ರಾಜ್ಯದಿಂದ ವಲಸೆ ಬಂದಿರುವಂತಹ ಕುಲಕಸಬುದಾರರ ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸುವುದುರ ಮೂಲಕ ವಿಶ್ವ ಮಹಿಳಾ ದಿನಾಚರಣೆ

ರಾಜ್ಯದಿಂದ ವಲಸೆ ಬಂದಿರುವಂತಹ ಕುಲಕಸಬುದಾರರ ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸುವುದುರ ಮೂಲಕ ವಿಶ್ವ ಮಹಿಳಾ ದಿನಾಚರಣೆ International Women's Day celebrated by creating awareness about education among the children of tri

ಲೋಕದರ್ಶನ ವರದಿ 

ಹಾವೇರಿ 15: ನಗರದ ಪಿ.ಬಿ ರಸ್ತೆಯ ಪಕ್ಕದಲ್ಲಿ ಬೇರೆ ರಾಜ್ಯದಿಂದ ವಲಸೆ ಬಂದಿರುವಂತಹ ಕುಲಕಸಬುದಾರರ ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸುವುದುರ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಧಾರವಡ ಜಿಲ್ಲಾ ಘಟಕ, ಹಾವೇರಿ ಜಿಲ್ಲಾ ಹಾಗೂ ತಾಲ್ಲೂಕಾ ಘಟಕದ ವತಿಯಿಂದ ವಿಶೇಷವಾಗಿ ಆಚರಣೆ ಮಾಡಲಾಯಿತು. ವಲಸೆ ಬಂದಂತಹ ಮಕ್ಕಳಿಗೆ ನೋಟ ಪುಸ್ತಕ, ಪೆನ್ನು ಮತ್ತು ಹಣ್ಣುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ಗೀತಾ ಸುತ್ತಕೋಟಿ ತಾಲ್ಲೂಕಾ ಅಧ್ಯಕ್ಷರಾದ ಅಕ್ಕಮಹಾದೇವಿ ನೀರಲಗಿ, ತಾಲ್ಲೂಕಾ ಕೋಶಾಧ್ಯಕ್ಷರಾದ ದಾಕ್ಷಾಯಿಣಿ ವಾಲ್ಮಿಕಿ ಹಾಗೂ ಪದಾಧಿಕಾರಿಗಳಾದ ಪದ್ಮಾವತಿ ಕಲ್ಲೂ, ಸದಸ್ಯರಾದ ರೂಪಾ ಸಜ್ಜನ, ಸ್ವೇತಾ ಹಾವನೂರ, ಬಿಷ್ಟಮ್ಮ ಹಿರೇಮಠ, ಆಲದಮ್ಮ, ಇಪ್ಪಿಕೊಪ್ಪ ಇತರಿದ್ದರು.