ಹುಬ್ಬಳ್ಳಿ 21: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ರಿಯಾಯಿತಿ ಸೌಲಭ್ಯಕ್ಕಾಗಿ ವಿಕಲಚೇತನರಿಗೆ ಆನ್‌ಲೈನ್‌ನಲ್ಲಿ “ಡಿಜಿಟಲ್ ಗುರುತಿನ ಚೀಟಿ” (ಋ) ನೀಡುವಿಕೆಯನ್ನು ಪರಿಚಯಿಸಿದೆ.
ಇನ್ನು ಮುಂದೆ ವಿಕಲಚೇತನರು ರೈಲ್ವೆ ಕಚೇರಿಗಳಿಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಅನುಮೋದಿಸಿದ ನಂತರ ಡಿಜಿಟಲ್ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನೋಂದಣಿಗಾಗಿ http://divyangjanid.indianrail.gov.in ಗೆ ಭೇಟಿ ನೀಡಿ. ಅರ್ಜಿ ಪ್ರಕ್ರಿಯೆಗೆ ಕುರಿತು ಸಹಾಯ ಮಾಡಲು ಬಳಕೆದಾರ ಕೈಪಿಡಿ ಸಹ ವೆಬಸೈಟ್ ನಲ್ಲಿ ಲಭ್ಯವಿದೆ.ರೈಲಿನಲ್ಲಿ ಪ್ರಯಾಣಿಸಲು ರಿಯಾಯಿತಿ ಸೌಲಭ್ಯಕ್ಕಾಗಿ ಸಹಾಯಕರ (ಬೆಂಗಾವಲು) ಅಗತ್ಯವಿರುವ ಅಂಗವಿಕಲರು /ಪಾರ್ಶ್ವವಾಯು (Paraplegic) ಪೀಡಿತ ವ್ಯಕ್ತಿಗಳು, ಬೌದ್ಧಿಕ ವಿಕಲಚೇತನರು, ಸಂಪೂರ್ಣ ಶ್ರವಣ ಮತ್ತು ಮಾತಿನ ದುರ್ಬಲತೆ ಹೊಂದಿರುವ ವ್ಯಕ್ತಿಗಳು (ಎರಡೂ ಸ್ಥಿತಿಗಳು ಒಟ್ಟಿಗೆ), 90ಅ ಅಥವಾ ಅದಕ್ಕಿಂತ ಹೆಚ್ಚಿನ ದೃಷ್ಟಿಹೀನತೆ ಹೊಂದಿರುವ ಅಂಧ ವ್ಯಕ್ತಿಗಳು ಈ ಡಿಜಿಟಲ್ ಐಡಿ ಕಾರ್ಡ್ ಪಡೆಯಬಹುದು.
ರಿಯಾಯಿತಿ ಟಿಕೆಟ್‌ನ್ನು ಟಿಕೆಟ್ ಕೌಂಟರ್, IRCTC ವೆಬ್‌ಸೈಟ್, ಗಖಿಖ ಅಪ್ಲಿಕೇಶನ್ ಬಳಸಿ ಪಡೆಯಬಹುದು. ಬಳಕೆದಾರರರು https://pgportal.gov.in ನಲ್ಲಿ ದೂರುಗಳನ್ನು ನೋಂದಾಯಿಸಬಹುದು.ಅರ್ಹ ಅರ್ಜಿದಾರರು ತಮ್ಮ ಗುರುತಿನ ಚೀಟಿ, ಜನ್ಮ ದಿನಾಂಕದ ಪ್ರಮಾಣಪತ್ರ (ಪೂರಕ) , ವಿಳಾಸ ದಾಖಲೆ, ಸರ್ಕಾರಿ ವೈದ್ಯರು ನೀಡುವ ಅಂಗವೈಕಲ್ಯ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ವೈಬಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು (ದಾಖಲೆಗಳು PDF/JPEG/JPG/PNG ಸ್ವರೂಪದಲ್ಲಿ 600KB ಗಿಂತ ಕಡಿಮೆ ಇರಬೇಕು). ದಾಖಲೆಗಳ ಯಶಸ್ವಿ ಪರೀಶೀಲನೆಯ ನಂತರ, ಸ್ವಯಂಚಾಲಿತ ಸಂದೇಶ ತಲುಪುತ್ತದೆ. ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಕ್ ಮೂಲಕ ಸಹ ತಿಳಿಯಬಹುದಾಗಿದೆ.