ಅಂತರಾಜ್ಯ ನೀರು ವರ್ಗಾವಣೆ ಇತಿಹಾಸದಲ್ಲೇ ಪ್ರಥಮ: ಸಚಿವ ಪಾಟೀಲ್

ಗದಗ 29: ಕಳಸಾ ನಾಲೆ ಹಾಗೂ ಬಂಡೂರಿ ನಾಲೆಯನ್ನು ಮಲಪ್ರಭಾ ನದಿಗೆ ಜೋಡಿಸುವ ಕಾಮಗಾರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ಕುರಿತಂತೆ ಐತೀಪರ್ಿನ ಸೂಚನೆಯಂತೆ ಕೇಂದ್ರ ಸರ್ಕಾರ ಅಂತರಾಜ್ಯಗಳ ನೀರನ್ನು ವರ್ಗಾಯಿಸಲು ಹೊರಡಿಸಿರುವ ಗೆಜೆಟ್ ಅಧಿಸೂಚನೆ ಭಾರತದ ಇತಿಹಾಸದಲ್ಲೇ ಪ್ರಥಮ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ನುಡಿದರು.

ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಯಡಿ ಸುಮಾರು 1ಕೋಟಿ ರೂ. ವೆಚ್ಚದಲ್ಲಿ ರೋಣ ತಾಲೂಕಿನ ಅಬ್ಬಿಗೇರಿ, ಯರೇಬೇಲೆರಿ ಕುರುಡಗಿ ಹಾಗೂ ಗುಜಮಾಗಡಿಯ 1.25ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 13.42 ಟಿಎಂಸಿ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಅನುಮತಿ ನೀಡಿದ್ದು, ಇದರಿಂದ ಈ ಭಾಗದ ಪ್ರತಿಶತ 99%ರಷ್ಟು ಹಳ್ಳಿಗಳು ನೀರಾವರಿ ಸೌಲಭ್ಯ ಪಡೆದುಕೊಳ್ಳಲಿವೆ. ಈ ನೀರಿನಿಂದ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದು ಎಂದರು. ಸಕರ್ಾರಕ್ಕೆ ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಹಾಗೂ ಸೂಕ್ತವಾದ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ನುಡಿದರು.

ಗ್ರಾಮದ ಸಕರ್ಾರಿ ಶಾಲೆಯ ಎರಡು ಕೊಠಡಿಗಳು ದುರಸ್ಥಿಯಲ್ಲಿದ್ದು, ನೂತನ ಕಟ್ಟಡಗಳನ್ನು ಮುಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಬಳಿಕ ಮಾತನಾಡಿದ ಅವರು, ಮಾರ್ಚ್  ತಿಂಗಳ ಬಜೆಟ್ ಅಧಿವೇಶನದ ಬಳಿಕ ಸೂಕ್ತವಾದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಬಿ.ಹಂಗರಗಿ, ಉಮೇಶ್ಗೌಡ ಪಾಟೀಲ್, ವಸಂತ ಮೇಟಿ, ಶೇಖಣ್ಣ ಹುಲಗೂರ, ಪ್ರದೀಪ ನವಲಗುಂದ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ, ಕೃಷ್ಣಾಜಿ ದೇಶಪಾಂಡೆ, ವೀರಣ್ಣ ಸವಡಿ, ಶಿಡ್ಲಪ್ಪ ಪೂಜಾರ, ಎಚ್.ಬಿ.ಕೇಲೂರ ಹಾಗೂ ಗ್ರಾಮದ ಗಣ್ಯರು ಇದ್ದರು.