿ ಯು.ಎನ್.ಡಿ.ಪಿ ಬೆಳಗಾವಿ, ಡಾ.ಶಿವಾನಂದ ಮಾಸ್ತಿಹೊಳಿ ಮುಖ್ಯ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಕಿತ್ತೂರ, ಡಾ.ಸಾವಿತ್ರಿ ಬೆಂಡಿಗೇರಿ ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ.ಬಿ.ಎನ್ತುಕ್ಕಾರ ಜಿಲ್ಲಾ ಸವರ್ೇಕ್ಷಣಾಧಿಕಾರಿಗಳು, ಡಾ. ಅನಿಲ ಕೊರಬು ಜಿಲ್ಲಾ ಕ್ಷಯರೋಗ ಅಧಿಕಾರಿಗಳು ಮತ್ತು ಡಾ.ಎಮ್.ಎಸ್.ಪಲ್ಲೆದ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳು ಉಪಸ್ಥಿತರಿದ್ದರು.

ಕಾಯರ್ಾಗಾರದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ಸಹಾಯಕರು. ಪಾಮರ್ಾಸಿಸ್ಟ ಮತ್ತು ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದರು.

ಪ್ರಾರಂಭದಲ್ಲಿ ಡಾ.ಐ.ಪಿ ಗಡಾದ ಜಿಲ್ಲಾ ತಾಯಿ ಮಕ್ಕಳ ಆರೋಗ್ಯ ಅಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿ ರೋಟಾ ವೈರಸ್ ಲಸಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪಿ ಯಲಿಗಾರ ಪ್ರಬಾರಿ ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿಗಳು ಬೆಳಗಾವಿ ಇವರು ವಂದಿಸಿದರು. ಸಿ.ಜಿ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.