ರಾಣಿ ಯಮಕ್ಕನ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ

International Women's Day celebrated in Rani Yamakkana village

ಲೋಕದರ್ಶನ ವರದಿ 

ರಾಣಿ ಯಮಕ್ಕನ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ 

ಯಮಕನಮರಡಿ 21: ಯಮಕನಮರಡಿ 20: ಸ್ಥಳೀಯ ಸಂಜೀವಿನಿ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ದಿ.20 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  

ಬೆಳಗಾವಿ ಎಚ್ ಆಯ ವ್ಹಿ ಆಶ್ರಯ ಪೌಂಡೇಶನ ನಾಗರತ್ನಾ ರಾಮಗೌಡ ಇವರು ಆಗಮಿಸಿ ಮಹಿಳಾ ಸಬಲಿಕರಣ ಹಾಗೂ ಮಹಿಳೆಯನ್ನು ಕೀಳು ಮಟ್ಟದಲ್ಲಿ ಕಾಣುವುದನ್ನು ಹೋಗಲಾಡಿಸಲು ನಾನು ಯಶಸ್ವಿಯಾಗಿ ಪ್ರಯತ್ನ ಮಾಡಿದ್ದೇನೆ. ನನ್ನ ಬಾಲ್ಯದಲ್ಲ ಬಾಲ್ಯವಿವಾಹ ಮಾಡಿ ನನಗೆ ನೋವನ್ನುಂಟುಮಾಡಿದ ಘಟನೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಜಗತ್ತಿಗೆ ಕಂಟಕ ಪ್ರಾಯವಾದ ಎಚ್ ಐ ವ್ಹಿ ಬಾಧೆಯನ್ನು ನಾನು ಸ್ವತಃ ಅನುಭವಿಸಿ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದೇನೆ. ಶಕ್ತಿ ಸ್ವರೂಪಿಯಾದ ಮಹಿಳೆಯ ಧೈರ್ಯ ಮತ್ತು ಸಾಧನೆಯಿಂದ ಎಲ್ಲವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ತಮ್ಮ ಎಚ್ ಐ ವ್ಹಿ ಪೌಂಡೆಶನ್‌ದಲ್ಲಿ ಈಗಾಗಲೇ ಉಚಿತ ಶಿಕ್ಷಣ ನೀಡಲು ಪ್ರಾರಂಭಿಸಿ ಅವರಿಗೆ ಮಾರ್ಗದರ್ಶನ ನಿಡುತ್ತಿದ್ದೇನೆ ಎಂದು ಹೇಳಿದರು.  

ಅದರಂತೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎಚ್ ಓ ಡಿ ಡಾ. ಸಣ್ಣಪಾಪಮ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷಿಯಲ್ಲಿ ಸಾಧನೆ ಮಾಡಲು ಮಹಿಳೆಯರು ಮುಂದಾಗಬೇಕು ಎಂದು ಹೇಳಿದರು.  

ಸಾನಿಧ್ಯವನ್ನು ಸ್ಥಳೀಯ ಶೂನ್ಯ ಸಂಪಾಧನಾ ಹುಣಸಿಕೊಳ್ಳಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ವಹಿಸಿ ಮಾತನಾಡುತ್ತಾ ಮಹಿಳೆಯರ ಸಾಧನೆ ಅಪಾರವಾದದ್ದು. ಯಮಕನಮರಡಿ ಗ್ರಾಮದ ಸ್ಥಾಪಕಿ ರಾಣಿ ಯಮಕ್ಕ ದೇಸಾಯಿ ಅವರು ಯಮಕನಮರಡಿ ಗ್ರಾಮಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬೇಕು ಎಂದು ಹೇಳಿದರು. ಅಲ್ಲದೆ ರಾಷ್ಟ್ರಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಜಾನ್ಷಿ ಲಕ್ಷ್ಮೀಬಾಯಿ, ಒನಕೆ ಓಬ್ಬವ್ವ ಮುಂತಾದವರು ಆಳಿದ ನಾಡಿನಲ್ಲಿ ತಾವುಗಳು ಸಹಿತ ಪ್ರತಿಯೊಂದು ಕಾರ್ಯದಲ್ಲಿ ಸಾಧಕರಾಗಬೇಕು ಎಂದು ಕರೆ ನೀಡಿದರು. 

ಸಂಜೀವಿನಿ ಮಹಿಳಾ ಒಕ್ಕೂಟದ ಸರ್ವ ಸದಸ್ಯರು ಹಾಗೂ ಸಂಕೇಶ್ವರದ ಮಹಿಳಾ ಸಾಹಿತಿಗಳಾದ ಹಮೀದಾ ಬೇಗಂ ದೇಸಾಯಿ ಮತ್ತು ಸ್ಥಳೀಯ ಗ್ರಾಂ ಪಂ ಅಧ್ಯಕ್ಷ ಆಸ್ಮಾ ಫಣಿಬಂದ ಯುವಧುರೀಣರಾದ ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಗೀರಿಶ ಮಿಶ್ರೀಕೋಟಿ ಉಪಸ್ಥಿತರಿದ್ದರು. 

ಯಮಕನಮರಡಿ ಪೋಲಿಸ ಠಾಣೆ ಸಿ ಪಿ ಐ ಜಾವೇದ ಮುಸಾಪೂರಿ ಕಾರ್ಯಕ್ರಮಕ್ಕೆ ಭೆೆಟ್ಟಿ ನೀಡಿ ಸನ್ಮಾನ ಸ್ವೀಕರಿಸಿದರು. ವಿವಿಧ ಮಹಿಳಾ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮನರಂಜನೆ ಕಾರ್ಯಕ್ರಮ ನಡೆಸಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಹಾಯಕ ಸಹಾಯಕಿಯರು ಉಪಸ್ಥಿತರಿದ್ದರು.