ಎಲ್ಲ ಶಾಲೆಗಳಲ್ಲಿ ವಿದ್ಯಾಥರ್ಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಲಿ: ಡಾ.ಸಿದ್ಧರಾಮ ಶ್ರೀಗಳು


ಬೆಳಗಾವಿ 03: ಇಡಿ ಜಗತ್ತಿನಲ್ಲೆ ಮಾದರಿಯಾಗಿರುವ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿದ್ಯಾಥರ್ಿಗಳಿಗೆ ಪರಿಚಯಿಸುವ ಕಾರ್ಯ ಎಲ್ಲ ಶಾಲೆಗಳಲ್ಲಿ ನಡೆಯಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರಿಂದು ಸಿದ್ದರಾಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗ ಹಮ್ಮಿಕೊಂಡಿದ್ದ ಶಾಲಾ ಸಂಸತ್ತು ಹಾಗೂ ಸಾಂಸ್ಕೃತೀಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡುತ್ತಿದ್ದರು. ಸಂಸತ್ತು ಅದರ ಕಾರ್ಯ ವಿಧಾನ ಆಡಳಿತ ವ್ಯವಸ್ಥೆ ಮುಂತಾದ ವಿಷಯಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಪ್ರಾಮುಖ್ಯವಾಗಿದೆ ಎಂದರು.

ಪಠ್ಯ ಅಷ್ಟೆ ಅಲ್ಲ ಪಠ್ಯೇತರ ಚಟುವಟಿಕೆಗಳು ಸಹ ವ್ಯಕ್ತ್ತಿತ್ವ ವಿಕಸನದಲ್ಲಿ ಪ್ರಮುಖ ಕಾರ್ಯ ವಹಿಸುತ್ತವೆ ಎಂದ ಅವರು ಕ್ರೀಡೆ,ಕಲೆ,ಸಾಹಿತ್ಯ,ಸಾಂಸ್ಕೃತೀಕ ಸಂಗೀತ ಮುಂತಾದ ಚಟುವಟಿಕೆಗಳಿಂದ ಮಾನವೀಯ ಮೌಲ್ಯಗಳ ವೃದ್ಧಿಗೆ ಅನುಕೂಲವಾಗುತ್ತದೆ,ಇದರಿಂದ ಸಮಾಜದ ವಿವಿಧ ಕ್ಷೇತ್ರಗಳ ಸಂಪರ್ಕ, ಸಮಾಜದ ಸಹಾಯ, ಸಹಕಾರ, ಸಹಯೋಗವಾಗುವುದರೊಂದಿಗೆ ವ್ಯಕ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಈ ಎಲ್ಲ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಅಂದಾಗಲೇ ವಿದ್ಯಾಥರ್ಿಗಳ ವ್ಯಕ್ತಿತ್ವ ವಿಕಸನಗೊಂಡು ಅವರು ಸನ್ಮಾರ್ಗದಲ್ಲಿ ನಡೆದು ಶ್ರéೇಷ್ಠ  ನಾಗರೀಕರಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಬೆಳಗಾವಿ ನಗರ ವಲಯದ ಬಿಇಓ ಕೆ.ಡಿ ಬಡೀಗೇರ ಅವರು ಮಾತನಾಡಿ ಅತ್ಯುತ್ತಮ ಶಿಕ್ಷಣ ದೊರೆತಾಗ ಮಾತ್ರ ಜೀವನ ಸುಂದರವಾಗಲು ಸಾಧ್ಯ. ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದಾಗ ಮಾತ್ರ ಉತ್ತಮವಾದ ಸಾಧನೆ ಸಾದ್ಯವಾಗುತ್ತದೆ ಎಂದರು. ಶೈಕ್ಷಣಿಕ ಚಟುವಟಿಕೆಯ ಜೊತೆ ಇನ್ನಿತರ ವಿಷಗಳ ಕುರಿತು ಆಸಕ್ತಿಯಿಂದ ಭಾಗಿಯಾಗಬೇಕು, ಆಸಕ್ತಿಯಿಂದ ಪಾಲ್ಗೊಳ್ಳಬೇಕು ಅಂದಾಗ ಮಾತ್ರ ಉತ್ತಮವಾದ ಫಲಿತಾಂಶ ಸಿಗಲು ಸಾಧ್ಯವೆಂದರು.

ಈ ಬಾರಿ ಜಿಲ್ಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಬರುವಂತಾಗಬೇಕು. ಅದಕ್ಕಾಗಿ ಎಲ್ಲರೂ ಸೇರಿ ಪ್ರಯತ್ನಸಬೇಕು. ಕಳೆದ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ರಾಜ್ಯದಲ್ಲಿ ಬೆಳಗಾವಿ 6 ನೇ ಸ್ಥಾನದಲ್ಲಿತ್ತು. ಈ ಬಾರಿ 1 ನೇ ಸ್ಥಾನಕ್ಕೆ ಪ್ರಯತ್ನಿಸೋಣ, ಪೂರಕ ಪರೀಕ್ಷೆಯಲ್ಲಿ ಒಂದನೇ ಸ್ಥಾದಲ್ಲಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಅಗತ್ಯ ಎಂದರು.

ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಉಳ್ಳಾಗಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಥರ್ಿಗಳು ಉತ್ತಮ ಅಂಕಗಳಿಕೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದರು. ನಗರವಲಯದ ಬಿಇಓ ಕಚೇರಿ ಶಿಕ್ಷಣ ಸಂಯೋಜಕ ಆರ್.ಎನ್.ಜವಳೇಕರ ಸಾಂದಭರ್ಿಕವಾಗಿ ಮಾತನಾಡಿದರು.

ಪ್ರಜ್ವಲ ಸಂಬರಗಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಂದ ಅಣುಕು ಸಂಸತ್ತಿನ ಪ್ರದರ್ಶನ ನಡೆಯಿತು. ಪ್ರಧಾನ ಮಂತ್ರಿಯಾಗಿ ಯಶ್ ಅರಭಾವಿ, ವಿರೋಧ ಪಕ್ಷದ ನಾಯಕನಾಗಿ ಕಾತರ್ಿಕ ಉಳವಿ ಭಾಗಿಯಾಗಿದ್ದರು. ಅಕ್ಷತಾ ಹಡಪದ ಭರತ ನಾಟ್ಯ ಪ್ರದರ್ಶನ, ಕೀತರ್ಿ ಕರಿಕಟ್ಟಿ ಹಾಗೂ ಸಂಗಡಿಗರಿಂದ ಸಾಮೂಹಿಕ ನೃತ್ಯ ನಡೆಯಿತು. ಉಪ ಪ್ರಾಚಾರ್ಯ ಕೆ.ಬಿ.ಹಿರೇಮಠ ಅವರು ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್.ಮಾನೆ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ಕೆ.ಸಿ.ಶಿವಕುಮಾರ ವಂದಿಸಿದರು.

04-08-18 ರ ಕಾರ್ಯಕ್ರಮ

ಸಿದ್ದರಾಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 2018-19 ನೇ ಸಾಲಿ ಪಿಯುಸಿ ವಿದಾಥರ್ಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ದಿ. 4ರಂದು ಮುಂಜಾನೆ 9-30 ಗಂಟೆಗೆ ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಭುದೇವ ಸಭಾಗೃಹದಲ್ಲಿ ನಡೆಯಲಿದೆ.

ಸಮಾರಂಭದ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮಿಜಿಯವರು ವಹಿಸಲಿದ್ದಾರೆ. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಉಳ್ಳಾಗಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿ ಆರ್.ರಾಮಚಂದ್ರನ್, ಉಪ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಂಶ್ಥಯ ಕಾರ್ಯದಶರ್ಿ ಬಿ.ಎಸ್.ತೋರಣಗಟ್ಟಿ ಉಪಸ್ಥಿತರಿರಲಿದ್ದಾರೆ.