ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ;ಹೆಣ್ಣು ಅಬಲೆಯಲ್ಲ ಸಬಲೆ
International Women's Day; Women are not helpless, they are powerful
ಲೋಕದರ್ಶನ ವರದಿ
ಯಮಕನಮರಡಿ 14 : -ಸ್ಥಳೀಯ ಯಮಕನಮರಡಿ ವಿದ್ಯಾವರ್ಧಕ ಸಂಘದ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ದಿನಾಂಕ: 13/03/2026 ರಂದು ಮಹಿಳಾ ಸಬಲೀಕರಣ ಘಟಕ ಹಾಗೂ ವಿವಿಧ ಘಟಕಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಖ್ಯಾತ ಗೃಹ ಉದ್ಯಮಿಗಳಾದ ಮೀನಾಕ್ಷಿ. ಮಿಶ್ರಿಕೋಟಿಯವರು ಆಗಮಿಸಿದ್ದರು. ಸಮಾಜದಲ್ಲಿ ಮಹಿಳೆಯರು ಎಲ್ಲರಂತೆ ತಲೆ ಎತ್ತಿ ಬದುಕಬೇಕು. ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಷ್ಟಗಳು ಬಂದರೂ ಸಹ ಎದುರಿಸಿ ನಿಲ್ಲಬೇಕೆಂದು ತಿಳಿಸಿದರು. ಧೈರ್ಯವನ್ನು ಕಳೆದುಕೊಳ್ಳದೇ ಮನಸ್ಸು ಮಾಡಿ ಕುಗ್ಗದೇ ತಮಗಿರುವ ಆಸಕ್ತಿ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಉತ್ತಮ ಜೀವನ ಸಾಗಿಸಬೇಕೆಂದು ತಮ್ಮನ್ನು ಉದಾಹರಣೆಯನ್ನಾಗಿಸಿ ಪ್ರೇರೆಪಿಸಿದರು. ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಪರಿಶ್ರಮದಿಂದಲೇ ಬಡತನಕ್ಕೆ ಮಹಿಳೆಯರು ಅಂತ್ಯ ಹಾಡಬೇಕೆಂದು ತಿಳಿಸಿದರು.
ಪದವಿ ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಮಹಿಳಾ ದಿನಾಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಜೆ.ಎನ್. ಅವಾಡೆಯವರು ಮಾತನಾಡುತ್ತಾ ಹೆಣ್ಣು ಸಮಾಜದ ಕಣ್ಣು, ಹೆಣ್ಣು ಮಕ್ಕಳು ಸಮಾಜದ ಅಮೂಲ್ಯ ಆಸ್ತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯ. ವಿ. ಸಂಘದ ಸದಸ್ಯೆಯರಾದ ಪೂಜಾ. ರ. ಹಂಜಿಯವರು ವಹಿಸಿದ್ದರು. ಪ್ರಾಚಾರ್ಯರಾದ ಡಾಽಽ ಎ. ಎಸ್. ಗುತ್ತಿ, ಸರ್ವ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ವಪ್ನಾ ತೇರಣಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ. ಲಕ್ಷ್ಮೀ. ಪಾಶ್ಚಾಪುರಿ ಸ್ವಾಗತಿಸಿದರು. ಕುಮಾರಿ. ಸುಚಿತ್ರಾ ತೇಗೂರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 